ಸಚಿನ್‌ಗೆ ರಾಜ್ಯದಿಂದ ಎರಡು ಗೌರವ ಡಾಕ್ಟರೇಟ್
ಬೆಂಗಳೂರು,
ಫೆ.20: ಕರ್ನಾಟಕದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ (RGUHS) ಗೌರವ ಡಾಕ್ಟರೇಟ್‌ಗೆ ಸಚಿನ್ ತೆಂಡೂಲ್ಕರ್ ಪಾತ್ರರಾಗಿದ್ದಾರೆ. ವಿವಿಯ ಸಿಂಡಿಕೇಟ್ ಸಭೆ ನಿರ್ಣಯಕ್ಕೆ ರಾಜ್ಯಪಾಲ ಭಾರದ್ವಾಜ್ ಸಮ್ಮತಿ ನೀಡಿದ್ದಾರೆ. ಮಾರ್ಚ್ ಕೊನೆಯ ವಾರದಲ್ಲಿ ಘಟಿಕೋತ್ಸವ ನಡೆಯುವ ನಿರೀಕ್ಷೆಯಿದೆ. id="toptextpromo">ಏತನ್ಮಧ್ಯೆ,
ತೆಂಡೂಲ್ಕರ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಮೈಸೂರು ವಿಶ್ವವಿದ್ಯಾಲಯವೂ ಬಯಸಿದೆ. ತೆಂಡೂಲ್ಕರ್, ರಾಜೀವ್ ತಾರಾನಾಥ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತಿತರರಿಗೆ ಡಾಕ್ಟರೇಟ್ ನೀಡಲು ವಿವಿ ನಿರ್ಧರಿಸಿದೆ. id='are-slot-1' class='oiad oi-axt oiadv'> id='top-searched-articles'>ಕ್ರಿಕೆಟ್
ಜಗತ್ತಿಗೆ ಅವರು ಸಲ್ಲಿಸಿರುವ ಗಣನೀಯ ಕೊಡುಗೆಯನ್ನು ಪರಿಗಣಿಸಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಅವರ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿದ್ದಾರೆ ಎಂದುRGUHS ಸಿಂಡಿಕೇಟ್ ತಿಳಿಸಿದೆ. ಸಚಿನ್ ಬಿಡುವು ನೋಡಿಕೊಂಡು ಅವರಿಗಾಗಿ ಪ್ರತ್ಯೇಕ ಡಾಕ್ಟರೇಟ್ ಪ್ರದಾನಕ್ಕೆ ಸಮಾರಂಭ ಆಯೋಜಿಸಲು ವಿವಿ ಚಿಂತನೆ ನಡೆಸಿದೆ. ಬಹುಶಃ ಹಾಲಿ ವಿಶ್ವ ಕಪ್ ಬಳಿಕವೇ ಇದಕ್ಕೆ ಕಾಲ ಕೂಡಿ ಬರಬಹುದು.












Click it and Unblock the Notifications