ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ನಿಂದ ನೋಟಿಸ್

By Mahesh
|
Google Oneindia Kannada News

SC notice to Rahul Gandhi
ನವದೆಹಲಿ, ಏ.7: ರಾಹುಲ್ ಗಾಂಧಿ ಯುವತಿಯೊಬ್ಬರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ತಡೆ ಹಿಡಿದಿದೆ. ರಾಹುಲ್ ಗಾಂಧಿ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಮಾಜಿ ಶಾಸಕ ಕಿಶೋರ್ ಸಮ್ರಿತೆ ಸಲ್ಲಿಸಿದ ಮೇಲ್ಮನವಿ ಆಲಿಸಿದ ನ್ಯಾಯಮೂರ್ತಿ ವಿಎಸ್ ಸಿರ್ ಪುರ್ಕರ್ ಹಾಗೂ ಠಾಕೂರ್ ಅವರನ್ನೊಳಗೊಂಡ ಪೀಠ ಈ ಕ್ರಮ ಕೈಗೊಂಡಿದೆ.

ರಾಹುಲ್ ವಿರುದ್ಧ ದೂರು ಸಲ್ಲಿಸಿದ್ದ ಅರ್ಜಿದಾರ ಮಧ್ಯಪ್ರದೇಶದ ಸಮಾಜವಾದಿ ಪಕ್ಷದ ಮಾಜಿ ಶಾಸಕ ಕಿಶೋರ್ ಸಾಮಿತ್ರೆಗೆ 50ಲಕ್ಷ ರೂ. ದಂಡ ವಿಧಿಸಿದ್ದ ಅಲಹಾಬಾದ್ ಹೈಕೋರ್ಟ್, ಲಕ್ನೋ ಪೀಠದ ಆದೇಶಕ್ಕೂ ಸುಪ್ರೀಂ ತಡೆ ವಿಧಿಸಿದೆ. ಜತೆಗೆ ಮಾಜಿ ಶಾಸಕರ ವಿರುದ್ಧ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್‌ಗೆ ಸೂಚಿಸಿ, ರಾಹುಲ್ ಹಾಗೂ ಇತರೆ ನಾಲ್ವರಿಂದ ಪ್ರತಿಕ್ರಿಯೆ ಪಡೆಯಲು ನಾಲ್ಕು ವಾರ ಗಡುವು ವಿಧಿಸಿದೆ.

ಏನಿದು ಪ್ರಕರಣ?: ಸುಕನ್ಯಾ ಹಾಗೂ ಆಕೆಯ ಪೋಷಕರನ್ನು ರಾಹುಲ್, ಆತನ ಬೆಂಬಲಿಗರು ದೌರ್ಜನ್ಯದಿಂದ ಕೂಡಿಹಾಕಿ, ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಿ ಸುಮಿತ್ರೆ, ಅಲಹಾಬಾದ್ ಹೈಕೋರ್ಟ್‌ನಲ್ಲಿ ಆರೋಪಿಸಿದ್ದರು. ಹೀಗಾಗಿ ನಾಪತ್ತೆಯಾಗಿರುವ ಯುವತಿ ಹಾಗೂ ಆಕೆಯ ಕುಟುಂಬ ವರ್ಗವನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆಯೂ ಮನವಿ ಮಾಡಿದ್ದರು.

ನ್ಯಾಯಾಲಯಕ್ಕೆ ಹಾಜರಾಗಿದ್ದ ಸುಕನ್ಯಾ, ತನ್ನನ್ನು ಯಾರು ಅಪಹರಿಸಿರಲಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದ್ದಳು. ಇದಾದ ನಂತರ ಗಣ್ಯವ್ಯಕ್ತಿಯೊಬ್ಬನ ಸಚಾರಿತ್ರ್ಯವಧೆ ಆರೋಪದ ಮೇಲೆ ಹೈಕೋರ್ಟ್ 50 ಲಕ್ಷ ರೂ. ದಂಡವನ್ನು ವಿಧಿ ಸಿತ್ತು. ಆದರೆ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ, ಸುಮಿತ್ರೆ ಸುಪ್ರೀಂಕೋರ್ಟ್ ಮೊರೆಹೋಗಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ರಾಹುಲ್, ಉತ್ತರ ಪ್ರದೇಶ ಸರ್ಕಾರದ ಜತೆಗೆ ಇತರೆ ನಾಲ್ವರಿಗೆ ನೋಟಿಸ್ ಜಾರಿ ಮಾಡಿದೆ.

English summary
The Supreme court has issued notice to Rahul Gandhi and UP government and also stayed Allahabad High court order for an CBI inquiry against MLA Kishore Samrite. Earlier, MLA Kishore accused Rahul Gandhi of illegally kidnapping a girl called Sukhanya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X