ಮಾರ್ಚ್ 19ರಂದು ಭೂಮಂಡಲಕ್ಕೆ ಏನಾಗಲಿದೆ?
ಮೆಲ್ಬೋರ್ನ್,ಮಾ.
11: ಮಾರ್ಚ್ 19ರಂದು ಇಡೀ ಭೂಮಂಡಲ ನಾಶವಾಗಲಿದೆಯೇ!? ಬರೀ ಮಳೆ, ಭೂಕಂಪ, ಅಗ್ನಿಪರ್ವತಗಳ ರುದ್ರ ನರ್ತನ ಮುಂತಾದ ಮಹಾ ನೈಸರ್ಗಿಕ ವಿಕೋಪಗಳು ಮುಂದಿನ ಶನಿವಾರ ಸಂಭವಿಸಲಿವೆಯೇ? ಏಕೆಂದರೆ ಆವತ್ತು ಚಂದ್ರ ಭೂಮಿಗೆ ಅತ್ಯಂತ ಸನಿಹಕ್ಕೆ ಬರಲಿದ್ದಾನೆ. ಇದೇ ಕಾರಣ ಇಟ್ಟುಕೊಂಡು ಇಂತಹ ಸುದ್ದಿ ತೇಲಿಬಿಡಲಾಗಿದೆ. id="toptextpromo">1955,
1974, 1992 ಮತ್ತು 2005ರಲ್ಲಿ ಚಂದ್ರ ಹೀಗೆ ಭೂಮಿಯ ಹತ್ತಿರಕ್ಕೆ (perigee) ಬಂದಿದ್ದ. ಆಗೇನೂ ಅಂಥಾದ್ದು ಆಗಿರಲಿಲ್ಲ. ಆದರೆ ಈ ಬಾರಿ...? astropro.com ಎಂಬ ವೆಬ್ ಸೈಟ್ ನಲ್ಲಿ ಖಗೋಳಶಾಸ್ತ್ರಜ್ಞನೊಬ್ಬ ಇಂತಹ ಸಾಧ್ಯತೆಯ ಬಗ್ಗೆ ಅದ್ಯಯನ ಮಾಡಿದ್ದು ಅದಕ್ಕೆ Extreme Super Moon ಎಂದೂ ಹೆಸರಿಟ್ಟಿದ್ದಾನೆ. ಆದರೆ ಅನೇಕ ಭೂಶಾಸ್ತ್ರಜ್ಞರು ಈ ಪ್ರಮೇಯವನ್ನು ಬಲವಾಗಿ ತಳ್ಳಿಹಾಕಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಲ್ರೀ...ಹೋಗಿ
ಹೋಗಿ ಆವತ್ತು ಕಾಮನ ಹಬ್ಬ. ಹೋಳಿ ಹುಣ್ಣಿಮೆ. ಹುಣ್ಣಿಮೆಯ ರಾತ್ರಿಯಲ್ಲಿ ಕಡಲು ಉಕ್ಕುವುದು (ಕೃಪೆ ಕೆ.ಎಸ್. ನರಸಿಂಹ ಸ್ವಾಮಿ) ಸಹಜ. ಅಂಥದ್ದರಲ್ಲಿ ಇದೇನು ನಿಮ್ಮ ತರಲೆ ಎಂದು ಖ್ಯಾತೆ ತೆಗೆಯುವವರೂ ಇದ್ದಾರೆ. ಆದರೂ ...ಏನಾಗುವುದೋ ಕಾದು ನೋಡುವ!











Click it and Unblock the Notifications