ಕರ್ನಾಟಕ ಬಿಜೆಪಿ ಗೆದ್ದಲು ಹಿಡಿದಿರುವ ಮರ: ಸಿದ್ದು
ಸೂಲಿಬೆಲೆ,
ಮಾ.20: ರಾಜ್ಯ ಬಿಜೆಪಿ ಸರ್ಕಾರದಲ್ಲಿನ ಭಿನ್ನಮತ ನೋಡಿದರೆ, ಸರ್ಕಾರ ಶೀಘ್ರ ಪತನವಾಗುವ ಲಕ್ಷಣಗಳು ಕಂಡುಬರುತ್ತಿವೆ. ಸಂಪೂರ್ಣ ಗೆದ್ದಲು ಹಿಡಿದಿರುವ ಕರ್ನಾಟಕ ಬಿಜೆಪಿ ತನ್ನಷ್ಟಕ್ಕೆ ತಾನೆ ಉದುರಿ ಬೀಳಲಿದೆ. ಬೀಳುವ ಮರಕ್ಕೆ ಜೋತು ಬಿದ್ದಿರುವ ಯಡಿಯೂರಪ್ಪಗೆ ಅವರ ಬುಡವೇ ಭದ್ರ ಇಲ್ಲ ಎಂಬ ಸತ್ಯದ ಅರಿವಾಗಿದೆ. ಹೈ ಕಮಾಂಡ್ ಹಿಂದೆ ಮುಂದೆ ಸುತ್ತುವ ಯಡಿಯೂರಪ್ಪ, ಜನರ ದರ್ಶನ ಯಾವಾಗ ಮಾಡುತ್ತಾರೋ ಕಾಣೆ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ. id="toptextpromo">ಸೂಲಿಬೆಲೆ
ಸಮೀಪದ ಗಿಡ್ಡಪ್ಪನಹಳ್ಳಿ ಗ್ರಾಮದಲ್ಲಿ ನೆಡೆದ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ಕಾರಣವಾಗಿದ್ದು, ಮತಕ್ಕಾಗಿ ದೇಶವನ್ನು ಜಾತಿಯ ಹೆಸರಲ್ಲಿ ಒಡೆಯುವ ಕಾರ್ಯ ಬಿಜೆಪಿಯಿಂದ ನಡೆದಿದೆ. ಉಪ ಚುನಾವಣೆಯಲ್ಲಿ ಜನರ ಮುಂದೆ ಹೋಗಲು ಮುಖವಿಲ್ಲದ ಭ್ರಷ್ಟರು ಪ್ರಜಾಪ್ರಭುತ್ವ ವಿರೋಧಿ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕೇಂದ್ರ
ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ಕುರ್ಚಿಗಾಗಿ ಅಧಿಕಾರ ಮಾಡುವವರನ್ನು ಮತದಾರರ ಎಂದಿಗೂ ಕೈ ಹಿಡಿಯುವುದಿಲ್ಲ. ಬಿಜೆಪಿ ಅವನತಿಯ ಹಾದಿಯಲ್ಲಿದೆ. ಮುಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂದು ಭವಿಷ್ಯ ನುಡಿದರು. ಚುನಾವಣೆಗಳಿಗೆ ಅಭ್ಯರ್ಥಿ ಆಯ್ಕೆಯಲ್ಲಿ ಕಾಂಗ್ರೆಸ್ ಸದಾ ವಿಳಂಬ ನೀತಿ ಅನುಸರಿಸುತ್ತೇ ಏಕೆ ಎಂದರೆ, ತಾಳಿದವನು ಬಾಳಿಯಾನು ಎಂದ ಸಿದ್ದರಾಮಯ್ಯ, ಏ.ರಿಂದ ಆರಂಭವಾಗುವ ಉಪ ಚುನಾವಣೆಗೆ ಶೀಘ್ರದಲ್ಲೇ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ಹೇಳಿದರು.











Click it and Unblock the Notifications