ಚೆನ್ನೈಗೆ 1250 ಕೋಟಿ, ನಮಗ್ಯಾಕೆ 500 ಕೋಟಿ?

ಬಿಬಿಎಂಪಿಯ ಪ್ರತಿ ವಾರ್ಡ್ ಗಳಿಗೆ ಎರಡು ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಅಭಿವೃದ್ಧಿ ಕಾಮಗಾರಿಗಳು ತಿಂಗಳ ಕೊನೆಗೆ ಆರಂಭವಾಗಲಿದೆ ಎಂದರು. ರಸ್ತೆ, ಒಳ ಚರಂಡಿ, ಕುಡಿಯುವ ನೀರು, ಬೀದಿ ದೀಪ, ಬಸ್ ವ್ಯವಸ್ಥೆ ಸೇರಿದಂತೆ ನಾಗರೀಕರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲು ಬೇಕಾದ ಅಗತ್ಯ ಹಣವನ್ನು ಸರ್ಕಾರ ಒದಗಿಸುತ್ತಿದೆ. ಆಯಾ ವಾರ್ಡ್ ನ ಕಾರ್ಪೊರೇಟ್ ಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ರಾಜ್ಯಸಭೆ ಅಡ್ಡಮತ ಭಯ?: ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ಅವರ ಅವಿರೋಧ ಆಯ್ಕೆ ತಡೆಯಲು ಪಕ್ಷೇತರ ಅಭ್ಯರ್ಥಿ ಮರಳಸಿದ್ದಪ್ಪ ಅವರನ್ನು ಕಾಂಗ್ರೆಸ್, ಜೆಡಿಎಸ್ ಬೆಂಬಲಿಸುತ್ತಿದೆ. ಬಿಜೆಪಿಯಲ್ಲಿ ಆಂತರಿಕ ಕಲಹ ತಂದು, ಅಸಮಾಧಾನಗೊಂಡ ನಾಯಕರನ್ನು ಒಗ್ಗೂಡಿಸಿ, ಅಡ್ಡಮತ ಹಾಕಿಸಬಹುದು ಎಂದು ವಿಪಕ್ಷಗಳು ಕನಸು ಕಾಣುತ್ತಿವೆ. ಬಿಜೆಪಿ ತನ್ನೆಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದ್ದು, ಹೇಮಮಾಲಿನಿ ಅವರಿಗೆ ಜಯ ಖಂಡಿತ ಎಂದು ಅಶೋಕ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶಾಸಕರ ಬಲಾಬಲ ಇಂತಿದೆ:
ಬಿಜೆಪಿ: 106(ಸ್ಪೀಕರ್ ಸೇರಿ), ವರ್ತೂರು ಪ್ರಕಾಶ್ ಸೇರಿಸಿದರೆ 107
ಕಾಂಗ್ರೆಸ್ : 71
ಜೆಡಿಎಸ್ : 27
ಬಲಾಬಲದ ಪ್ರಕಾರ ಬಿಜೆಪಿಗೆ 9 ಮತಗಳ ಬೆಂಬಲವಿದೆ. ಈ ನಡುವೆ ಅನರ್ಹಗೊಂಡಿರುವ ಐದು ಜನ ಶಾಸಕರಿಗೆ ಮತ ಹಾಕಲು ಸುಪ್ರೀಂಕೋರ್ಟ್ ಅವಕಾಶ ನೀಡಿಲ್ಲದಿರುವುದು ಬಿಜೆಪಿ ಲಾಭವಾಗಿದೆ. ಒಂದು ವೇಳೆ ಈ ಐವರಿಗೆ ಮತ ಹಾಕುವ ಛಾನ್ಸ್ ಸಿಕ್ಕಿದ್ದರೆ, ರಾಜಕೀಯ ಲೆಕ್ಕಾಚಾರ, ಕುದುರೆ ಕತ್ತೆ ವ್ಯಾಪಾರಗಳು ಜೋರಾಗಿ ನಡೆಯುತ್ತಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.












Click it and Unblock the Notifications