ಸುರತ್ಕಲ್ ಸಂತೆಗೆ ತುರ್ತು ಚಿಕಿತ್ಸೆ ಆಗಬೇಕಿದೆ

ಸಮಸ್ಯೆ1:ಹೀಗೆ ನಗರ ಪಾಲಿಕೆ ತೋರಿಸಿದ ಹೊಸ ಜಾಗದಲಿ ಪ್ರತಿ ಬುಧವಾರ ನಡೆಯುವ ಸಂತೆಯಲ್ಲಿ ನಡೆಯುತ್ತಿದೆ. ಸಂತೆಯಲ್ಲಿ ವರ್ತಕರಿಗೆ ಕುಳಿತುಕೊಳ್ಳಲು ಸೂಕ್ತ ಸ್ಥಳ ಇಲ್ಲದ ಕಾರಣ. ಇದರ ಪರಿಣಾಮ ಸುರತ್ಕಲ್ ಪೇಟೆಯಿಡೀ ಸಂತೆಮಾರುಕಟ್ಟೆಯಾಗಿ ಪರಿವರ್ತನೆಗೊಳ್ಳುತ್ತಿದೆ. ಸಂತೆ ಇದ್ದ ಜನ ರಸ್ತೆಯಲ್ಲಿ ವಾಹನವಿರಲಿ, ಜನ ಕೂಡಾ ಓಡಾಡಲು ಸಾಧ್ಯವಾಗುವುದಿಲ್ಲ.
ಎರಡು ಸಂತೆ ಚಿಂತೆ: ರೂಢಿಯಂತೆ ಪ್ರತಿ ಬುಧವಾರ ಸುರತ್ಕಲ್ ಸಂತೆ ನಡೆಯುತ್ತಿತ್ತು. ಆದರೆ, ಈಗ ಬೇಡಿಕೆ ಆಧಾರದ ಮೇಲೆ ಆದಿತ್ಯವಾರವೂ ಸಂತೆ ಶುರುವಾಗಿದೆ. ಇದಕ್ಕೆ ಕಾರಣ ಹತ್ತಿರದಲ್ಲಿ ತಲೆಯೆತ್ತಿರುವ ಭಾರೀ ಕಂಪೆನಿಗಳು. ಎಸ್‌ಇಝಡ್, ಎಂಆರ್ ಪಿಎಲ್‌ನಂತಹ ಬೃಹತ್ ಕಂಪೆನಿಗಳು. ಇಲ್ಲಿನ ದಿನಗೂಲಿ ನೌಕರರು, ಹೊರರಾಜ್ಯದ ಕಾರ್ಮಿಕರು ತಮ್ಮ ದೈನಂದಿನ ಪಡಿತರ, ಆಹಾರ ವಸ್ತು, ಮತ್ತಿತರ ಅವಶ್ಯಕತೆಗಳಿಗಾಗಿ ಭಾನುವಾರದ ಸಂತೆಯನ್ನೇ ಆಶ್ರಯಿಸಿದ್ದಾರೆ. ಭಾನುವಾರ ರಜೆ ದಿನವಾದ್ದರಿಂದ ವ್ಯಾಪಾರದ ಭರಾಟೆ, ಜನಜಂಗುಳಿ ಇನ್ನೂ ಅಧಿಕವಾಗಿರುತ್ತದೆ ಎಂದು ಪ್ರತ್ಯೇಕ ಹೇಳಬೇಕಿಲ್ಲ.
ಜನಪ್ರಿಯ ಸುರತ್ಕಲ್ ಸಂತೆ: ಇಲ್ಲಿ ತರಕಾರಿ, ಮೀನು, ಮಾಂಸ ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆಯೂ ಇದ್ದು, ಜನಪ್ರಿಯತೆ ಗಳಿಸಿದೆ. ಆದರೆ ಸಂತೆಗೆ ಸಾಕಷ್ಟು ಸೂಕ್ತ ಸ್ಥಳಾವಕಾಶ ಇಲ್ಲದಿರುವ ಕಾರಣ ಮೀನು, ಮಾಂಸ ಮಾರಾಟದ ಹತ್ತಿರವೇ ತರಕಾರಿ ಮಾರಾಟ ಮಾಡಲಾಗುತ್ತದೆ. ಎಲ್ಲದರ ತ್ಯಾಜ್ಯವನ್ನು ಮಾರಾಟಗಾರರು ಬೇಕಾಬಿಟ್ಟಿ ಎಸೆಯುವ ಕಾರಣ ಮಾರುಕಟ್ಟೆಯ ಪರಿಸರ ಗಬ್ಬುನಾತ ಹೊಡೆಯುತ್ತದೆ.
ಸಮಸ್ಯೆ 2: ಸಮೀಪದ ವೀನಸ್ ಆಸ್ಪತ್ರೆ ಕಂಪೌಂಡ್‌ಗೆ ತಾಗಿಕೊಂಡೇ ವರ್ತಕರು ಕುಳಿತು ವ್ಯಾಪಾರ ಮಾಡುತ್ತಾರೆ. ಆಸ್ಪತ್ರೆಗೆ ಹೋಗಿ ಬರುವ ಜನರಿಗೆ ಸಮಸ್ಯೆ. ಅತ್ತ ಆಸ್ಪತ್ರೆ ತ್ಯಾಜ್ಯಗಳನ್ನು ಹೆಕ್ಕಿ ವಿಂಗಂಡಿಸುವ ಸರಿಯಾದ ವ್ಯವಸ್ಥೆಯಿಲ್ಲ. ಸಂತೆಗೆ ಹೋಗುವ ಗ್ರಾಹಕರ ವಾಹನಗಳನ್ನು ನಿಲ್ಲಿಸಲು ಸೂಕ್ತ ವ್ಯವಸ್ಥೆ ಇಲ್ಲ. ಗ್ರಾಹಕರ ನಡುವೆ ಕಿತ್ತಾಟ ಸಾಮಾನ್ಯ ದೃಶ್ಯವಾಗಿದೆ.
ನಿರ್ಮಲ ನಗರ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತಾ ಕಾಮಗಾರಿಯನ್ನು ಗುತ್ತಿಗೆ ಪಡೆದಿರುವವರು, ಮನಪಾ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗದ ತುರ್ತು ಅಗತ್ಯವಿದೆ. ನಗರದ ಸೌಂದರ್ಯ, ನಾಗರೀಕರ ಸ್ವಾಸ್ಥ್ಯಕ್ಕೆ ಹಾನಿಕರವಾಗಿರುವ ವ್ಯವಸ್ಥೆ ಮುಕ್ತಾಯ ಹಾಡಬೇಕಿದೆ. 0824-2220344, 0824-2220306 ಪಾಲಿಕೆ ಸಂಖ್ಯೆಗೆ ಕರೆ ಮಾಡಿ ದೂರಿತ್ತರು ಪ್ರಯೋಜನವಾಗಿಲ್ಲ. ಮೇಲಾಗಿ ಮಂಗಳೂರು ಸಿಟಿ ವೆಬ್ ಸೈಟ್ ನಲ್ಲಿ ನಿರ್ಮಲ ನಗರ ಕಾರ್ಯಕ್ರಮ ಪುಟ ತೆರೆಯುತ್ತಿಲ್ಲ. ದಯವಿಟ್ಟು ಗಮನಿಸಿ.












Click it and Unblock the Notifications