ಒಂದು ಲಕ್ಷ ದೂರವಾಣಿ ಕದ್ದಾಲಿಕೆಗಳು

ಇದರರ್ಥ ಒದು ಸೇವಾ ಕಂಪನಿಯಿಂದ ವಾರ್ಷಿಕ ಸರಾಸರಿ 30 ಸಾವಿರ ದೂರವಾಣಿಗಳು ಛೇದಿಸಲ್ಪಡುತ್ತವೆ. ಅಂದರೆ ದಿನವೊಂದಕ್ಕೆ 82 ದೂರವಾಣಿಗಳನ್ನು ಕದ್ದಾಲಿಸುವಂತೆ ಕಾನೂನು ಜಾರಿ ಅಧಿಕಾರಿಗಳೇ (ಹೆಚ್ಚಾಗಿ ಪೊಲೀಸರು) ಪ್ರತಿ ಕಂಪನಿಗೆ ಸೂಚಿಸುತ್ತಾರೆ. ಈ ಲೆಕ್ಕಾಚಾರದಲ್ಲಿ ವಾರ್ಷಿಕ ಒಂದು ಲಕ್ಷ ದೂರವಾಣಿಗಳು ಕದ್ದಾಲಿಕೆಗೊಳಗಾಗುತ್ತಿವೆ.
ಆದರೆ ಇದರಲ್ಲಿ ಸೇವಾ ಕಂಪನಿಗಳ ಪಾತ್ರವೇನೂ ಇಲ್ಲ. ದೂರವಾಣಿ ಕದ್ದಾಲಿಕೆ ವಿಷಯದಲ್ಲಿ ಪೊಲೀಸರಿಗೆ ಸಹಕರಿಸದಿದ್ದರೆ 50 ಕೋಟಿ ರೂ. ದಂಡ ಹೇರುತ್ತಾರೆ. ಪರವಾನಗಿ ಪಡೆಯುವಾಗಲೇ ಈ ಷರತ್ತು ವಿಧಿಸಿರುತ್ತಾರೆ ಎಂದು ರಿಲಯನ್ಸ್ ಅಲವತ್ತುಕೊಂಡಿದೆ.
2010ರಲ್ಲಿ ರಿಲಯನ್ಸ್ 12.57 ಕೋಟಿ ಚಂದಾದಾರರನ್ನು ಹೊಂದಿದ್ದರೆ ಭಾರ್‍ತಿ ಏರ್‌ಟೆಲ್ 15.25 ಕೋಟಿ ಗ್ರಾಹಕರನ್ನು ಹೊಂದಿದೆ. ವೊಡಾಫೋನ್‌ಗೆ 12.43 ಕೋಟಿ ಚಂದಾದಾರರಿದ್ದಾರೆ. ಇನ್ನು ಬಿಎಸ್‌ಎನ್‌ಎಲ್ 8.62 ಕೋಟಿ ಗ್ರಾಹಕರೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಟೆಲಿಫೋನ್ ಟ್ಯಾಪಿಂಗ್ ಭಾರಿ ಸಂಖ್ಯೆಯಲ್ಲಿ ನಡೆಯುತ್ತಿದ್ದು, ನಾಗರಿಕರ ಖಾಸಗೀತನಕ್ಕೆ ಮಾರಕವಾಗಿದೆ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದೆ.












Click it and Unblock the Notifications