ವರ್ಲ್ಡ್ ಕಪ್ ಗೆಲ್ಲುವ ಸಾಮರ್ಥ್ಯ ನಮ್ಮ ತಂಡಕ್ಕಿದೆ: ಪ್ರಧಾನಿ
ನವದೆಹಲಿ,
ಫೆ.16: ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತದ ಕ್ರಿಕೆಟ್ ತಂಡ ಈ ಬಾರಿ ವರ್ಲ್ಡ್ ಕಪ್‌ಅನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದು, ತಂಡಕ್ಕೆ ಶುಭ ಕೋರುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. id="toptextpromo">ದೇಶದ
ಎಲ್ಲ ಕ್ರಿಕೆಟ್ ಪ್ರೇಮಿಗಳ ಆಶಯವೂ ಇದೇ ಆಗಿದೆ. ನನ್ನದೂ ಇದೇ ಆಗಿದೆ. ನನ್ನ ಪ್ರಕಾರ ಭಾರತ ವರ್ಲ್ಡ್ ಕಪ್‌ಅನ್ನು ಗೆಲ್ಲಲೇ ಬೇಕು' ಎಂದು ಟಿವಿ ಮಾಧ್ಯಮ ಸಂಪಾದಕರ ಜತೆ ಬುಧವಾರ ತಮ್ಮ ನಿವಾಸದಲ್ಲಿ ನಡೆದ ಸಂವಾದದ ವೇಳೆ ಪ್ರಧಾನಿ ಈ ಪ್ರತಿಕ್ರಿಯೆ ನೀಡಿದರು. id='are-slot-1' class='oiad oi-axt oiadv'> id='top-searched-articles'>ನಿಮ್ಮ
ನೆಚ್ಚಿನ ಆಟಗಾರ ಯಾರು ಎಂಬ ಬೌನ್ಸರ್‌ಗೆ ರಕ್ಷಣಾತ್ಮಕವಾಗಿ ಡಕ್ ಮಾಡಿದ ಸಿಂಗ್, 'ತಂಡದಲ್ಲಿ ಯಾವುದೇ ಒಬ್ಬ ಆಟಗಾರನನ್ನು ಪ್ರತ್ಯೇಕಗೊಳಿಸಲು ಇಚ್ಛಿಸುವುದಿಲ್ಲ. ಆದರೆ ನನ್ನ ಮನದಲ್ಲಿ ಯಾವುದೋ ಒಬ್ಬ ಆಟಗಾರ ಪ್ರತ್ಯೇಕವಾಗಿ ಕುಳಿತಿದ್ದಾನೆ. ನಾನು ಆತನ ಹೆಸರನ್ನು ಬಹಿರಂಗಪಡಿಸಲಾರೆ' ಎಂದು ಸೂಕ್ಷ್ಮವಾಗಿ ಹೇಳಿದರು.











Click it and Unblock the Notifications