ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಪಿಯುಸಿ ಪ್ರಶ್ನೆಪತ್ರಿಕೆ ಮೌಲ್ಯಮಾಪನ ಆರಂಭ

By Srinath
|
Google Oneindia Kannada News

PUC valuation as ususal
ಬೆಂಗಳೂರು, ಏ. 8: ಇತ್ತೀಚೆಗೆ ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ಬರೆದ ಒಟ್ಟು 6.25 ಲಕ್ಷ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಸಮಾಧಾನ ತರುವಂತಹ ಸುದ್ದಿ ಇಲ್ಲಿದೆ. ಏನಪ್ಪಾ ಅಂದರೆ ಮೌಲ್ಯಮಾಪಕರ ಬಹಿಷ್ಕಾರದ ರಗಳೆಯಿಲ್ಲದೆ ಸಕಾಲಕ್ಕೆ ಫಲಿತಾಂಶ ಹೊರಬರಲಿದೆ. ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಸುಗಮವಾಗಿ ನೆರವೇರಿಸಿಕೊಡುವುದಾಗಿ ರಾಜ್ಯ ಪದವಿ ಪೂರ್ವ ಶಿಕ್ಷಣದ ಅಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಬೋಧಕೇತರ ಒಕ್ಕೂಟ ತಿಳಿಸಿದೆ. ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಪೂರ್ವನಿಗದಿಯಂತೆ ಇಂದಿನಿಂದ (ಏ. 8) ಮೌಲ್ಯಮಾಪನ ಆರಂಭಗೊಳ್ಳಬೇಕಿದೆ. ಆದರೆ ವೇತನ ತಾರತಮ್ಯದ ನೆಪವೊಡ್ಡಿ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾಗಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಮಾತುಕತೆ ಆಡಿದ ಒಕ್ಕೂಟದ ಪದಾಧಿಕಾರಿಗಳು ಸಚಿವರ ಭರವಸೆ ಮೇರೆಗೆ ಮೌಲ್ಯಮಾಪನಕ್ಕೆ ಹಾಜರಾಗಲು ಒಪ್ಪಿದ್ದಾರೆ. ಇತ್ತ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ವೇತನ ತಾರತಮ್ಯ ಸೇರಿದಂತೆ ಉಪನ್ಯಾಸಕರ ಇತರೆ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ಕಾಗೇರಿ ವಾಗ್ದಾನ ಮಾಡಿದ್ದಾರೆ. ಮುಖ್ಯಮಂತ್ರಿಯವರು ರಚಿಸಿರುವ ಸಮಿತಿಯ ಮುಂದೆ ಈ ವಿಚಾರ ಇಟ್ಟು ಶಿಕ್ಷಕರ ಹಿತ ಕಾಯುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮೌಲ್ಯಮಾಪನ ಬಹಿಷ್ಕಾರ ಮಾಡದಿರಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಮುನಿರಾಜು ತಿಳಿಸಿದ್ದಾರೆ. ಸರಕಾರ ಮೇ 30ರ ಒಳಗಾಗಿ ಉಪನ್ಯಾಸಕರ ವೇತನ ಪರಿಷ್ಕರಣೆ ಸಂಬಂಧ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ, ಜುಲೈ 15ರ ನಂತರ ರಾಜ್ಯಾದ್ಯಂತ ಪಿಯುಸಿ ತರಗತಿ ಬಹಿಷ್ಕರಿಸಿ ಧರಣಿ ನಡೆಸಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ.

English summary
Karnataka 2nd PUC exam answer papers valuation will begin today (April 8) as ususal. After PU Lectures held a meeting with Education Minister Vishweshwar Hegde Kageri yesterday, the lectures union decided not to interrupt the valuation process. As such 6.25 lakh students who took exams recently are happy lot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X