ದುಬೈನಲ್ಲಿ ಅತ್ಯಾಚಾರ : 3 ಭಾರತೀಯರ ಖುಲಾಸೆ

ಕಳೆದ ವರ್ಷ ನವೆಂಬರ್ 11ರಂದು ಮಗುವಿನ ಮೇಲೆ ಅತ್ಯಾಚಾರವೆಸಗಿ ನಂತರ ಮನೆಗೆ ಬಿಡಲಾಗಿತ್ತು. ಮಗುವಿನ ಪಾಲಕರು ಕೂಡಲೆ ದೂರು ನೀಡದೆ ಈ ವರ್ಷ ಜನವರಿ 9ರಂದು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಸೂಪರ್ ವೈಸರ್, ಆತನ ಸಹಾಯಕ ಮತ್ತು ವಾಹನ ಚಾಲಕನನ್ನು ಬಂಧಿಸಲಾಗಿತ್ತು. ಮೂರು ವರ್ಷ ಜೈಲಿನಲ್ಲಿ ಕಳೆದ ಅವರು ಈಗ ಬಿಡುಗಡೆಯಾಗಿದ್ದಾರೆ.
ಮಾಡರ್ನ್ ಹೈಸ್ಕೂಲ್ ನಲ್ಲಿ ಓದುತ್ತಿದ್ದ ಮಗುವಿನ ಮೇಲೆ ಆರೋಪಿಗಳಿಂದ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ನಡೆದೇ ಇಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿದೆ. ವಿಧಿವಿಜ್ಞಾನ ಸಂಸ್ಥೆ ನಡೆಸಿದ ಪರೀಕ್ಷೆಯಿಂದ ಕೂಡ ಅತ್ಯಾಚಾರ ನಡೆದಿರುವುದು ಸಾಬೀತಾಗಿಲ್ಲ. ತನಿಖಾ ತಂಡದ ಎದುರಿಗೆ ಆರೋಪಿಗಳು ನೀಡಿರುವ ಹೇಳಿಕೆ ತಾಂತ್ರಿಕ ವರದಿಗೆ ತದ್ವಿರುದ್ಧವಾಗಿರುವುದರಿಂದ ತಪ್ಪೊಪ್ಪಿಗೆ ಹೇಳಿಕೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಆರೋಪಿಗಳು ಉತ್ತಮ ಹಿನ್ನೆಲೆಯವರಿದ್ದಾರೆ. ಅವರಿಗೂ ಮಕ್ಕಳಿವೆ. ಇಂಥವರಿಂದ ಅತ್ಯಾಚಾರ ನಡೆದಿದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಸಮಾಜ ಮತ್ತು ಮಾಧ್ಯಮಗಳು ಮಾಡಿರುವ ದಾಳಿಯಿಂದಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಪಿಗಳು ಕುಗ್ಗಿದ್ದಾರೆ ಎಂದು ನ್ಯಾಯಾಲಯ ಸಹಾನುಭೂತಿ ವ್ಯಕ್ತಪಡಿಸಿದೆ. ಆರೋಪ ಸಾಬೀತಾಗುವವರೆಗೂ ಎಲ್ಲರೂ ನಿರಪರಾಧಿಗಳೆ. ತನಿಖೆ ಮತ್ತು ವಿಚಾರಣೆ ಮುಗಿಯುವುರೆಗೆ ಸಾರ್ವಜನಿಕರು ಮತ್ತು ಮಾಧ್ಯಮಗಳು ಸಹನೆಯಿಂದ ವರ್ತಿಸಬೇಕು ಎಂದು ನ್ಯಾಯಮೂರ್ತಿಗಳು ಕಿವಿಮಾತು ಹೇಳಿದ್ದಾರೆ.












Click it and Unblock the Notifications