ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಷ್ಮಾ ಎಸ್ ಎಂ ಕೃಷ್ಣ ಭೇಟಿ, ಟ್ವಿಟರ್ ಅಪ್ಡೇಟ್

By Mahesh
|
Google Oneindia Kannada News

Sushma meets Krishna
ನವದೆಹಲಿ, ಫೆ 3: ಅನಿರೀಕ್ಷಿತ ನಡೆಯೊಂದರಲ್ಲಿ ಕೇಂದ್ರ ವಿದೇಶಾಂಗ ಖಾತೆಯ ಸಚಿವ ಎಸ್ ಎಂ ಕೃಷ್ಣ, ಬುಧವಾರ (ಫೆ. 2) ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌ ಮನೆಗೆ ತೆರಳಿ ಅವರನ್ನು ಭೇಟಿ ಮಾಡಿದರು. ಶ್ರೀಲಂಕಾದ ನೌಕಾಪಡೆ ತಮಿಳು ಬೆಸ್ತರನ್ನು ಸಾಯಿಸಿರುವ ಘಟನೆ ಮತ್ತು ಅಲ್ಲಿನ ತಮಿಳರ ಪುನರ್ವಸತಿಗೆ ಸರಕಾರ ಕೈಗೊಂಡಿರುವ ಕ್ರಮಗಳನ್ನು ಕೃಷ್ಣ ಈ ಭೇಟಿ ಸಂಧರ್ಭದಲ್ಲಿ ವಿವರಿಸಿದ್ದಾರೆ.

ಶ್ರೀಲಂಕಾ ಬೆಸ್ತರ ಕುರಿತು ಕೃಷ್ಣ ಅವರನ್ನು ಭೇಟಿಯಾಗುವ ಇರಾದೆಯನ್ನು ಸುಷ್ಮಾ ಟ್ವಿಟರ್ ನಲ್ಲಿ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅವರು ಈ ಭೇಟಿ ನೀಡಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್‌ ಕೊಲಂಬೊದಲ್ಲಿ ಶ್ರೀಲಂಕಾ ಅಧ್ಯಕ್ಷರನ್ನು ಭೇಟಿ ಮಾಡಿ ತಮಿಳು ಬೆಸ್ತರ ಹತ್ಯೆಯ ಬಗ್ಗೆ ಭಾರತ ಹೊಂದಿರುವ ಕಳವಳವನ್ನು ವಿವರಿಸಿದ್ದಾರೆ. ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ರಚಿಸಲಾಗಿರುವ ಜಂಟಿ ಕ್ರಿಯಾ ತಂಡ ಹೆಚ್ಚು ಸಕ್ರಿಯವಾಗಿರಬೇಕೆಂದು ಎಂದು ಶ್ರೀಲಂಕಾ ಅಧ್ಯಕ್ಷರಿಗೆ ಹೇಳಲಾಗಿದೆ ಎಂದು ಸಚಿವರು ತನಗೆ ತಿಳಿಸಿದ್ದಾರೆಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.

ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಕಾಲಿಗೆ ಪಟ್ಟಿ ಬಿಗಿದಿರುವ ವಿಚಾರವನ್ನು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಈಜಿಪ್ಟ್ ನಿಂದ ಭಾರತೀಯರನ್ನು ಸುರಕ್ಷಿತವಾಗಿ ವಾಪಸು ಕರೆತರಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷ್ಣ ಸುಷ್ಮಾ ಅವರಿಗೆ ವಿವರಿಸಿದ್ದಾರೆ. ಸುಷ್ಮಾ ಹೊಂದಿದ್ದ ಗಂಭೀರ ಕಳವಳವಕ್ಕೆ ಪ್ರತಿಸ್ಪಂದಿಸಿ ವಿಪಕ್ಷ ನಾಯಕಿಯನ್ನು ಭೇಟಿಯಾಗುವಷ್ಟು ಸೌಜನ್ಯವನ್ನು ಕೃಷ್ಣ ತೋರಿಸಿದರೆಂದು ಭೇಟಿಯ ಬಳಿಕ ಬಿಜೆಪಿ ಹೇಳಿದೆ.

English summary
Leader of Opposition in Lok Sabha Sushma Swaraj meets External Affairs Minister S M Krishna raising issues like rehabilitation of ethnic Tamils in Sri Lanka and incidents of firing on fishermen by the Sri Lankan Navy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X