ನನ ಶ್ವಾನ ಸಚಿನ ಇಲ್ಲದೆ ಬೋರೋ ಬೋರು!: ವಿನ್ಸೆಂಟ್

ನವದೆಹಲಿ, ಫೆ. 23: ದಕ್ಷಿಣ ಆಫ್ರಿಕಾದ ಬೌಲಿಂಗ್ ಕೋಚ್ ಭೂಪ ಹೋಗಿ ಹೋಗಿ ತನ್ನ ನಾಯಿಗೆ ಸಚಿನ್ ಎಂದು ಹೆಸರಿಟ್ಟಿದ್ದಾನೆ. ಏನು!? ಕ್ರಿಕೆಟ್ ಜಗತ್ತಿನ ಅರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಯ:ಕಶ್ಚಿತ್ ಶ್ವಾನಕ್ಕೆ ಇಡುವುದೇ ಎಂದು ಆಗಲೇ ಗುರುಗುಟ್ಟಬೇಡಿ.

ಏಕೆಂದರೆ ಕೋಚ್ ವಿನ್ಸೆಂಟ್ ಬಾರ್ನ್, ಮುದ್ದಾದ, ಅಚ್ಚುಮೆಚ್ಚಿನ ತನ್ನ ನಾಯಿಗೆ ಸಚಿನ್ ಎಂದು ನಾಮಕರಣ ಮಾಡಿರುವುದು ತೆಂಡೂಲ್ಕರ್ ಅವರ ಗೌರವಾರ್ಥ. ಒಂದರ್ಥದಲ್ಲಿ ಅವರನ್ನು ಹಾಡಿಹೊಗಳಿ ಈ ಹೆಸರನ್ನಿಡಲಾಗಿದೆ. ಸಚಿನ್ ನಿಜಕ್ಕೂ ಸೂಪರ್ ಮ್ಯಾನ್. ಏನು ಬೇಕಾದರೂ ಮಾಡುವಷ್ಟು ಶಕ್ತಿಶಾಲಿ ಆತ. ಆತ ನನ್ನ ಅಚ್ಚುಮೆಚ್ಚಿನ ದಾಂಡಿಗ ಎಂದೆಲ್ಲ ಹೇಳಿಕೊಂಡಿದ್ದಾನೆ.

ಇದೆಲ್ಲ ಸರಿ ಈ ವಿಷಯ ಈಗೇಕೆ ಚರ್ಚೆಗೆ ಎಂದು ಪ್ರಶ್ನಿಸುತ್ತಿರುವಿರಾ!? ಅದನ್ನು ಹೇಳಿಬಿಡುತ್ತೇವೆ, ಕೇಳುವಂತವರಾಗಿ! ಕೋಚ್ ವಿನ್ಸೆಂಟ್ ದಕ್ಷಿಣ ಆಫ್ರಿಕಾ ತಂಡದ ಜತೆಗೂಡಿ ಭಾರತಕ್ಕೆ ಬಂದಿಳಿದಿದ್ದಾರೆ. ಆದರೆ ಜತೆಗೆ ತಮ್ಮ ಸಚಿನ್‌ನನ್ನು (ನಾಯಿಯನ್ನು) ಕರೆತಂದಿಲ್ಲ. ಇಲ್ಲೇ ಎಡವಟ್ಟಾಗಿರುವುದು.

'ಸಚಿನ್ ಇಲ್ಲದೆ ನನಗೆ ಜೀವನ ಬೋರಿಡುತ್ತಿದೆ' ಎಂದು ಪತ್ರಕರ್ತರೆದುರು ಬೋರಿಟ್ಟಿದ್ದಾರೆ. 'ಆದರೆ ಊರಲ್ಲಿ ಸಚಿನ್‌ನನ್ನು ಚೆನ್ನಾಗಿ ನೋಡಿಕೊಳ್ಳಿ. ಅವನ ಕ್ಷೇಮ ಸಮಾಚಾರವನ್ನು ಆಗಾಗ ತಿಳಿಸುತ್ತಿರಿ ಎಂದು ಮರೆಯದೆ ತನ್ನ ಬಂಧುಮಿತ್ರರಿಗೆ ತಿಳಿಸಿ ಬಂದಿದ್ದಾನಂತೆ' ಎಂಬಲ್ಲಿಗೆ ಸಚಿನ್ ಶ್ವಾನ ಪುರಾಣ ಮುಕ್ತಾಯವಾಗುತ್ತದೆ! ಸಚಿನ್, ಅದೇ ರೀ ನಮ್ಮ ತೆಂಡೂಲ್ಕರ್, ಇನ್ನು ಎಲ್ಲೆಲ್ಲಿ ಮಿಂಚಬೇಕೋ!?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+