ಮಂಗಳೂರು: 2ಜಿ ಬಗ್ಗೆ ಸುಬ್ರಮಣ್ಯ ಸ್ವಾಮಿ ಉಪನ್ಯಾಸ
ಮಂಗಳೂರು,
ಫೆ. 15: 2ಜಿ ತರಂಗ ಗುಚ್ಛ ಹಂಚಿಕೆ ವಿವಾದದ ಒಳ ಹೊರಗುಗಳನ್ನು ಸಾರ್ವಜನಿಕರಿಗೆ ತಿಳಿಯುವ ಹಾಗೆ ಮಾಡಲು ಸಿಟಿಜನ್ ಕೌನ್ಸಿಲ್ ನಿರ್ಧರಿಸಿದೆ. ಕೇಂದ್ರದ ಮಾಜಿ ಸಚಿವ ಸುಬ್ರಮಣ್ಯ ಸ್ವಾಮಿ ಅವರಿಂದ 2ಜಿ ತರಂಗಾಂತರಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಕೌನ್ಸಿಲ್ ಆಯೋಜಿಸಿದೆ. ಶ್ರೀನಿವಾಸ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್ ಹಾಗೂ ಲೀಡಿಂಗ್ ಚಾರ್ಟೆಡ್ ಅಕೌಂಟೆಡ್ ನ ಮುಖ್ಯಸ್ಥರಾದ ಎ ರಾಘವೇಂದ್ರ ರಾವ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. id="toptextpromo">ಸ್ಥಳ:
ಸಂಘನಿಕೇತನ, ಮನ್ನಗುಡ್ಡ, ಮಂಗಳೂರುದಿನಾಂಕ: ಫೆಬ್ರವರಿ 26, 2011
ಸಮಯ: 5.30 id='are-slot-1' class='oiad oi-axt oiadv'> id='top-searched-articles'>
ಹಾರ್ವಡ್
ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರಾಗಿದ್ದ ಸ್ವಾಮಿ ಅವರು ಕೇಂದ್ರದಲ್ಲಿ ವಾಣಿಜ್ಯ ಹಾಗೂ ಕಾನೂನು, ಸುವವ್ಯವಸ್ಥೆ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಲಿ ಜನತಾ ಪಾರ್ಟಿ ಅಧ್ಯಕ್ಷರಾಗಿರುವ ಸ್ವಾಮಿ, ಆರ್ಥಿಕ ತಜ್ಞರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಸಿಬಿಐ ತನಿಖೆಗೆ ಒಳಪಟ್ಟಿರುವ 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಪಿಟೀಷನ್ ಹೂಡಿದವರಲ್ಲಿ ಸುಬ್ರಮಣ್ಯ ಸ್ವಾಮಿಯೂ ಒಬ್ಬರು. ಎ.ರಾಜಾ, ಕರುಣಾನಿಧಿ ಹಾಗೂ ಸೋನಿಯಾ ಗಾಂಧಿ ಕೂಡಾ ಈ ಹಗರಣದಲ್ಲಿ ಭಾಗಿ ಎಂದು ನಿರೂಪಿಸಲು ಸ್ವಾಮಿ ಹೋರಾಟ ನಡೆಸುತ್ತಿದ್ದಾರೆ.











Click it and Unblock the Notifications