ಕೂಡ್ಲಿಗಿ ಬಳಿ ಭೀಕರ ಅಪಘಾತಕ್ಕೆ ಮೂವರ ಬಲಿ
ಬಳ್ಳಾರಿ,
ಮಾ. 5 : ಶುಕ್ರವಾರ ಸಂತೆಗೆ ಆಗಮಿಸುತ್ತಿದ್ದ ಆಟೋ ಮರಕ್ಕೆ ಡಿಕ್ಕಿ ಹೊಡೆದ ಕಾರಣ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮೃತಪಟ್ಟಿದ್ದು, 6 ಜನರು ತೀವ್ರವಾಗಿ ಗಾಯಗೊಂಡ ಘಟನೆ ಕೂಡ್ಲಿಗಿಯ ಕೆರೆ ಕಾವಲರಹಟ್ಟಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. id="toptextpromo">ಮೃತರು
ಆಟೊ ಚಾಲಕ ಅಮರದೇವರಗುಡ್ಡ ಗೊಲ್ಲರಹಟ್ಟಿಯ ಜಯಪ್ಪ(20), ಗಿಡ್ಡ ಚಿತ್ತಪ್ಪ(25), ನಾಗಜ್ಜ(68). ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತೀವ್ರವಾಗಿ
ಗಾಯಗೊಂಡಿರುವ ಓಬಳೇಶ್, ಚಿತ್ತಪ್ಪ, ನಾಗಪ್ಪ, ಬಸವರಾಜ್, ಜಗದೀಶ್, ನಾಗಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications