ಕುಕ್ಕೆಯಲ್ಲಿ ಹೆಣ್ಣು ಮಗು ಕತ್ತು ಹಿಸುಕಿ ಬರ್ಬರ ಹತ್ಯೆ
ಪುತ್ತೂರು,
ಏ.9: ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವಸತಿ ಗೃಹವೊಂದರ ಪಕ್ಕದಲ್ಲಿ ರುಂಡವಿಲ್ಲದ ಹೆಣ್ಣು ಮಗು ಸಾವಿಗೆ ಸಂಬಂಧಿಸಿದಂತೆ, ಮಗುವಿನ ಹೆತ್ತವರನ್ನು ಬಂಧಿಸಿರುವ ದಕ್ಷಿಣ ಕನ್ನಡ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಮಾರಧಾರಾ ನದಿಯ ಸ್ನಾನ ಘಟ್ಟದ ಬಳಿಯ ವಸತಿ ಗೃಹವೊಂದರ ಪಕ್ಕದಲ್ಲಿ ರುಂಡವಿಲ್ಲದ ಅಪರಿಚಿತ ಹೆಣ್ಣು ಮಗುವಿನ ಶವವೊಂದು ಕೊಳೆತ ಸ್ಥಿತಿಯಲ್ಲಿ ಕೆಲ ದಿನಗಳ ಹಿಂದೆ ಪತ್ತೆಯಾಗಿತ್ತು. id="toptextpromo">ಆರೋಪಿ
ಶೇಖರ ಹರಿಕ್ಕಾರ ಹಾಗೂ ಈತನ ಪ್ರೇಯಸಿ ಕಮ್ ಮಡದಿ ನಾಗರತ್ನ ತನಿಖೆ ವೇಳೆ ದಂಪತಿ ಮಗು ನಮ್ಮದೇ ಆದರೆ, ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದಿದ್ದಾರೆ. ಶೇಖರ ಹರಿಕ್ಕಾರ ಭೂಸೇನೆಯಲ್ಲಿ ಸೈನಿಕನಾಗಿದ್ದು, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ. ಕುಮಟಾ ಮೂಲದ ನಾಗರತ್ನ ಈತನ ಪ್ರೇಯಸಿ. ಇವರ ಪ್ರೇಮ ಪ್ರಣಯದ ಫಲವಾಗಿ ಕಳೆದ ಮಾರ್ಚ್ ನಲ್ಲಿ ಹೆಣ್ಣು ಮಗುವಿಗೆ ಜನನವಾಗಿದೆ. id='are-slot-1' class='oiad oi-axt oiadv'> id='top-searched-articles'>ಬೇಡದ
ಹೆಣ್ಣುಮಗು ಕಥೆ ಮುಗಿಸಲು ಸುಬ್ರಹ್ಮಣ್ಯಕ್ಕೆ ಬಂದಿದ್ದಾರೆ. ಮಗುವನ್ನು ಸುಬ್ರಹ್ಮಣ್ಯದಲ್ಲಿ ಬಿಟ್ಟು ಹೋಗೋಣ ಎಂದು ಗಂಡ ಒಂದು ಬಾರಿ ಸಲಹೆ ನೀಡಿದ್ದ. ಆದರೆ, ಕೊನೆಗ್ ಇಬ್ಬರೂ ಸೇರಿ ಮಗುವನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದು, ವಸತಿಗೃಹವೊಂದನ್ನು ಪಡೆದು ಕತ್ತುಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.











Click it and Unblock the Notifications