ಲೋಕ ಕಾಯುವ ಹತ್ತೂ ಸಮಸ್ತರ ಪಟ್ಟಿ ಸಿದ್ಧ

anna group
ಕೊನೆಗೂ ಅಣ್ಣಾ ಹಜಾರೆ ಬೇಡಿಕೆಯಂತೆ ಲೋಕಪಾಲ ಮಸೂದೆ ಜಾರಿಗೆ ಸರಕಾರ ಮತ್ತು ಸರಕಾರೇತರ ಹತ್ತು ಪ್ರತಿನಿಧಿಗಳ ಪಟ್ಟಿ ಸಿದ್ಧವಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರಿದ್ದಾರೆ. ಅಂದರೆ ದೇಶದ ಸಮಸ್ತ ಭ್ರಷ್ಟಾಚಾರ ನಿರ್ಮುಲನೆಗೆ ರಾಜ್ಯದ ಜವಾಬ್ದಾರಿ ಶೇಕಡಾ 20ರಷ್ಟಿದೆ ಎಂದಾಯ್ತು!. ಸರಕಾರದ ಪ್ರತಿನಿಧಿಯಾಗಿ ಕಾನೂನು ಸಚಿವ ವೀರಪ್ಪ ಮೊಯ್ಲಿ ಮತ್ತು ಸರಕಾರೇತರ ಪ್ರತಿನಿಧಿಯಾಗಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರುಗಳು ಕಾರ್ಯ ನಿರ್ವಹಿಸಲು ನಿಯೋಜಿತರಾಗಿದ್ದಾರೆ

ಜಂಟಿ ಸಮಿತಿಯ ಪಟ್ಟಿಯನ್ನು ಹಜಾರೆ ಬೆಂಬಲಿಗರಾದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮತ್ತು ಅರವಿಂದ್ ಕೇಜ್ರಿವಾಲ್ ರೊಂದಿಗೆ ಸಭೆ ನಡೆಸಿದ ನಂತರ ಸರಕಾರದ ವಕ್ತಾರ ಮತ್ತು ಕೇಂದ್ರ ದೂರಸಂಪರ್ಕ ಸಚಿವ ಕಪಿಲ್ ಸಿಬಾಲ್ ಪ್ರಕಟಿಸಿದ್ದಾರೆ. ಅವರೆಲ್ಲರ ಹೆಸರು ಈ ಕೆಳಗಿನಂತಿದೆ.

ಸರಕಾರೇತರ ಪ್ರತಿನಿಧಿಗಳು
* ಮಾಜಿ ಕಾನೂನು ಸಚಿವ ಶಾಂತಿಭೂಷನ್(ಕೊ-ಚೇರ್ಮನ್)
* ಅಣ್ಣಾ ಹಜಾರೆ
* ಲಾಯರ್ ಪ್ರಶಾಂತ್ ಭೂಷನ್
* ಸುಪ್ರಿಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
* ಆರ್ ಟಿಐ ಚಳುವಳಿಗಾರ ಅರವಿಂದ್ ಕೇಜ್ರಿವಾಲಾ

ಸರಕಾರದ ಪ್ರತಿನಿಧಿಗಳು
* ಹಣಕಾಸು ಸಚಿವ ಪ್ರಣಬ್ ಮುಖರ್ಜಿ(ಚೇರ್ಮನ್)
* ದೂರಸಂಪರ್ಕ ಸಚಿವ ಕಪಿಲ್ ಸಿಬಾಲ್
* ಕಾನೂನು ಸಚಿವ ವೀರಪ್ಪ ಮೊಯ್ಲಿ
* ಜಲಸಂಪನ್ಮೂಲ ಸಚಿವ ಸಲ್ಮಾನ್ ಖುರ್ಷಿದ್
* ಗೃಹ ಸಚಿವ ಪಿ ಚಿದಂಬರಂ

;

ಮಹಾತ್ಮ ಗಾಂಧಿ ಆರಂಭಿಸಿದ ಉಪವಾಸ ಸತ್ಯಾಗ್ರಹದ ಶಕ್ತಿ ಮತ್ತೊಮ್ಮೆ ಅನಾವರಣಗೊಂಡಿದೆ. ಭ್ರಷ್ಟಾಚಾರದಿಂದ ಭಾರತವನ್ನು ಬಚಾವು ಮಾಡಬಲ್ಲ ಶಕ್ತಿಯಿರುವ ಲೋಕಪಾಲ ಮಸೂದೆ ಜಾರಿಗಾಗಿ ಅಣ್ಣಾ ಹಜಾರೆ ಆರಂಭಿಸಿದ ನಿರಶನ ಮತ್ತು ಭಾರತೀಯರೆಲ್ಲರ ಪ್ರತಿಭಟನೆಗೆ ಸರಕಾರ ತಲೆಬಾಗಿದೆ.

ಮಸೂದೆ ಪಾಸಾಗೋದು ಯಾವಾಗ?: ಸರಕಾರವು ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ನಡೆಯುವ ಮುಂದಿನ ಮುಂಗಾರು ಅಧಿವೇಶನದಲ್ಲಿ ಜಾರಿಗೆ ತರುವ ನಿರೀಕ್ಷೆಯಿದೆ. ಸಂಸತ್ತಿನಲ್ಲಿ ಹಲವಾರು ಮಸೂದೆಗಳು ಗೆದ್ದಲು ತಿನ್ನುತ್ತಿರುವಾಗ ನೂತನ ಮಸೂದೆಗೆ ಅಂಕಿತ ಸಿಗಬಹುದೇ ಎಂಬ ಆತಂಕವೂ ಹೆಚ್ಚಿನವರಿಗಿದೆ. ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಿಂದ ಮಾತ್ರ ಒಪ್ಪಿಗೆ ಪಡೆದಿದ್ದು ಕಳೆದ ವರ್ಷದಿಂದ ಸಂಸತ್ತಿನಲ್ಲಿ ಕೊಳೆಯುತ್ತಿದೆ.

ಮತ್ತೊಂದು ಸ್ವಾತಂತ್ರ್ಯ: ಆಗಸ್ಟ್ 15ರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಪಾಲ ಮಸೂದೆ ಜಾರಿಯಾಗದಿದ್ದಲ್ಲಿ ಅಣ್ಣಾ ಹಜಾರೆ ಮತ್ತು ಬೆಂಬಲಿಗರು ಮತ್ತು ಭಾರತೀಯರೆಲ್ಲರೂ ಸರಕಾರದ ವಿರುದ್ಧ ಬೃಹತ್ ಧರಣಿ ನಡೆಸಲಿದ್ದಾರೆ. ಭಾರತಕ್ಕೆ ಮತ್ತೊಂದು ಸ್ವಾತಂತ್ರ್ಯ ಸಿಗೋ ಸೂಚನೆಗಳು ದಟ್ಟವಾಗಿದೆ.

;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+