ವಿಶ್ವಕಪ್ : ಎಲ್ ಜಿಯಿಂದ ವಿಶೇಷ ಆಡ್ರ್ಯಾಂಡ್ ಫೋನ್
ನವದೆಹಲಿ, ಮಾ.6: ಭಾರತದಲ್ಲಿ ಕ್ರಿಕೆಟ್ ಬಗ್ಗೆ ಇರುವ ಕ್ರೇಜ್ ಅನ್ನು ಸರಿಯಾಗಿ ಬಳಸಿಕೊಳ್ಳಲು ತೈವಾನ್ ಮೂಲದ ಮೊಬೈಲ್ ಉತ್ಪಾದನಾ ಸಂಸ್ಥೆ ಎಲ್ ಜಿ ಮುಂದಾಗಿದೆ. ವಿಶ್ವದ ಮೂರನೇ ಅತಿದೊಡ್ಡ ಮೊಬೈಲ್ ಸಂಸ್ಥೆ ವಿಶ್ವಕಪ್ 2011 ವಿಶೇಷ ಆಂಡ್ರ್ಯಾಡ್ ಮೊಬೈಲ್ ಫೋನ್ ಎಲ್ ಜಿ ಆಪ್ಟಿಮಸ್ ಒನ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.
ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಮಾನವನ್ನು ತೋರಿಸಲು ಬಗೆ ಬಗೆ ಉಡುಗೆ ತೊಡಗೆಗಳನ್ನು ತೊಟ್ಟು ಜನರ ಗಮನ ಸೆಳೆಯುವುದು ಮಾಮೂಲಿ. ಎಲ್ ಜಿ ಹೊರತಂದಿರುವ ಆಪ್ಟಿಮಸ್ ಒನ್ ನಿಯಮಿತ ಮೊಬೈಲ್ ಗಳ ಹಿಂಬದಿ ಹೊದಿಕೆಯಲ್ಲಿ ಚಿನ್ನದ ಬಣ್ಣದಲ್ಲಿ ವಿಶ್ವಕಪ್ 2011 ಟ್ರೋಫಿಯ ಚಿತ್ರವನ್ನು ಕೆತ್ತಲಾಗಿದೆ. ಆಕರ್ಷಕವಾದ ಈ ಚಿತ್ರದ ಜೊತೆಗೆ ಉತ್ತಮ ಸ್ಮಾರ್ಟ್ ಫೋನ್ ಸೌಲಭ್ಯಗಳುಳ್ಳ ಈ ಮೊಬೈಲ್ ಯುವ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯುತ್ತದೆ ಎಂಬ ನಂಬಿಕೆ ಎಲ್ ಜಿ ಸಂಸ್ಥೆಗಿದೆ.
ಸುಮಾರು 1000 ಮೊಬೈಲ್ ಫೋನ್ ಗಳು ಮಾತ್ರ ಲಭ್ಯವಿದ್ದು, ತಕ್ಷಣವೇ ನಿಮ್ಮ ಸಮೀಪದ ಎಲ್ ಜಿ ಡೀಲರ್ ಅಥವಾ ಎಲೆಕ್ಟ್ರಿಕ್ ಮಳಿಗೆಯನ್ನು ಸಂಪರ್ಕಿಸುವುದು ಒಳಿತು. ಆಂಡ್ರ್ಯಾಡ್ 2.2 ಫ್ರಾಯೊ ಆಪರೇಟಿಂಗ್ ಸಿಸ್ಟಮ್ ಉಳ್ಳ ಈ ಮೊಬೈಲ್ 600 MHz ಪ್ರೊಸೆಸರ್ ನೊಂದಿಗೆ ಶಕ್ತಿಯುತವಾಗಿದೆ. ಎಲ್ಲಾ ಸ್ಮಾರ್ಟ್ ಫೋನ್ ಗಳಿರುವಂತೆ ವೈ ಫೈ, ಬ್ಲೂಟೂಥ್, ಎಫ್ ಎಂ ರೇಡಿಯೋ ಇದ್ದು ಜೊತೆಗೆ 3.15 ಮೆಗಾ ಪಿಕ್ಸಲ್ ಕೆಮೆರಾ, 3.2 ಇಂಚಿನ ಟಚ್ ಸ್ಕ್ರೀನ್ ಆಕರ್ಷಕವಾಗಿದೆ. 170 MB ಆಂತರಿಕ ಮೆಮೋರಿ ಜೊತೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 ಜಿಬಿ ವರೆಗೂ ಮೆಮೋರಿ ವಿಸ್ತರಣೆ ಮಾಡಿಕೊಳ್ಳುವ ಸೌಲಭ್ಯವಿದೆ.
ಎಲ್ ಜಿ ಆಪ್ಟಿಮಸ್ ಒನ್ ವಿಶೇಷತೆಗಳು :
* 3.2 ಇಂಚು ಟಿಎಫ್ ಟಿ ಟಚ್ ಸ್ಕ್ರೀನ್
* 3.15 ಮೆಗಾ ಪಿಕ್ಸಲ್ ಕೆಮೆರಾ
* ಆಂಡ್ರ್ಯಾಡ್ 2.2 ಫ್ರಾಯೊ(2.3 ಆವೃತ್ತಿ ಅಪಗ್ರೇಡ್ ಸೌಲಭ್ಯ)
* ವೈ ಫೈ, 3ಜಿ, ಜಿಪಿಎಸ್, ಜಿಪಿಆರ್ ಎಸ್ , ಬ್ಲೂಟೂಥ್ 2.1
* ಫೇಸ್ ಹಾಗೂ ಸ್ಮೈಲ್ ಡಿಟೆಕ್ಷನ್, VGA ವಿಡಿಯೋ.
* 512 MB RAM.
* 170 MB ಆಂತರಿಕ ಮೆಮೋರಿ, 32 ಜಿಬಿ ವಿಸ್ತರಣೆ ಸೌಲಭ್ಯ.
* ಡಿಜಿಟಲ್ ಕಾಂಪಸ್, ಡಾಕ್ಯುಮೆಂಟ್ ವ್ಯೂವರ್, ಸಾಮಾಜಿಕ ಜಾಲ ತಾಣ ಸಂಪರ್ಕ.
* ಸ್ಟಿರಿಯೋ ಎಫ್ ಎಂ ರೇಡಿಯೋ
* Li-Ion 1500 mAh ಬ್ಯಾಟರಿ.
ವಿಶ್ವಕಪ್ 2011ಗಾಗಿ ಎಲ್ ಜಿ ಹೊರ ತಂದಿರುವ ಆಪ್ಟಿಮಸ್ ಒನ್ ನಿಯಮಿತ ಮೊಬೈಲ್ ಗಳು ದೇಶದ ಎಲ್ಲಾ ಪ್ರಮುಖ ಮಳಿಗೆಗಳಲ್ಲಿ ಲಭ್ಯವಿದೆ. ಅಭಿಮಾನಿಗಳನ್ನು ಗಮನದಲ್ಲಿಟ್ಟು ವಿನ್ಯಾಸಗೊಳಿಸುವ ಈ ಮೊಬೈಲ್ ಬೆಲೆ 12,990. ಇನ್ನೇಕೆ ತಡ, ಅಭಿಮಾನಿಗಳೆ ಈ ಮೊಬೈಲ್ ಅನ್ನು ತ್ವರಿತವಾಗಿ ನಿಮ್ಮದಾಗಿಸಿಕೊಳ್ಳಿ.












Click it and Unblock the Notifications