ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಧಣಿಗಳ ಕಣ್ಣು ಸಿಇಸಿ ವರದಿಯ ಮ್ಯಾಲೆ

By Rohini Bellary
|
Google Oneindia Kannada News

Supreme Court of India
ಬಳ್ಳಾರಿ, ಏ. 15 : ಕೇಂದ್ರ ಉನ್ನತಾಧಿಕಾರಿ ಸಮಿತಿ (ಸಿಇಸಿ) ಸುಪ್ರೀಂ ಕೋರ್ಟ್‌ನ ಗ್ರೀನ್‌ಬೆಂಚ್‌ಗೆ ಶುಕ್ರವಾರ ಯಾವುದೇ ಕ್ಷಣದಲ್ಲಿ ವರದಿ ಸಲ್ಲಿಸಲಿದೆ. ಈ ವರದಿಯಲ್ಲಿ 28 ಗಣಿ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಸಿಇಸಿ ಗ್ರೀನ್‌ಬೆಂಚ್‌ಗೆ ಸಲ್ಲಿಸಲಿರುವ ವರದಿಯೇ 850 ಪುಟಗಳಷ್ಟಿದೆ. ಈ ವರದಿಯಿಂದಾಗಿ ತಮ್ಮ ಗಣಿ ವ್ಯವಹಾರ ಅನಿಶ್ಚಿತವಾಗಿ ಸ್ಥಗಿತಗೊಳ್ಳಲಿದೆ ಎಂದು ಆತಂಕಕ್ಕೀಡಾಗಿರುವ ಗಣಿ ಉದ್ಯಮಿಗಳು ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಮುಂದಿನ ಕಾನೂನು ಸಮರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಿಇಸಿಯ ಇಂದಿನ ವರದಿ ಬಳ್ಳಾರಿ ಜಿಲ್ಲೆಯ ಗಣಿ ಉದ್ಯಮವನ್ನೇ ತಲ್ಲಣಗೊಳಿಸಿದೆ. ಅಕ್ರಮ - ಅನಧಿಕೃತ ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್.ಆರ್. ಹಿರೇಮಠ್ ಅವರು ಪರಿಸರದ ಉಳಿವಿಗಾಗಿ ನಡೆಸುತ್ತಿರುವ ಹೋರಾಟದ ಫಲವೇ ಇದು.

English summary
Central Empowered Committee (CEC) which is probing illegal mining in Bellary, Karnataka will be submitting report to Supreme Court of India on April 15. If the report is accepted 28 mining companies in Karnataka will be black listed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X