ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಜರಿ ಮೇಲ್ ತೆರಿಗೆ ಅರ್ಧ ವಾಪಸ್

By Srinath
|
Google Oneindia Kannada News

Health care additonal tax
ನವದೆಹಲಿ, ಮಾ. 22: ಕಳೆದ ಬಜೆಟ್-ನಲ್ಲಿ ಮಂಡಿಸಿದ್ದ ಆರೋಗ್ಯ ಸೇವಾ ಕ್ಷೇತ್ರದ ಮೇಲೆ ಹೆಚ್ಚುವರಿ ಸೇವಾ ತೆರಿಗೆ ಪ್ರಸ್ತಾಪವನ್ನು ಕೇಂದ್ರ ಸರಕಾರ ಕೈಬಿಟ್ಟಿದೆ. ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಸರಕಾರದ ಈ ನಿರ್ಧಾರವನ್ನು ಸಂಸತ್ತಿನಲ್ಲಿ ಮಂಗಳವಾರ ಪ್ರಕಟಿಸಿದ್ದಾರೆ. ಈ ಹೆಚ್ಚು'ವರಿ' ತೆರಿಗೆಯನ್ನು 'ದುಃಖದಾಯಕ ತೆರಿಗೆ' ಎಂದು ಬಣ್ಣಿಸಿ ನಾರಾಯಣ ಹೃದಯಾಲಯದ ಖ್ಯಾತ ಹೃದ್ರೋಗ ಚಿಕಿತ್ಸೆ ತಜ್ಞ ಡಾ. ದೇವಿ ಶೆಟ್ಟಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

25ಕ್ಕಿಂತ ಹೆಚ್ಚು ಹಾಸಿಗೆ ಸೌಕರ್ಯವುಳ್ಳ ಹವಾನಿಯಂತ್ರಿತ ಆಸ್ಪತ್ರೆಗಳು ಒದಗಿಸುವ ವೈದ್ಯಕೀಯ ಸೇವೆ ಮೇಲಿನ ಪ್ರಸ್ತಾವಿತ ತೆರಿಗೆಯನ್ನು ಶೇ. 50ರಷ್ಟು ಮೊಟಕುಗೊಳಿಸಲಾಗಿದೆ. ಅಲ್ಲಿಗೆ ಈಗ ಶೇ. 5ರಷ್ಟು ಹೆಚ್ಚುವರಿ ತೆರಿಗೆ ಕಟ್ಟಬೇಕಾಗಿದೆ.

ಕೇಂದ್ರ ನೌಕರರಿಗೆ ಯುಗಾದಿ ಹೋಳಿಗೆ:
ಕೇಂದ್ರ ನೌಕರರ ತುಟ್ಟಿ ಭತ್ಯೆಯಲ್ಲಿ ಶೇ. 6ರಷ್ಟು ಏರಿಕೆ ಮಾಡುವ ಮೂಲಕ ಕೇಂದ್ರ ಸರಕಾರ ಯುಗಾದಿ ಸಿಹಿ ಹಂಚಿದೆ. ಮಂಗಳವಾರ ಕೇಂದ್ರ ಸಂಪುಟ ಇದಕ್ಕೆ ಅಂಕಿತ ಹಾಕಿದ್ದು, 50 ಲಕ್ಷ ನೌಕರರು ಮತ್ತು 38 ಲಕ್ಷ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ. ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಈ ಹೆಚ್ಚಳ ಜಾರಿಗೆ ಬಂದಿದೆ. ಅಗತ್ಯ ಬೆಲೆಗಳ ಏರಿಕೆ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಣಯ ತೆಗೆದುಕೊಂಡಿದೆ.

ತುಟ್ಟಿ ಭತ್ಯೆ ಪ್ರಸ್ತುತ ಗ್ರಾಹಕ ಬೆಲೆ ಸೂಚ್ಯಂಕದ ಶೇ. 45ರಷ್ಟಿದ್ದು, ಪ್ರಸ್ತಾವಿತ ಏರಿಕೆಯಿಂದ ಅದು ಶೇ. 51ಕ್ಕೆ ತಲುಪಲಿದೆ. ಇದರಿಂದ ಸಾರಿಗೆ ಭತ್ಯೆ ಮತ್ತು ಶಿಕ್ಷಣ ಭತ್ಯೆಯೂ ಶೇ. 25ರಷ್ಟು ಅಧಿಕವಾಗಲಿದೆ. ಇನ್ನು ದೂರದ ಪ್ರದೇಶಗಳಲ್ಲಿ ಸೇವೆಯಲ್ಲಿ ತೊಡಗಿರುವ ನೌಕರರಿಗೆ ವಿಶೇಷ ಪರಿಹಾರ ಭತ್ಯೆಯೂ ಶೇ. 25ರಷ್ಟು ಹೆಚ್ಚಾಗಿದೆ.

English summary
The Finance Minister Pranab Mukherjee has the withdrawal of the newly levied service tax on healthcare on Tuesday announced in Parliament. It provides some relief for the common man. At the same time Union cabinet approved 6% increase in dearness allowance for central government employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X