ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ವಿಕಿರಣ ಜೀವಿಗಳಿಗೆ ಅಪಾಯಕಾರಿ

By Srinath
|
Google Oneindia Kannada News

mobile
ನವದೆಹಲಿ, ಫೆ.3- ಮೊಬೈಲ್ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಗಾಳಿ ಸುದ್ದಿ ಇದುವರೆಗೆ ಬಲವಾಗಿ ಬೀಸುತ್ತಿತ್ತು. ಆದರೀಗ ಅಧಿಕೃತವಾಗಿಯೇ ಇದು ಮಾರಕ ಸುದ್ದಿಯಾಗಿ ಪರಿಣಮಿಸಿದೆ. ಕೇಂದ್ರ ಸರಕಾರವೇ ನೇಮಿಸಿದ್ದ ಉನ್ನತ ಮಟ್ಟದ ಸಮಿತಿ "ನಿಜಕ್ಕೂ ಮೊಬೈಲ್ ಬಳಕೆ ಮಾರಕವಾಗುತ್ತದೆ' ಎಂದಿದೆ.

ಹೌದು. ಮೊಬೈಲ್ ಗೋಪುರಗಳು ಹೊರಸೂಸುವ ವಿಕಿರಣಗಳು ವಿನಾಶಕಾರಿ. ಮೊಬೈಲ್ ಫೋನ್‌ನ ಸತತ ಬಳಕೆಯಿಂದ ಸ್ಮರಣಶಕ್ತಿ ಕುಂದುತ್ತದೆ, ಏಕಾಗ್ರತೆ ಕ್ಷೀಣಿಸುತ್ತದೆ, ಪಚನಶಕ್ತಿ ಏರುಪೇರಾಗುತ್ತದೆ ಎಂಬುದು ದೂರ ಸಂಪರ್ಕ ಸಚಿವಾಲಯ ನೇಮಿಸಿದ್ದ ಅಂತರ ಸಚಿವಾಲಯದ ಸಮಿತಿ ನೀಡಿರುವ ವರದಿಯಲ್ಲಿ ದೃಢಪಟ್ಟಿದೆ.

ಮೊಬೈಲ್ ವಿಕಿರಣ ಕೇವಲ ಮನುಷ್ಯನಿಗಷ್ಟೇ ಮಾರಕವಲ್ಲ. ಅದು ಹಕ್ಕಿ ಸಂಕುಲಕ್ಕೂ ವಿನಾಶಕಾರಿಯಾಗಿದೆ. ಚಿಟ್ಟೆಗಳು, ದುಂಬಿಗಳು, ಕೀಟಗಳು, ಕೊನೆಗೆ ಗುಬ್ಬಚ್ಚಿಗಳು ವಸತಿ ಪ್ರದೇಶಗಳಿಂದ ದೂರವಾಗುತ್ತಿರುವುದಕ್ಕೆ ಈ ವಿಕಿರಣ ಕಾರಣವಾಗಿದೆ. ಆರೋಗ್ಯ ಸಚಿವಾಲಯ, ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ದೂರಸಂಪರ್ಕ ಇಲಾಖೆಯ ಎಂಟು ಮಂದಿ ಹಿರಿಯ ಅಧಿಕಾರಿಗಳ ತಂಡ ಈ ಆತಂಕಕಾರಿ ವಿಷಯಗಳನ್ನು ಹೊರಹಾಕಿದೆ. ಅಂತಾರಾಷ್ಟ್ರೀಯ ಮಾನದಂಡಕ್ಕೆ
ವ್ಯತಿರಿಕ್ತವಾಗಿ ಅಧಿಕ ಪ್ರಮಾಣದ ರೇಡಿಯೊ ತರಂಗಗಳನ್ನು ಬಳಸುತ್ತಿರುವ ಮೊಬೈಲ್ ಸೇವಾ ಕಂಪನಿಗಳನ್ನು ನಿಷೇಧಿಸಬೇಕು ಎಂದು ತಂಡ ಸಲಹೆ ನೀಡಿದೆ.

ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಅಧಿಕ ಪ್ರಮಾಣದ ರೇಡಿಯೊ ವಿಕಿರಣಗಳನ್ನು ಹೊರಸೂಸದ ಮೊಬೈಲ್ ಕಂಪನಿಗಳಿಗಷ್ಟೇ ಅವಕಾಶ ನೀಡಬೇಕು. ಹಾಗೆಯೇ ಮೊಬೈಲ್ ಬಳಕೆ ಪ್ರಮಾಣವೂ ಜನರ ಹಿಡಿತದಲ್ಲಿಬೇಕು ಎಂಬ ಅಮೂಲ್ಯ ಸಲಹೆಯನ್ನು ನೀಡಿದೆ. ಸಮಿತಿಯ ವರದಿಯನ್ನಾಧರಿಸಿ ಇದೀಗ ಹೊಸ ರಾಷ್ಟ್ರಿಯ ನೀತಿ ರೂಪಿಸುವ ಸಾಧ್ಯತೆ ಹೆಚ್ಚಾಗಿದೆ.

ದುಷ್ಪರಿಣಾಮಗಳು ಹೀಗಿವೆ:

* ಚರ್ಮ ಒಣಗುವಿಕೆ, ತಲೆ ಸುತ್ತುವಿಕೆ, ಬಳಲಿಕೆ, ನಿದ್ರೆ ಭಂಗ, ಮಂಪರು, ಏಕಾಗ್ರತೆ ಕೊರತೆ, ಕಿವಿಯಲ್ಲಿ ಗುಯ್ಯುಗುಟ್ಟುವಿಕೆ.

* ಜಾಗ್ರತೆ ಇಲ್ಲದಿರುವುದು, ಸ್ಮರಣ ಶಕ್ತಿ ನಶಿಸುವುದು, ತಲೆನೋವು, ಹೃದಯ ಬಡಿತ ಅಧಿಕಗೊಳುವುದು, ಪಚನಶಕ್ತಿ ಏರುಪೇರು ಇವೇ ಮುಂತಾದ ಸಮಸ್ಯೆಗಳು ಮಾನವನನ್ನು ಕಾಡತೊಡಗುತ್ತವೆ.

* ಭಾರತದಲ್ಲಿ ಕಂಡುಬರುವ ಹವಾಮಾನವೂ ಮೊಬೈಲ್ ವಿಕಿರಣವನ್ನು ತಡೆದುಕೊಳ್ಳುವಷ್ಟು ಶಕ್ತವಾಗಿಲ್ಲ. ಅದೇ ರೀತಿ ಜನ ಸಹ ದೈಹಿಕವಾಗಿ ಈ ವಿಕಿರಣಗಳನ್ನುತಡೆದುಕೊಳ್ಳುವಷ್ಟು ಸಶಕ್ತಲ್ಲ.

* ಚಿಕ್ಕ ಮಕ್ಕಳು, ಗರ್ಭಿಣಿಯರು, ಅಶಕ್ತರ ಮೇಲೆ ಇದು ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ ಎಂದೂ ಹಿರಿಯ ವಿಜ್ಞಾನಿಗಳನ್ನೊಳಗೊಂಡ ತಂಡ ಅಧ್ಯಯನದ ಮೂಲಕ ಇಳಿಸಿದೆ.

* ಆರೋಗ್ಯ ಸಂಬಂಧಿ ಶಸ್ತ್ರಚಿಕಿತ್ಸೆ ಮೂಲಕ ವೈದ್ಯಕೀಯ ಪರಕೀಯ ವಸ್ತುಗಳನ್ನು ಹುದುಗಿಸಿಟ್ಟುಕೊಂಡವರಂತೂ ಮೊಬೈಲ್‌ಗಳನ್ನು ಹತ್ತಿರ ಬಿಟ್ಟುಕೊಳ್ಳುವಂತೇ ಇಲ್ಲ.

* ಮಕ್ಕಳು, ಹದಿಹರಯದವರು ಸತತವಾಗಿ ಮೊಬೈಲ್ ಬಳಸತೊಡಗಿದರೆ ವಿಕಿರಣಗಳು ನೇರವಾಗಿ ಅವರ ಮಸ್ತಿಷ್ಕ ಸೇರಲಿದ್ದು, ಮುಂದೆ ಮೆದುಳಿನ ಕ್ಯಾನ್ಸರ್‌ಗೆ ಒಳಗಾಗುವುದು ಖಚಿತ.

* ಪುರುಷರ ವೀರ್‍ಯ ಪ್ರಮಾಣವನ್ನೂ ಇದು ಕಡಿಮೆ ಮಾಡುತ್ತದೆ ಎನ್ನುತ್ತಾರೆ ತಂಡದ ವಿಜ್ಞಾನಿಗಳು.

English summary
Ill-effects of mobile radiation are officially out. mobile towers pose grave health risks to biodiversity says Inter-ministerial committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X