ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ರೇಡಿಯೋ ಮಿತ್ರ

SSLC, Akashavani programme
ಬೆಂಗಳೂರು, ಮಾ.3 : ಏಪ್ರಿಲ್ 1 ರಿಂದ 13 ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದ್ದು, ಬಹಳಷ್ಟು ಪ್ರೌಢಶಾಲೆಗಳಲ್ಲಿ ಮಾರ್ಚ್ 5 ರವರೆಗೆ ಪೂರ್ವಸಿದ್ದತಾ ಪರೀಕ್ಷೆ ನಡೆಯುತ್ತಿದೆ. ಪೂರ್ವಸಿದ್ದತೆ ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳು ಕೊನೆಯ ಹಂತದ ಪರೀಕ್ಷೆಗೆ ಸಿದ್ಧರಾಗಲು ಪ್ರಶ್ನೆ ಪತ್ರಿಕೆಯ ಮಾದರಿಗೆ ಅನುಗುಣವಾಗಿ ಸಿದ್ದತೆ ನಡೆಸಲು ಬೆಂಗಳೂರು ಆಕಾಶವಾಣಿ ವಿಶೇಷ ಕಾರ್ಯಕ್ರಮ ಸರಣಿಯನ್ನು ಮಾರ್ಚ್ 7 ರಿಂದ ಪ್ರಸಾರಿಸಲಿದೆ.

ಈ ಸರಣಿಯು ಸೋಮವಾರದಿಂದ ಗುರುವಾರದವರೆಗೆ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30 ರವರೆಗೆ ನೇರ ಪ್ರಸಾರದಲ್ಲಿ ಪ್ರಸಾರವಾಗಲಿದೆ. ಈ ಸರಣಿಯಲ್ಲಿ ಮೊದಲ 40 ನಿಮಿಷ ವಿಷಯ ಸಿದ್ದತೆ ಹಾಗೂ ಕೊನೆಯ 20 ನಿಮಿಷ ವಿದ್ಯಾರ್ಥಿಗಳು ನೇರವಾಗಿ ವಿಷಯದ ಸಮಸ್ಯೆ ಚರ್ಚಿಸಲು ಅವಕಾಶ ಇದೆ. ಈ ಕಾರ್ಯಕ್ರಮದ ಕಲ್ಪನೆ ಹಾಗೂ ನಿರ್ಮಾಣ ಎಸ್. ಆರ್. ಭಟ್ ಅವರದ್ದು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಮಾರ್ಚ್ 7 ರಂದು ಕನ್ನಡ ಪ್ರಥಮ ಭಾಷೆ ಮಾರ್ಚ್ 8 ರಂದು ವಿಜ್ಞಾನ ವಿಷಯದಲ್ಲಿ , ಮಾರ್ಚ್ 9ರಂದು ಗಣಿತ ವಿಷಯ, ಮಾರ್ಚ್ 10 ರಂದು ಸಮಾಜ ವಿಜ್ಞಾನ, ಮಾರ್ಚ್ 14 ರಂದು ದ್ವಿತೀಯ ಭಾಷೆ ಇಂಗ್ಲೀಷ್, ಮಾರ್ಚ್ 15 ರಂದು ದ್ವಿತೀಯ ಭಾಷೆ ಹಿಂದಿ, ಮಾರ್ಚ್ 16 ರಂದು ಪ್ರಥಮ ಭಾಷೆ ಸಂಸ್ಕೃತ ಹಾಗೂ ಮಾರ್ಚ್ 17 ರಂದು ಪ್ರಥಮ ಭಾಷೆ ಇಂಗ್ಲೀಷ್ ವಿಷಯಗಳ ಸಮಸ್ಯೆ ಚರ್ಚಿಸಬಹುದು.

ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ಶಿಕ್ಷಣದ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಕೇಳಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಪ್ರಶ್ನೆ ಪತ್ರಿಕೆ ಸ್ವರೂಪ ತಿಳಿಯಲು ಇದು ಸಹಕಾರ, ವಿದ್ಯಾರ್ಥಿಗಳು ಪೋನ್ ಮಾಡಲು ದೂರವಾಣಿ ಸಂಖ್ಯೆ 080-22370477/22370488/99, ಈ ಕಾರ್ಯಕ್ರಮವನ್ನು ಡಿ.ಟಿ.ಎಚ್ ಮುಖಾಂತರ ದೇಶದ ಎಲ್ಲಾ ಭಾಗಗಳಲ್ಲಿ ಕೇಳಲು ಸಾಧ್ಯ ಎಂದು ಆಕಾಶವಾಣಿಯ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+