ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಆಡಳಿತ ಮಂತ್ರಕ್ಕೆ ಬಿಎಸ್ಸೆನ್ನೆಲ್ ತಂತ್ರ

By Mahesh
|
Google Oneindia Kannada News

BSNL CMS info deal
ಬೆಂಗಳೂರು, ಫೆ. 17: ದೇಶದ ಎಲ್ಲೆಡೆ ಇ ಆಡಳಿತ ವ್ಯವಸ್ಥೆ ಜಾರಿ, ಕಾಗದ ರಹಿತ ಕಚೇರಿ ಕಲ್ಪನೆಯನ್ನು ಸರ್ಕಾರ ಒಂದು ಕಡೆ ಹುಟ್ಟು ಹಾಕುತ್ತಿದ್ದಂತೆ. ಇನ್ನೊಂದೆಡೆ ಕೇಂದ್ರಿಕೃತ ಬಿಲ್ಲಿಂಗ್ ವ್ಯವಸ್ಥೆ ಜಾರಿಗೊಳಿಸಿ ಬಿಲ್ ಪಾವತಿ ಅನುಕೂಲಕರ ಮಾಡಿಕೊಡಲು ಸುಮಾರು 300 ಕೋಟಿ ರುಗಳನ್ನು ಭಾರತೀಯ ಸಂಚಾರ ನಿಗಮ ನಿಯಮಿತ(BSNL) ವ್ಯಯಿಸುತ್ತಿದೆ.

ಸುಮಾರು ಏಳು ವರ್ಷ ಅವಧಿಯಲ್ಲಿ ದೇಶದ ಈಶಾನ್ಯ, ಪೂರ್ವ ಹಾಗೂ ದಕ್ಷಿಣ ಭಾಗಗಳಲ್ಲಿ ಕೇಂದ್ರಿಕೃತ ಬಿಲ್ಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಬೆಂಗಳೂರು ಮೂಲದ ಸಿಎಂಎಸ್ ಇನ್ಫೋ ಸಿಸ್ಟಮ್ ಸಂಸ್ಥೆಯೊಡನೆ ಬಿಎಸ್ಸೆನ್ನೆಲ್ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ. ಆದರೆ, ರಶೀದಿಗಾಗಿ ಬಳಸುವ ಕಾಗದದ ಪ್ರಮಾಣದ ಬಗ್ಗೆ ಪರಿಸರವಾದಿಗಳ ಆಕ್ಷೇಪ ವ್ಯಕ್ತವಾಗಿದೆ.

ಸುಮಾರು 1100 ಪುಟಗಳನ್ನು(ವರ್ಣದಲ್ಲಿ) ಪ್ರತಿ ನಿಮಿಷಕ್ಕೆ ಮುದ್ರಿಸಬಲ್ಲ ಇಂಕ್ ಜೆಟ್ ಪ್ರಿಂಟರ್ ಗಳನ್ನು ಅಳವಡಿಸಲಾಗುವುದು. ಹಂತ ಹಂತವಾಗಿ ಈ ಸಂಖ್ಯೆ ವೃದ್ಧಿಸಲಾಗುವುದು ಎಂದು ಬಿಎಸ್ಸೆನ್ನೆಲ್ ಅಧಿಕಾರಿಗಳು ಹೇಳಿದ್ದಾರೆ.

ದೇಶದೆಲ್ಲೆಡೆ ಸುಮಾರು 20 ಕೇಂದ್ರಗಳನ್ನು ಹೊಂದಿರುವ ಸಿಎಂಎಸ್, ಕೋಟ್ಯಾಂತರ ದಾಖಲೆಗಳನ್ನು ಮುದ್ರಿಸುತ್ತಿದೆ. ಬಣ್ಣ ಬಣ್ಣದ ರಸೀತಿ ಕಾಗದ ಮುದ್ರಣದಲ್ಲಿ ಪರಿಣತಿ ಪಡೆದಿರುವ ಈ ಸಂಸ್ಥೆ ಉನ್ನತ ತಂತ್ರಜ್ಞಾನ ಬಳಸುತ್ತಿದೆ. ಅಂಚೆ ಕಚೇರಿಗಾಗಿ ಪ್ರಿಂಟ್ ಟು ಪೋಸ್ಟ್ ಎಂಬ ಯೋಜನೆಯನ್ನು ನಾಲ್ಕು ವಲಯಗಳನ್ನು ಅಳವಡಿಸಿ ಯಶಸ್ವಿಯಾಗಿರುವ ಸಿಎಂಎಸ್ ಇನ್ಫೊ ಸುಮಾರೂ 5 ವರ್ಷಗಳ ಕಾಲ ಈ ಯೋಜನೆಯ ಗುತ್ತಿಗೆ ಪಡೆದಿದೆ. ಇದಲ್ಲದೆ ಯುಐಡಿ ಕಾರ್ಡ್ ಮುದ್ರಣ ಹೊರಗುತ್ತಿಗೆ ಸಹಾ ಈ ಸಂಸ್ಥೆ ಹೊಂದಿದೆ ಎಂದು ಸಿಎಂಎಸ್ ಸಂಸ್ಥೆಯ ಸುದೇವ್ ಮುತ್ಯಾ ಹೇಳಿದರು.

English summary
IT and outsourcing services provider CMS Info Systems has bagged a Rs. 300 crore order from BSNL to centralize its billing system. When whole country is chanting paper less office mantra and specially in Karnataka where e governance is well implemented. then why BSNL can't reduce paper bills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X