ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಮಿತಿ : ಯಾರ್ಯಾರಿಗೆ ಎಷ್ಟೆಷ್ಟು?

By Prasad
|
Google Oneindia Kannada News

Pranab Mukherjee
ನವದೆಹಲಿ, ಫೆ. 28 : ನಿರೀಕ್ಷೆಯಂತೆ ಪುರುಷರ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡಿರುವ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಇಂದು ಮಂಡಿಸಲಾಗಿರುವ ಕೇಂದ್ರ ಮುಂಗಡ ಪತ್ರದಲ್ಲಿ ಮಹಿಳೆಯರ ಆದಾಯ ತೆರಿಗೆ ಮಿತಿಯನ್ನು ಯಥಾಸ್ಥಿತಿ ಕಾಯ್ದಿರಿಸಿದ್ದಾರೆ.

ಆದಾಯ ತೆರಿಗೆ ಮಿತಿಯನ್ನು 1.6 ಲಕ್ಷ ರು.ನಿಂದ 1.8 ಲಕ್ಷ ರು.ಗೆ ಏರಿಸಿ ಪ್ರಣಬ್ ಮುಖರ್ಜಿಯವರು ತಮ್ಮ ವಾಗ್ದಾನವನ್ನು ಕಾಯ್ದುಕೊಂಡಿದ್ದಾರೆ. 1.6 ಲಕ್ಷ ರು.ನಿಂದ 2 ಲಕ್ಷ ರು.ವರೆಗೆ ಏರಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, 20 ಸಾವಿರ ರು.ನಷ್ಟಾದರೂ ಏರಿಸಿರುವುದು ಪುರುಷ ತೆರಿಗೆದಾರರಲ್ಲಿ ತುಸುಮಟ್ಟಿಗಾದರೂ ಸಂತಸ ತಂದಿರುತ್ತದೆ.

ಕೇಂದ್ರ ಬಜೆಟ್ : ಯಾವುದು ಅಗ್ಗ ಯಾವುದು ತುಟ್ಟಿ?

ಹಿರಿಯ ನಾಗರಿಕರ ಆದಾಯ ತೆರಿಗೆ ಮಿತಿಯನ್ನು 2.4 ಲಕ್ಷ ರು.ನಿಂದ 2.5 ಲಕ್ಷ ರು.ಗೆ ಏರಿಸಲಾಗಿದೆ. ಹಾಗೆಯೆ, ಹಿರಿಯ ನಾಗರಿಕರ ವಯೋಮಿತಿಯನ್ನು 65ರಿಂದ 60ಕ್ಕೆ ಇಳಿಸಿ ನಿವೃತ್ತ ನೌಕರರ ವೃಂದಕ್ಕೆ ಕೊಡುಗೆ ನೀಡಿದ್ದಾರೆ. 80 ವರ್ಷ ದಾಟಿದ ವಯೋವೃದ್ಧರ ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರು.ಗೆ ನಿಗದಿಪಡಿಸಲಾಗಿದೆ.

ಕಳೆದ ಬಜೆಟ್ಟಿನಲ್ಲಿ ಮಹಿಳೆಯರ ಆದಾಯ ತೆರಿಗೆ ಮಿತಿಯನ್ನು 1.9 ಲಕ್ಷ ರು.ಗೆ ನಿಗದಿಪಡಿಸಲಾಗಿತ್ತು. ಈ ಬಾರಿ ಈ ಮಿತಿಯನ್ನು ಪ್ರಣಬ್ 'ಟಚ್' ಮಾಡಲು ಹೋಗಿಲ್ಲ. ಸಹಜವಾಗಿ ಮಹಿಳಾಮಣಿಗಳು ದನಿಯೇರಿಸಿದರೂ ಆಶ್ಚರ್ಯವಿಲ್ಲ. ಆದರೆ, ಪುರುಷರ ಜೇಬಿನಲ್ಲಿ ನಾಲ್ಕು ಕಾಸು ಉಳಿಯಲಿದೆ.

ತೆರಿಗೆ ಸ್ಲ್ಯಾಬ್ : ಪುರುಷರಿಗಾಗಿ ತೆರಿಗೆ ಮಿತಿಯನ್ನು 20 ಸಾವಿರ ರು.ಯಷ್ಟು ಏರಿಸಿರುವುದರಿಂದ 1.8 ಲಕ್ಷ ರು.ನಿಂದ 5 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.10ರಷ್ಟು ತೆರಿಗೆ ಬೀಳಲಿದೆ. 5 ಲಕ್ಷ ರು.ನಿಂದ 8 ಲಕ್ಷ ರು. ಆದಾಯಕ್ಕೆ ಶೇ.20 ಮತ್ತು 8 ಲಕ್ಷ ರು. ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.

ಆದಾಯ ತೆರಿಗೆ ಮಿತಿ ಏರಿಸಿದ್ದರಿಂದ ಪುರುಷರು ಎರಡು ಸಾವಿರ ರು.ನಷ್ಟು ಹಣವನ್ನು ಉಳಿತಾಯ ಮಾಡಬಹುದು. ಹಿರಿಯ ನಾಗರಿಕರ ವಯೋಮಿತಿಯನ್ನು ಇಳಿಸಿದ್ದರಿಂದ ಅವರಿಗೂ ಲಾಭ ಕಟ್ಟಿಟ್ಟ ಬುತ್ತಿ. ಅವರು ವಾರ್ಷಿಕ ಆದಾಯದಲ್ಲಿ ಸಾವಿರ ರು. ಹೆಚ್ಚಿಗೆ ಉಳಿತಾಯ ಮಾಡಬಹುದು. ಇನ್ನು, ಮಹಿಳೆಯರ ಬಗ್ಗೆ ಪ್ರಣಬ್ ಸಾಹೇಬರು ಕನಿಕರ ತೋರದ್ದರಿಂದ ಉಳಿತಾಯ ಮಾಡಬೇಕಿದ್ದರೆ ಹೆಚ್ಚಿಗೆ ಖರ್ಚು ಮಾಡುವಂತಿಲ್ಲ.

English summary
Finance minister Pranab Mukherjee presents union budget 2011-12. Income tax limit for male has been increased from 1.6 lakhs to 1.8 lakhs. Women's income tax limit remains the same. Age limit for senior citizen too decreased from 65 to 60.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X