ಒರಿಸ್ಸಾ: ನಕ್ಸಲರಿಂದ ಜಿಲ್ಲಾಧಿಕಾರಿಯ ಅಪಹರಣ

ಈ ಮಧ್ಯೆ, ಮಾವೋ ಬಂಡುಕೋರರ ಅಟ್ಟಹಾಸಗಳನ್ನು ಕೊನೆಗಾಣಿಸಬೇಕೆಂದು ಆಗ್ರಹಿಸಿ, ಒರಿಸ್ಸಾದ ವಿಧಾನಸಭೆಯಲ್ಲಿ ಸದಸ್ಯರು ಗುರುವಾರ ಭಾರಿ ಕೋಲಾಹಲವೆಬ್ಬಿಸಿದರು.
ಜಿಲ್ಲಾಧಿಕಾರಿ ಕೃಷ್ಣ ಅವರ ಜತೆಗಿದ್ದ ಇತರೆ ಇಬ್ಬರು ಅಧಿಕಾರಿಗಳು ಮತ್ತೊ ಒಬ್ಬ ಸ್ವಯಂ ಸೇವಕನನ್ನು ನಕ್ಸಲರು ಬಿಟ್ಟು ಕಳಿಸಿದ್ದಾರೆ. ಬಂಧನದಲ್ಲಿರುವ ಮಾವೊ ಬಂಡುಕೋರರನ್ನು 48 ಗಂಟೆಗಳಲ್ಲಿ ಬಿಡುಗಡೆ ಮಾಡುವಂತೆ ಆಗ್ರಹಿಸಿ, ಪತ್ರ ಬರೆದು ಕಳಿಸಿದ್ದಾರೆ. ಆಂಧ್ರಪ್ರದೇಶದ ಗಡಿ ಭಾಗದ ಜಿಲ್ಲೆ ಇದಾಗಿದ್ದು, ಜಿಲ್ಲಾಧಿಕಾರಿ ಪತ್ತೆ ಕಾರ್ಯಕ್ಕಾಗಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕಳಿಸಲಾಗಿದೆ ಎಂದು ಗೃಹ ಕಾರ್ಯದರ್ಶಿ ಬೆಹೇರಾ ಹೇಳಿದ್ದಾರೆ.
ಜಿಲ್ಲೆಯ ಚಿತ್ರಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಾಪಾಡದ ಕುಗ್ರಾಮವೊಂದರಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲು ತೆರಳಿದ್ದಾಗ ಅಪಹರಣ ನಡೆದಿದೆ ಎನ್ನಲಾಗಿದೆ. ಘಟನೆಯ ಬಳಿಕ ಅವರು ಯಾವುದೇ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಮಾವೊ ವಿರೋಧಿ ಕಾರ್ಯಾಚರಣೆಯ ಮುಖ್ಯಸ್ಥ ಸಂಜೀವ್ ಮಾರಿಕ್ ತಿಳಿಸಿದ್ದಾರೆ.












Click it and Unblock the Notifications