ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರಬಾವಿ: ಕಾಂಗ್ರೆಸ್ ಬಿಜೆಪಿ ಜಟಾಪಟಿ ಕೃಷ್ಣ ಕೃಷ್ಣಾ!

By Mahesh
|
Google Oneindia Kannada News

MLA Priyakrishna
ಬೆಂಗಳೂರು, ಫೆ.12: ಆ ಏರಿಯಾ ಅಂದರೆ ಹಾಗೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಮಧ್ಯೆ ಹುಲ್ಲು ಹಾಕಿದರೂ ಸಾಕು ಥಟ್ಟನೆ ಬೆಂಕಿ ಹತ್ತಿಕೊಳ್ಳುತ್ತದೆ ಎಂದು ಜನ ಆಡಿಕೊಳ್ಳುವ ಕ್ಷೇತ್ರ. ಗೋವಿಂದರಾಜನಗರ ಕ್ಷೇತ್ರದ ನಾಗರಭಾವಿ ವಾರ್ಡ್ ಎಂದರೆ ಹಾಗೆ. ಇಂತಹ ವಿಧಾನಸಭಾ ಕ್ಷೇತ್ರದಲ್ಲಿ ತಿಳಿದೋ ತಿಳಿಯದೋ ಬಿಬಿಎಂಪಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸ್ಥಳೀಯ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಅವರಿಗೆ ಆಹ್ವಾನ ನೀಡಿರಲಿಲ್ಲ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಾರಾಮಾರಿಗೆ ನಾಂದಿಯಾಯಿತು. ಗೃಹ ಸಚಿವ ಆರ್ ಅಶೋಕ್ ಹಾಗೂ ಮಹಾಪೌರ ನಟರಾಜ್ ಅವರ ಎದುರಲ್ಲೇ ಕಾರ್ಯಕರ್ತರು ಕೈಕೈ ಮಿಲಾಯಿಸಿಬಿಟ್ಟರು.

ವಾರ್ಡ್ ನಂಬರ್ 128 ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಇಂದು ನಾಗರಭಾವಿ ಸರ್ಕಲ್ ನಲ್ಲಿ ಬಿಬಿಎಂಪಿ ಹಮ್ಮಿಕೊಂಡಿತ್ತು. ಆದರೆ ಶಾಸಕ ಪ್ರಿಯಕೃಷ್ಣ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಏಕ್ಕೆ? ಎಂದು ಅವರ ಬೆಂಬಲಿಗರು ಘೋಷಣೆ ಕೂಗುತ್ತಾ, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗೃಹಸಚಿವ ಆರ್ ಅಶೋಕ್ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಫಲರಾಗಲಿಲ್ಲ.

ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ ಆರಂಭವಾಗಿದೆ. ಯಾಕೃಷ್ಣ ಅವರ ಬೆಂಬಲಿಗರು ವೇದಿಕೆಗೆ ನುಗ್ಗಿ ದಾಂಧಲೆ ನಡೆಸತೊಡಗಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿದೆ ಎಂದು ಎನಿಸಿ ಮಧ್ಯೆ ಪ್ರವೇಶಿಸಿದ ಪೊಲೀಸರಿಗೂ ಗೂಸಾ ಬಿದ್ದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ, ಕಾರ್ಯಕ್ರಮ ಮುಂದುವರೆವಂತೆ ಮಾಡಿದ್ದಾರೆ.

English summary
Bruhat Bengaluru Maha nagara Palige(BBMP) organised inauguration function of various developement activities in Nagarabhavi ward today(Feb.12). MLA Priya Krishna was not invited to the program which turned entire program into violence as congress and BJP activists clashed in front of Home Minister R Ashoka and Mayor SK Nataraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X