ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ : ಯಾವುದು ಅಗ್ಗ ಯಾವುದು ತುಟ್ಟಿ?

By Mahesh
|
Google Oneindia Kannada News

ನವದೆಹಲಿ, ಫೆ. 28: ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಯುಪಿಎ ಸರ್ಕಾರದ ಆರನೇ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.ಎಲ್ಲಕ್ಕಿಂತ ಮುಖ್ಯವಾಗಿ ಈ ಬಾರಿಯೂ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಏರಿಸಲಾಗಿದೆ. ತೆರಿಗೆ ವಿನಾಯತಿಯನ್ನು 1.6 ಲಕ್ಷ ರು.ನಿಂದ 1.80 ಲಕ್ಷ ರು.ಗಳಿಗೆ ಏರಿಸಲಾಗಿದೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 5 ಲಕ್ಷರೂ. ವರೆಗೂ ವಿನಾಯತಿ ನೀಡಲಾಗಿದೆ. ಹಿರಿಯ ನಾಗರಿಕರಿಗೆ 2.4 ಲಕ್ಷ. ರು ನಿಂದ 2.5 ಲಕ್ಷ ರು. ಗೆ ಏರಿಕೆ. ಸ್ತ್ರೀಯರ ಆದಾಯ ತೆರಿಗೆ ವಿನಾಯತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಇದಲ್ಲದೆ, ಶಿಕ್ಷಣ ಕ್ಷೇತ್ರಕ್ಕೆ 52,057 ಕೋಟಿ ಅನುದಾನ ಹಾಗೂ ಆರೋಗ್ಯ ಕ್ಷೇತ್ರಕ್ಕೆ 26,760 ಕೋಟಿ ಅನುನ ನೀಡುವ ಮೂಲಕ ಆರೋಗ್ಯ ಹಾಗೂ ಶಿಕ್ಷಣದ ಮಹತ್ವ ಸಾರಿದ್ದಾರೆ. ಹಣದುಬ್ಬರ, ತೆರಿಗೆ ವಿನಾಯತಿ, ಗ್ರಾಮೀಣ ಭಾರತದ ಜ್ಞಾನ ವಲಯ ಅಭಿವೃದ್ಧಿ, ಶಿಕ್ಷಣ ಮುಂತಾದ ಕ್ಷೇತ್ರಗಳ ಮೇಲೆ ಹೆಚ್ಚು ಪ್ರಸಕ್ತ ಬಜೆಟ್ ಕೇಂದ್ರಿಕೃತವಾಗಿದೆ. ನಂದನ್ ನಿಲೇಕಣಿ ನೇತೃತ್ವದಲ್ಲಿ ಜಾರಿಯಲ್ಲಿರುವ ಆಧಾರ್ ವಿಶಿಷ್ಟ ಗುರುತಿನ ಚೀಟಿ ಮಹತ್ವದ ಬಗ್ಗೆ ವಿವರಿಸಿದ ಪ್ರಣಬ್ 2011ರ ಅಕ್ಟೋಬರ್ 01 ರಿಂದ ದಿನವೊಂದಕ್ಕೆ 10 ಲಕ್ಷ ಆಧಾರ್ ಗುರುತಿನ ಚೀಟಿ ಕಾರ್ಡ್ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದರು.

ಪ್ರಮುಖಾಂಶಗಳು :
* ವಿದೇಶದಲ್ಲಿ ಕಪ್ಪು ಹಣ ವಾಪಾಸ್ಸಾತಿಗೆ ಪಂಚಸೂತ್ರ.
* ಬೆಂಗಳೂರು ಮೆಟ್ರೋಗೆ ಆರ್ಥಿಕ ನೆರವು.
* ಆದಾಯ ತೆರಿಗೆ ವಿನಾಯತಿ ಮಿತಿ 1.6 ಲಕ್ಷ ರು. ನಿಂದ 1.8 ಲಕ್ಷ ರು. ಗಳಿಗೆ ಏರಿಕೆ.
* ರಾಷ್ಟ್ರೀಯ ಕೃಷಿ ಯೋಜನಾ ವತಿಯಿಂದ ಮುಂದಿನ ಮೂರು ವರ್ಷದಲ್ಲಿ ಗ್ರಾಮೀಣ ಭಾರತದಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ
* ಶಿಕ್ಷಾ ಅಭಿಯಾನಕ್ಕೆ 21,000 ಕೋಟಿ ರು ಅನುದಾನ. ಶಿಕ್ಷಣ ಕ್ಷೇತ್ರಕ್ಕೆ ಒಟ್ಟಾರೆ 52,057 ಕೋಟಿ ರು. (ಶೇ. 24 ಏರಿಕೆ)
* ಗ್ರಾಮೀಣ ದೂರ ಸಂಪರ್ಕ ಜಾಲ ಅಭಿವೃದ್ಧಿಗೆ 10, 000 ಕೋಟಿ ರು.
* ಅಂಗನವಾಡಿ ಕಾರ್ಯಕರ್ತರ ವೇತನದಲ್ಲಿ ಏರಿಕೆ. ಪ್ರತಿ ತಿಂಗಳು ರು. 1,500 ರಿಂದ 3,000 ರು. ಸಹಾಯಕರಿಗೆ ರು. 750 ನಿಂದ 1,500 ರು ನಿಗದಿ.
* ಅನಿವಾಸಿ ಭಾರತೀಯರು ಮ್ಯೂಚಿಯಲ್ ಫಂಡ್ ನಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ.
* ಸ್ಟಾಂಪ್ ಹಾಗೂ ರಿಜಿಸ್ಟ್ರೇಷನ್ ಆಧುನೀಕರಣ ವ್ಯವಸ್ಥೆ ರೂಪಿಸಲು 300 ಕೋಟಿ ರು.
* ಬಿಪಿಎಲ್ ಕಾರ್ಡ್ ಹೊಂದಿರುವ ತಿಂಗಳ ವೇತನದಾರರು(ಪೆನ್ಷನ್) ವಯೋಮಿತಿ 65 ರಿಂದ 60ಕ್ಕೆ ಇಳಿಕೆ.
* ಅಗತ್ಯ ಆಹಾರ ಹಾಗೂ ಇಂಧನ ವಸ್ತುಗಳ ಮೇಲೆ ಕೇಂದ್ರ ಅಬಕಾರಿ ತೆರಿಗೆ ವಿನಾಯತಿ.
* ಬ್ಯಾಟರಿ ಚಾಲಿತ ವಾಹನಗಳ ಮೇಲೆ ಸುಂಕ ಕಡಿತ.
* ರೈತರಿಗೆ ಶೇ.3ರ ಬಡ್ಡಿದರದಲ್ಲಿ ಕೃಷಿ ಸಾಲ.
*ದೇಶದಲ್ಲಿ 15 ಮೆಗಾ ಫುಡ್ ಪಾರ್ಕ್ ಗಳ ಸ್ಥಾಪನೆ.
* ರಕ್ಷಣಾ ಇಲಾಖೆಗೆ 1.64 ಲಕ್ಷ ಕೋಟಿ ರು.

ಯಾವುದು ಅಗ್ಗ ಯಾವುದು ತುಟ್ಟಿ:

ಸುಮಾರು 12.59 ಲಕ್ಷ ರು ಕೋಟಿ ವೆಚ್ಚದ ಕೇಂದ್ರ ಬಜೆಟ್ 2011-12ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಕ್ಕಿದೆ ಎಂದು ಲೆಕ್ಕ ಹಾಕುವುದಕ್ಕಿಂತ ಜನ ಸಾಮಾನ್ಯರು ಕೇಳುವ ಮೊಟ್ಟ ಮೊದಲ ಪ್ರಶ್ನೆ ಯಾವ ವಸ್ತು ಬೆಲೆ ಏರಿದೆ ಯಾವುದು ಕಡಿಮೆಯಾಗಿದೆ. ಐಷಾರಾಮಿ ವಸ್ತು, ಪ್ರಯಾಣ, ವಾಸ್ತವ್ಯದ ಮೇಲೆ ತೆರಿಗೆ ಹೆಚ್ಚಿಸಿ ದುಬಾರಿಯಾಗಿಸಿರುವ ಪ್ರಣಬ್, ದೈನಂದಿನ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಹೆಚ್ಚು ಒತ್ತು ನೀಡಿದ್ದಾರೆ. ಈ ಮೂಲಕ ಮಧ್ಯಮ ವರ್ಗದ ಜನ ಆಶೋತ್ತರಕ್ಕೆ ಅನುಗುಣವಾಗಿ ಬಜೆಟ್ ನಲ್ಲಿ ಏರಿಕೆ, ಇಳಿಕೆ ಮಾಡಲಾಗಿದೆ.

ಅಗ್ಗ: ಡೈಪರ್ಸ್, ಮೊಬೈಲ್, ಎಲ್ ಸಿಡಿ ಟಿವಿ, ಹೋಮಿಯೋಪಥಿ ಔಷಧಿ, ಕಬ್ಬಿಣ, ಗೃಹಸಾಲ, ಸಿಮೆಂಟ್, ಗೃಹೋಪಯೋಗಿ ವಸ್ತುಗಳು, ಫ್ರಿಡ್ಜ್, ಕೃಷಿ ಯಂತ್ರೋಪಕರಣ. ಪಿಸ್ತಾ ಉತ್ಪನ್ನ, ಸೋಲಾರ್ ಉಪಕರಣ, ಸಾಬೂನು

ತುಟ್ಟಿ: ಬ್ರಾಂಡೆಡ್ ಚಿನ್ನಾಭರಣ, ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ, ಬ್ರಾಂಡೆಡ್ ಬಟ್ಟೆ, ಹೈಟೆಕ್ ಆಸ್ಪತ್ರೆ ತೆರಿಗೆ ಏರಿಕೆ,

English summary
Finance Minister Pranab Mukherjee announced union Budget 2011-12 in Lok Sabha today (Feb.28). Pranab is more concentrating on rural India development, social sector and tax exemption limit and concern over rising food inflation levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X