ದೇಶದಲ್ಲಿ 11 ಲಕ್ಷ ಶಕ್ತಿ ಪೀಠ ಸ್ಥಾಪನೆ: ಬಾಬಾ

Baba Ramdev
ಹರಿದ್ವಾರ, ಏ.6: ದೇಶದಲ್ಲಿ ಹೊಸ ಅಧ್ಯಾತ್ಮಿಕ ಚಳವಳಿಗೆ ನಾಂದಿ ಹಾಡಿರುವ ಯೋಗಗುರು ಬಾಬಾ ರಾಮ ದೇವ್ ಅವರು ಸುಮಾರು 11 ಲಕ್ಷ ಶಕ್ತಿಪೀಠಗಳನ್ನು ಈ ವರ್ಷ ಸ್ಥಾಪಿಸುವುದಾಗಿ ಹೇಳಿದ್ದಾರೆ.

ಈಗಾಗಲೇ ದೇಶದೆಲ್ಲೆಡೆ ಲಕ್ಷಾಂತರ ಮಂದಿಗೆ ಯೋಗವನ್ನು ಉಚಿತವಾಗಿ ಕಲಿಸಿಕೊಟ್ಟಿರುವ ಬಾಬಾ ಹಾಗೂ ಅವರ ಅನುಯಾಯಿಗಳು ಹೊಸ ಚಳವಳಿಗೆ ಕಾರ್ಯ ಸನ್ನದ್ಧರಾಗಿದ್ದಾರೆ. ಪತಂಜಲಿ ಯೋಗಪೀಠದ ಬಳಿ ಸ್ವಾಮಿ ಎಂಡಿಎಚ್ ನ ಮುಖ್ಯಸ್ಥ ಮಹಾಶಯ್ ಧರ್ಮ್ ಪಾಲ್ ಅವರ ಸಹಯೋಗದೊಂದಿಗೆ ಶಂಕರದೇವ್ ವಾನಪ್ರಸ್ಥಾಶ್ರಮವನ್ನು ರಾಮದೇವ್ ಉದ್ಘಾಟಿಸಿ ಮಾತನಾಡುತ್ತಿದ್ದರು. ಸುಮಾರು 340 ಫ್ಲ್ಯಾಟ್ ಗಳುಳ್ಳ ವಾನಪ್ರಸ್ಥಾಶ್ರಮ ಕಟ್ಟಡ ಉದ್ಘಾಟನೆ ಜೊತೆಗೆ, ಬಾಬಾ ಅವರು ಬರೆದಿರುವ "ಮೇರೆ ಸಪ್ನೋ ಕ ಭಾರತ್" ಎಂಬ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಯೋಗದಿಂದ ಜನರಿಗೆ ಮಾನಸಿಕ ಹಾಗೂ ದೈಹಿಕ ನೆಮ್ಮದಿ ಸಿಗುತ್ತದೆ. ಜನರು ಶಕ್ತಿಯುತವಾಗಿ ಎಲ್ಲ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಸಿಗುತ್ತದೆ. ಯೋಗಕ್ಕೆ ಯಾವುದೇ ವಯಸ್ಸಿನ ಅಥವಾ ಜಾತಿಯ ಅಡೆ ತಡೆಗಳಿಲ್ಲ, ಎಲ್ಲರೂ ಮುಕ್ತರಾಗಿ ಯೋಗಾಭ್ಯಸದಲ್ಲಿ ನಿರತರಾಗಬಹುದು ಎಂದರು.

ಸಲಿಂಗ ಕಾಮ ಸಕ್ರಮ ಎಂದ ಸುಪ್ರೀಂಕೋರ್ಟ್ ವಿರುದ್ಧವೇ ತಿರುಗಿಬಿದ್ದಿದ್ದ ಬಾಬಾ ರಾಮದೇವ್ ಅವರ ರಾಜಕೀಯ ಪಕ್ಷ ಭಾರತ್ ಸ್ವಾಭಿಮಾನ ಟ್ರಸ್ಟ್ ಮೂಲಕ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಾಸ್ ತಂದು ಜನ ಸಾಮಾನ್ಯರ ಬದುಕನ್ನು ಸುಧಾರಿಸುವುದು ಇವರ ಮೂಲ ಉದ್ದೇಶ. ಇದಲ್ಲದೆ ಸ್ವದೇಶಿ ವಸ್ತು ಬಳಕೆ, ವಿದೇಶಿ ಕಂಪೆನಿಗಳ ದಬ್ಬಾಳಿಕೆ ವಿರುದ್ಧ ದನಿ ಎತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+