ಪುರುಷರು ಸಲಿಂಗಿಗಳಾಗಲಿದ್ದಾರೆ: ಫಾರೂಖ್ ಅಬ್ದುಲ್ಲಾ ಭವಿಷ್ಯ
ನವದೆಹಲಿ,
ಏ.14: ಮುಂದೊಂದು ದಿನ ಮದುವೆ ಮಾಡಿಕೊಳ್ಳೋಣ ಅಂದರೆ ಹುಡುಗಿಯರೇ ಸಿಗುವುದಿಲ್ಲ. ಆಗ ಪುರುಷರು ಅವರವರೇ ... ಎಂದು ಕೇಂದ್ರ ಸಚಿವ ಮಹಾಶಯ, ಕಾಶ್ಮೀರದ ಕಲಿ ಫಾರೂಖ್ ಅಬ್ದುಲ್ಲಾ ಭವಿಷ್ಯ ನುಡಿದಿದ್ದಾರೆ. id="toptextpromo">'ಅಂತಹ
ದಿನಗಳು ದೂರವೇನೂ ಇಲ್ಲ. ಯುವತಿಯರು ಸಿಗದೆ ನಾವೆಲ್ಲ ಸಲಿಂಗಿಗಳಾಗಬೇಕಾಗುತ್ತದೆ. ಇದು ಶತಸಿದ್ಧ. ಇದ್ಯಾಕಪ್ಪಾ ಹೀಗೆ ಕೇಡುಗಾಲ ಎಂದರೆ ಮಹಿಳೆಯರ ಸಂಖ್ಯೆ ದಿನೇ ದಿನೆ ಕುಸಿಯುತ್ತಿರುವುದೇ ಇದಕ್ಕೆ ಕಾರಣ. ಮಹಿಳೆಯರು ನಿಖಾಲಿಯಾಗುತ್ತಿದ್ದಾರೆ. ಪುರುಷರದ್ದೇ ದರ್ಬಾರು ಆಗುತ್ತಿದೆ' ಎಂದು ಅಬ್ದುಲ್ಲಾ ಸಾಹೇಬರು ಒಕ್ಕಣೆ ನೀಡಿದ್ದಾರೆ. ಅವರ ಮಾತಿನ ಅರ್ಥ ಏನಪಾ ಅಂತಂದಂದ್ರೆ... ಹೆಣ್ಣು ಭ್ರೂಣ ಹತ್ಯೆ ಇನ್ನಾದರೂ ನಿಲ್ಲಿಸಿ ಎಂಬ ಕಳಕಳಿ ಅವರದ್ದು. id='are-slot-1' class='oiad oi-axt oiadv'> id='top-searched-articles'>ಫಾರೂಖ್
ಹೇಳುವುದರಲ್ಲೂ ಗಂಭೀರತೆ ಇದೆ. ಏಕೆಂದರೆ 2011-ಜನಗಣತಿ ಪ್ರಕಾರ ಪ್ರತಿ 1,000 ಪುರುಷರಿಗೆ 914 ಮಹಿಳೆಯರು ಮಾತ್ರವೇ ಇದ್ದಾರೆ. ಈ ಮಧ್ಯೆ, ಕಾಂಗ್ರೆಸ್ ಪಕ್ಷ ಫಾರೂಖ್ ರ ಇಂತಹ ಹೇಳಿಕೆಗೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದು ಮುಜುಗರದಿಂದ ಜಾರಿಕೊಂಡಿದೆ. ಆದರೆ ಸಮಸ್ಯೆಯಂತೂ ಗಂಭೀರವಾಗಿದೆ ಎಂದು ಸೂಕ್ಷ್ಮವಾಗಿ ಹೇಳಿದೆ.











Click it and Unblock the Notifications