ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಾಮಿ ಭೀತಿ: ಕರಾವಳಿಯಲ್ಲಿ ಆತಂಕದ ಅಲೆಗಳು

By Srinath
|
Google Oneindia Kannada News

Karnataka Coastal Water
ಬೆಂಗಳೂರು, ಮಾ. 23: ಭಟ್ಕಳ, ಕಾಸರಗೋಡು, ಸುರತ್ಕಲ್, ಬೈಂದೂರಿನ ಕಡಲತೀರದಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಯಲ್ಲಿ ಸಮುದ್ರ ಉಕ್ಕಿ ಆತಂಕದ ಅಲೆಗಳನ್ನು ಸೃಷ್ಟಿಸಿದೆ. ದಿಢೀರನೆ ಆಳೆತ್ತರದ ಅಲೆಗಳು ಎದ್ದು ಮೀನುಗಾರರ ಎದೆ ಧಸಕ್ಕೆಂದಿದೆ. ಎರಡು ದಿನದ ಹಿಂದೆ ಉತ್ತರ ಭಾರತ ಸಣ್ಣಗೆ ಕಂಪಸಿದ್ದು, ಸೂಪರ್ ಮೂನ್ ಗುಮ್ಮ ಆತಂಕ ಮತ್ತು ಇವರೆಡಕ್ಕಿಂತ ಹೆಚ್ಚಾಗಿ ಜಪಾನ್ ಸುನಾಮಿಯಿಂದಾಗಿ ಜನರ ಮನದಲ್ಲಿ ಇನ್ನೂ ಭೀತಿಯ ಅಲೆಗಳು ತೊಯ್ದಾಡುತ್ತಿರುವಾಗ ಮಂಗಳೂರು ಕರಾವಳಿಯಲ್ಲಿ ಸಮುದ್ರ ಉಕ್ಕಿರುವುದು ಸಹಜವಾಗಿಯೇ ಚಿಂತೆಗೀಡುಮಾಡಿದೆ.

ಭಟ್ಕಳ ಬಂದರಿನಲ್ಲಿ ಲಂಗುರು ಹಾಕಿದ್ದ ನೂರಾರು ಮೀನುಗಾರಿಕೆ ಬೋಟುಗಳ ಪೈಕಿ ಸುಮಾರು 10 ಬೋಟುಗಳು ಒಂದಕ್ಕೊಂದು ತಾಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಸಮುದ್ರ ತೀರದಲ್ಲಿ ತೀರಾ ಆಕಸ್ಮಿಕವಾಗಿ ಕಾಣಿಸಿಕೊಂಡ ಈ ಅಲೆಗಳ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ಆದರೆ ಮತ್ತೆ ಅಲೆಗಳು ಸೃಷ್ಟಿಯಾಗಬಹುದೆಂಬ ಭೀತಿ ಬೆಸ್ತರಲ್ಲಿ ಮನೆ ಮಾಡಿದೆ. ಮರವಂತೆ ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಲೆಗಳು ಹೆದ್ದಾರಿಗೆ ಹೊಂದಿಕೊಂಡಿರುವ ತಡೆಗೋಡೆಗೆ ಅಪ್ಪಳಿಸಿ, ರಸ್ತೆ ಮೇಲೆ ನೀರು ಚಿಮ್ಮುತ್ತಿದೆ. ಅಂಗಡಿ ಮುಂಗಟ್ಟು ಅಲೆಯ ಹೊಡೆತಕ್ಕೆ ನಲುಗಿವೆ. ಹೆದ್ದಾಋಇ ಮೇಲಿನ ಪ್ರಯಾಣ ದುಸ್ಸಾಹಸದ್ದಾಗಿದೆ.

ತಾಲೂಕಿನ ಪ್ರಮುಖ ನದಿಗಳಲ್ಲೂ ಸಹ ಉಬ್ಬರ ಕಂಡಿಬಂದಿದೆ. ಕೋಣಿ, ಆನಗಳ್ಳಿಯಲ್ಲಿ ನದಿಗಳು ಭರ್ತಿಯಾಗಿ ನದಿ ಪಾತ್ರದ ಕೃಷಿ ಭೂಮಿಗೆ ನೀರು ನುಗ್ಗಿದೆ. ಸುರತ್ಕಲ್-ನಲ್ಲಿ ಮಳೆಗಾಲದ ಅಲೆಗಳಂತೆ ಉಗ್ರ ರೂಪ ತಾಳಿತ್ತು. ಈ ರೀತಿ ವರ್ಷದಲ್ಲಿ ಒಂದೆರಡು ಬಾರಿ ನೀರು ಉಕ್ಕುವುದು ಸಾಮಾನ್ಯ. ಇದನ್ನು ಮೀನುಗಾರರು 'ಕಳ್ಳ ನೀರು' ಎನ್ನುತ್ತಾರೆ. ಸೆಖೆ ತಾಳಲಾರದೆ ಕಾಸರಗೋಡು ನೆಲ್ಲಿಕುಂಜೆ ಸಮುದ್ರ ಕಿನಾರೆ ಸಮೀಪ ಸೋಮವಾರ ರಾತ್ರಿ ನಿದ್ರಿಸುತ್ತಿದ್ದ ಹಲವು ಬೆಸ್ತರು, ಇದ್ದಕ್ಕಿಂದ್ದಂತೆ ಬಂದ ದೊಡ್ಡ ಅಲೆಗಳನ್ನು ಕಂಡು ಬೆಚ್ಚಿಬಿದ್ದರು. ಇದನ್ನು ಕಂಡು ಸಮೀಪದ ಮನೆಗಳಲ್ಲಿದ್ದ ಜನರೂ ಕಾಲ್ಕಿತ್ತರು. ಸೋಮವಾರ ರಾತ್ರಿ 10 ಗಂಟೆಗೆ ಆರಂಭಗೊಂಡ ಈ ಸಮುದ್ರ ಭೋರ್ಗರೆತ ಮುಂಜಾನೆ 2 ಗಂಟೆ ವರೆಗೂ ಮುಂದುವರಿಯಿತು.

English summary
In Karnataka Coastal area near Bhatkal sea level rises all of a sudden on Monday (March 22). In the wake Japan Tsunami fishermen are very much feared by this sea rise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X