ಮುಬಾರಕ್ ಹೊ: ಸರಕಾರಿ ನೌಕರರ ವೇತನ ಹೆಚ್ಚಳ!
ಕೈರೊ,
ಫೆ.8- ಈಜಿಪ್ಟ್‌ನ ಕಳಂಕಿತ ಅಧ್ಯಕ್ಷ ಹೊಸ್ನಿ ಮುಬಾರಕ್ ಸರಕಾರಿ ನೌಕರರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಯತ್ನವಾಗಿ ಅವರ ಸಂಬಳಗಳನ್ನು ಶೇ. 15ರಷ್ಟು ಹೆಚ್ಚಿಸಿದ್ದಾರೆ. ಈಜಿಪ್ಟ್‌ನಲ್ಲಿ 60 ಲಕ್ಷ ಸರಕಾರಿ ನೌಕರರಿದ್ದಾರೆ. id="toptextpromo">ಇಸ್ಲಾಮೀಯರು
ಮತ್ತು ಪ್ರತಿಪಕ್ಷದವರು ತಮ್ಮ ಪದಚ್ಯುತಿಗೆ ಪಟ್ಟು ಹಿಡಿದಿರುವುದರಿಂದ ಅಧೀರರಾಗಿರುವ ಮುಬಾರಕ್, ಸೋಮವಾರ ನಡೆದ ನೂತನ ಸಚಿವ ಸಂಪುಟದ ಸಭೆಯಲ್ಲಿ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ವೇತನ ಏರಿಕೆ ನಿರ್ಧಾರ ಕೈಗೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಾಸ್ತವವಾಗಿ,
30 ವರ್ಷಗಳ ಮುಬಾರಕ್ ದುರಾಡಳಿತಕ್ಕೆ ಸರಕಾರಿ ನೌಕರರು ಮೊದಲಿನಿಂದಲೂ ನೀರೆರೆಯುತ್ತಿದ್ದಾರೆ. ಹಣದುಬ್ಬರ ತೀವ್ರವಾಗಿ, ಬೆಲೆಗಳು ಗಗನಚುಂಬಿಯಾಗಿರುವಾಗ ನೌಕರ ವರ್ಗಕ್ಕೆ ಸರಕಾರ ಆಗಾಗ ಏರಿಸುವ ವೇತನಗಳು ಜೀವನಾಸರೆಯಾಗಿವೆ.











Click it and Unblock the Notifications