ಕೊನೆಗೂ ಮುಕೇಶ್ ಅಂಬಾನಿ ರಾಯಗಢ ವಿವಿವ ರದ್ದು
ಮುಂಬಯಿ,
ಫೆ.20: ಮಹಾರಾಷ್ಟ್ರದ ರೈತರ ಸುದೀರ್ಘ ಹೋರಾಟಕ್ಕೆ ಕೊನೆಗೂ ಯಶಸ್ಸು ದೊರೆತಿದೆ. ಮುಕೇಶ್ ಅಂಬಾನಿ ಮಾಲೀಕತ್ವದ ರಾಯಗಢ ವಿಶೇಷ ಆರ್ಥಿಕ ವಲಯ ಯೋಜನೆಯನ್ನು (ಎಸ್‌ಇಜಡ್) ಮಹಾರಾಷ್ಟ್ರ ಸರಕಾರ ರದ್ದುಪಡಿಸಿದೆ. id="toptextpromo">ದೇಶದ
ಅತಿ ದೊಡ್ಡ ವಿವಿವ ಇದಾಗಬೇಕಿತ್ತು. ಆದರೆ ಇದಕ್ಕಾಗಿ ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳಲು ಇಲ್ಲಿನ ರೈತರು ಸುತರಾಂ ಒಪ್ಪಲಿಲ್ಲ. ರೈತರಿಗೆ ಮಾರಕವಾಗುವ ವಿವಿವ ಯೋಜನೆಯನ್ನು ಕೈಬಿಡಬೇಕು ಎಂದು ತೀವ್ರ ಹೋರಾಟ ನಡೆಸಿದ್ದರು. ಇದೀಗ ಭೂಮಿ ರೈತರ ಸುಪರ್ದಿಯಲ್ಲೇ ಉಳಿಯಲಿದೆ. id='are-slot-1' class='oiad oi-axt oiadv'> id='top-searched-articles'>ಮುಕೇಶ್
ನೇತೃತ್ವದ ಈ ಯೋಜನೆಗೆ ಮತ್ತೊಬ್ಬ ಉದ್ಯಮಿ ಆನಂದ್ ಜೈನ್ ಕೈಜೋಡಿಸಿದ್ದರು. ಬರೋಬ್ಬರಿ 20,000 ಎಕರೆ ಕೃಷಿ ಭೂಮಿಯ ಮೇಲೆ ಇವರ ಕಣ್ಣುಬಿದ್ದಿತ್ತು. ಇದಕ್ಕೆ ರೈತರು ವ್ಯಾಪಕ ಪ್ರತಿರೋಧವೊಡ್ಡಿದರು. 2008 ರಲ್ಲಿ ರಾಜ್ಯ ಸರಕಾರ ನ್ಯಾಯ ಪಂಚಾಯಿತಿಯನ್ನೂ ನಡೆಸಿತ್ತು. ತೀರ್ಪು ರೈತರ ಪರವಾಗಿತ್ತು. ಈ ಮಧ್ಯೆ, ಶೇ. 13ರಷ್ಟು ಭೂಮಿಯನ್ನು ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅದನ್ನೀಗ ರೈತರಿಗೆ ಮರಳಿಸುವ ಕೆಲಸವಾಗಬೇಕಿದೆ.











Click it and Unblock the Notifications