ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಭ್ರಷ್ಟರ ವಿರುದ್ಧ ದಂಡಿ ನಡಿಗೆ 2

By Mahesh
|
Google Oneindia Kannada News

Mahathma Gandhi Dandi March repeats
ವಾಷಿಂಗ್ಟನ್, ಮಾ.1: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ವಿದೇಶಿ ಆಳ್ವಿಕೆ ವಿರುದ್ಧ ಆರಂಭಿಸಿದ ದಂಡಿ ಸತ್ಯಾಗ್ರಹ ನಡಿಗೆ ಅಥವಾ ಉಪ್ಪಿನ ಸತ್ಯಾಗ್ರಹ ಯಾತ್ರೆಯಿಂದ ಪ್ರೇರಿತರಾಗಿರುವ ಅನಿವಾಸಿ ಭಾರತೀಯ ಗುಂಪೊಂದು ಮತ್ತೊಮ್ಮೆ ದಂಡಿ ಯಾತ್ರೆ ಗೆ ಸಿದ್ಧತೆ ನಡೆಸಿದೆ. ಅಮೆರಿಕದಲ್ಲಿ ಸುಮಾರು 240 ಮೈಲಿಗಳ ದೂರ ಭ್ರಷ್ಟರ ವಿರುದ್ಧ ನಡಿಗೆ ನಡೆಸಲು ಎನ್ನಾರೈಗಳು ಯೋಜಿಸಿದ್ದಾರೆ. ಇದಕ್ಕೆ ದಂಡಿ ಯಾತ್ರೆ 2 ಎಂದು ಹೆಸರಿಸಿದ್ದಾರೆ.

ಮಾರ್ಚ್ 12ರಂದು ಸ್ಯಾನ್ ಡಿಯಾಗೋದ ಮಾರ್ಟಿನ್ ಲೂಥರ್ ಕಿಂಗ್ ಜೂ. ಸ್ಮಾರಕ ಪಾರ್ಕ್ ನಿಂದ "ದಂಡಿ ಮಾರ್ಚ್ II' ಆರಂಭವಾಗಲಿದ್ದು ಲಾಸ್ ಏಂಜಲೀಸ್ ಮೂಲಕ ಹಾದು ಮಾ.26ರಂದು ಸ್ಯಾನ್ ಫ್ರಾನ್ಸಿಸ್ಕೋ ಬಳಿಯ ಗಾಂಧಿ ಪ್ರತಿಮೆ ಬಳಿ ಕೊನೆಗೊಳ್ಳಲಿದೆ.

ಅಮೆರಿಕದ ಎಲ್ಲಾ ಪ್ರಮುಖ ನಗರಗಳು, ಭಾರತದ 10 ಮುಖ್ಯ ನಗರಗಳು ಹಾಗೂ ಜಾಗತಿಕವಾಗಿ 8 ವಿವಿಧ ದೇಶಗಳಲ್ಲಿ ಭ್ರಷ್ಟರ ವಿರುದ್ಧದ ನಡಿಗೆಗೆ ಬೆಂಬಲ ವ್ಯಕ್ತವಾಗಿದೆ. ಮಾ.26 ರಂದು ಏಕ ಕಾಲಕ್ಕೆ ಸಮಾರಂಭ ಆಯೋಜನೆ ಕೊಂಡಿದೆ ಎಂದು ಆಯೋಜಕರು ಹೇಳಿದ್ದಾರೆ. ವಿದೇಶಗಳಲ್ಲಿನ ಕಪ್ಪು ಹಣ ಮರಳಿ ದೇಶಕ್ಕೆ ತರುವುದು, ಆರ್ಥಿಕ ಅಸಮತೋಲನ ಹೋಗಲಾಡಿಸುವುದು, ಜನ ಲೋಕಪಾಲ್ ಮಸೂದೆ ಮಂಡನೆಗೆ ಆಗ್ರಹಿಸುವುದು ಇವೇ ಮುಂತಾದ ಉದ್ದೇಶಗಳನ್ನು ದಂಡಿ ನಡಿಗೆ II ಹೊಂದಿದೆ.

2ಜಿ ಹಗರಣದ ಅವ್ಯವಹಾರದಲ್ಲಿ ಹರಿದಿರುವ 1.76 ಲಕ್ಷ ಕೋಟಿ ರು ಕೇವಲ ಭ್ರಷ್ಟಾಚಾರಾದ ಒಂದು ಸ್ಯಾಂಪಲ್ ಆಗಿದೆ. ದೇಶದಲ್ಲಿ ಶೇ. 80 ರಷ್ಟು ಜನರ ದಿನಗೂಲಿ 2 ಡಾಲರ್ ಗಿಂತ ಕಮ್ಮಿ ಇದೆ. ಮಕ್ಕಳ ಆರೋಗ್ಯ, ಆಹಾರ ವಿಷಯದಲ್ಲೂ ಸರ್ಕಾರ ಎಚ್ಚೆತ್ತುಕೊಂಡಿಲ್ಲದಿರುವುದು ದುರದುಷ್ಟಕರ ಎಂದು ಆಯೋಜಕರು ಹೇಳಿದ್ದಾರೆ.

ಅಮೆರಿಕದಲ್ಲಿ ನಡೆಯುವ ಭ್ರಷ್ಟರ ವಿರುದ್ಧದ ದಂಡಿ ನಡಿಗೆ 2 ಯಾತ್ರೆಗೆ ಭಾರತದಿಂದ ಲೋಕ ಸತ್ತಾ ಪಕ್ಷ, ದ ಫಿಫ್ತ್ ಪಿಲ್ಲರ್(ಚೆನ್ನೈ), ಯೂಥ್ ಫಾರ್ ಬೆಟರ್ ಇಂಡಿಯಾ(ಹೈದರಾಬಾದ್), ಸಾಕು(ಬೆಂಗಳೂರು) ಹಾಗೂ ಸೇವ್ ಇಂಡಿಯಾ ಫೋರಂ ಕರಪ್ಷನ್ ಸಂಸ್ಥೆಗಳಿಂದ ಬೆಂಬಲ ಸಿಕ್ಕಿದೆ. ಐತಿಹಾಸಿಕವಾಗಿ ಈ ನಡಿಗೆ ಮಹತ್ವ ಪಡೆಯುವುದರ ಜೊತೆಗೆ ಭ್ರಷ್ಟಾಚಾರದ ವಿರುದ್ಧ ಪ್ರಬಲವಾಗಿ ದನಿ ಎತ್ತಲು ಸಹಾಯಕವಾಗಲಿದೆ.

ದಂಡಿ ಯಾತ್ರೆ: ಉಪ್ಪಿನ ಮೇಲಿನ ತೆರಿಗೆಯನ್ನು ತೆಗೆದುಹಾಕುವಂತೆ ಒತ್ತಾಯಿಸಿ 1930ರಲ್ಲಿ 80 ಸತ್ಯಾಗ್ರಹಿಗಳು ಮಹಾತ್ಮಾ ಗಾಂಧೀ ನೇತೃತ್ವದಲ್ಲಿ ಸಾಬರಮತಿಯಿಂದ ಸೂರತ್ ನ ಕರಾವಳಿಯವರೆಗೆ 240 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಯಾತ್ರೆ ಕೈಗೊಂಡರು. ಮಾರ್ಚ್ 12ರಂದು ಆರಂಭವಾದ ದಂಡಿನ ಸತ್ಯಾಗ್ರಹ ಯಾತ್ರೆ ಏಪ್ರಿಲ್ 06 1930ರಂದು ದಂಡಿಯಲ್ಲಿ ಪರ್ಯವಸಾನಗೊಂಡಿತು.

English summary
A group of Non Resident Indians in United States are creating history by repeating Dandi March. 240-mile walk in US against corruption in India with resembling Mahatma Gandhi's freedom struggle Dandi March against British Rule. This anti corruption movement is supported by Lok Satta Party, The 5th Pillar from Chennai. Saaku from Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X