ಸಿಬಿಐ ಕಚೇರಿ ಮೇಲೆ ದಾವೂದ್ ದಾಳಿ ಬೆದರಿಕೆ
ನವದೆಹಲಿ,
ಮಾ. 23: 2ಜಿ ತರಂಗಗುಚ್ಛ ಹಗರಣದ ತರಂಗ ದುಬೈಗೂ ಮುಟ್ಟಿದೆ. ಹಗರಣದ ತನಿಖೆ ನಡೆಸುತ್ತಿರುವ ಸಿಬಿಐನ ಕೇಂದ್ರ ಕಚೇರಿಯ ಮೇಲೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ ಕಂಪನಿ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಇದೆ. ಇದರಿಂದ ಸಿಬಿಐ ಕಚೇರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಹಗರಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ನಾಶಪಡಿಸುವ ಉದ್ದೇಶದೊಂದಿಗೆ ಡಿ ಕಂಪನಿ ದಾಳಿ ನಡೆಸುವ ಸೂಚನೆಗಳಿವೆ ಎಂದು ಸಿಬಿಐಗೆ ಕೆಲವು ದಿನಗಳ ಹಿಂದೆಯೇ ಮಾಹಿತಿ ಸಿಕ್ಕಿದೆ ಎಂದು ಉನ್ನತಾಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.ವೀಡಿಯೊ: ಸಿಬಿಐ ಕಚೇರಿ ಮೇಲೆ ದಾವೂದ್ ದಾಳಿ ? id="toptextpromo">
ಅಧಿಕೃತ
ಮೂಲವೊಂದು ಮುಂಬಯಿಯಿಂದ ಈ ಮಾಹಿತಿಯನ್ನು ಕೇಂದ್ರ ಕಚೇರಿಗೆ ಇತ್ತೀಚೆಗೆ ರವಾನಿಸಿತ್ತು. ಆದ್ದರಿಂದ ತಕ್ಷಣ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಸಿಬಿಐನ ಎಲ್ಲ ಕಚೇರಿಗಳೂ ಈ ಎಚ್ಚರಿಕೆಯ ಸಂದೇಶ ಕಳಿಸಿದ್ದೇವೆ ಎಂದು ಆಧಿಕಾರಿ ತಿಳಿಸಿದ್ದಾರೆ. ಸಿಬಿಐ ಈ ಮಾಸಾಂತ್ಯ ಹಗರಣದ ಸಂಬಂಧ ತನ್ನ ಮೊದಲ ಆರೋಪಪಟ್ಟಿ ಸಲ್ಲಿಸುವ ಆಂದಾಜಿದೆ. id='are-slot-1' class='oiad oi-axt oiadv'> id='top-searched-articles'>ಶಾಹೀದ್
ಉಸ್ಮಾನ್ ಬಲ್ವಾ ಹುಟ್ಟುಹಾಕಿರುವ ಈತಿಸಲಾತ್ ಡಿಬಿ ಎಂಬ ಕಂಪನಿ ಸ್ವಾನ್ ಟೆಲಿಕಾಂ ಹೆಸರಿನಲ್ಲಿ 2ಜಿ ತರಂಗಗುಚ್ಛ ಹಗರಣದಲ್ಲಿ ಭಾಗಿಯಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬಲ್ವಾನನ್ನು ಬಂಧಿಸಲಾಗಿದೆ. ಬೇಹುಗಾರಿಕೆ ಮೂಲಗಳ ಪ್ರಕಾರ ಈತಿಸಲಾತ್ ಡಿಬಿ ಕಂಪನಿ ಮತ್ತು ದಾವೂದ್-ನ ಡಿ ಕಂಪನಿಗೂ ಸಂಭಂಧವಿದೆ ಎನ್ನಲಾಗಿದೆ. ಅಂದರೆ ಬಲ್ವಾ ಮೂಲಕ ದಾವೂದ್ 2ಜಿ ತರಂಗಗುಚ್ಛ ಅಕ್ರಮದಲ್ಲಿ ಸಕ್ರಿಯನಾಗಿದ್ದಾನೆ ಎಂದು ಮೂಲಗಳು ಹೇಳಿವೆ.











Click it and Unblock the Notifications