ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ತಿ ವಿವರ ಘೋಷಿಸ್ತಾರಂತೆ ಯಡಿಯೂರಪ್ಪ!

By Prasad
|
Google Oneindia Kannada News

BS Yeddyurappa
ಬೆಳಗಾವಿ, ಫೆ. 5 : ಭೂ ಹಗರಣ, ಸ್ವಜನ ಪಕ್ಷಪಾತ ಆರೋಪಗಳಲ್ಲಿ ಸಿಲುಕಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮತ್ತೊಂದು ಅಗ್ನಿಪರೀಕ್ಷೆಯ ಕಾಲ ಎದುರಾಗಿದೆ. ಅವರೀಗ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಭಾನುವಾರ (ಫೆ. 6) ತಮ್ಮ ಆಸ್ತಿ ವಿವರ ಘೋಷಿಸುವುದಾಗಿ ಯಡಿಯೂರಪ್ಪ ಬೆಳಗಾವಿಯಲ್ಲಿ ಹೇಳಿದ್ದಾರೆ. ಅಕ್ರಮ ಆಸ್ತಿ ಮಾಡಿದ್ದಾರೆಂದು ಜೆಡಿಎಸ್ ನಾಯಕರು ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಆಸ್ತಿ ಘೋಷಿಸುವುದಾಗಿ ಯಡಿಯೂರಪ್ಪ ಹೇಳಿದರು. ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಅಣತಿಯಂತೆ ನಡೆದುಕೊಳ್ಳುತ್ತಿರುವುದಾಗಿ ಅವರು ತಿಳಿಸಿದರು. ಫೆ.24ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ತಯಾರಿಯನ್ನು ವೀಕ್ಷಿಸಲು ಮತ್ತು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಬೆಳಗಾವಿಗೆ ಯಡಿಯೂರಪ್ಪ ತೆರಳಿದ್ದರು.

"ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಸ್ತಿ ಬರೋಬ್ಬರಿ 1000 ಕೋಟಿ ರು." ಎಂದು ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಇತ್ತೀಚೆಗೆ ಹೊಸ ಬಾಂಬ್ ಸಿಡಿಸಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಬಹಿರಂಗಪಡಿಸಬಹುದಾದ ತಮ್ಮ ಆಸ್ತಿಯ ಪ್ರಮಾಣ ಎಷ್ಟು ಎಂಬ ಕುತೂಹಲ ಎಲ್ಲರ ಮನದಲ್ಲೂ ಮೂಡಿದೆ. ಇತ್ತೀಚೆಗೆ ರಿಡಿಫ್ ಅಂತರ್ಜಾಲ ತಾಣ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಶ್ರೀಮಂತ ಮುಖ್ಯಮಂತ್ರಿಗಳಲ್ಲಿ ಯಡಿಯೂರಪ್ಪ ನಾಲ್ಕನೇ ಸ್ಥಾನ ಪಡೆದಿದ್ದರು. ಅದರಲ್ಲಿ ಅವರ ಆಸ್ತಿ 5.38 ಕೋಟಿ ರು. ಮಾತ್ರ ಎಂದು ನಮೂದಿಸಲಾಗಿದೆ!

ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ವೈಯಕ್ತಿಕ ಆಸ್ತಿ ವಿವರ ಬಹಿರಂಗಪಡಿಸಬೇಕೆಂದು ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಸೂಚಿದ್ದರು ಎಂಬುದು ಗಮನಾರ್ಹ. ಆಸ್ತಿ ವಿವರ ಘೋಷಿಸುವ ಯಡಿಯೂರಪ್ಪನವರ ಈ ಘೋಷಣೆಯಂತೂ ಕರ್ನಾಟಕದ ರಾಜಕೀಯ ವಲಯದಲ್ಲಿ ಸಣ್ಣ ಅಲೆಗಳನ್ನು ಎಬ್ಬಿಸಿರುವುದಂತೂ ಸತ್ಯ.

English summary
Karnataka Chief Minister BS Yeddyurappa has decided to declare his assets, as per direction of party leader LK Advani. Yeddyurappa was in Belgaum to supervise World Kannada conference preperation, which is starting from Feb 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X