ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚ್ ದಾಳಿ : ಸಂಘ, ಬಿಜೆಪಿಗೆ ಕ್ಲೀನ್ ಚಿಟ್

By Mrutyunjaya Kalmat
|
Google Oneindia Kannada News

Justice BK Somashekhar
ಬೆಂಗಳೂರು, ಜ. 28 : ರಾಜ್ಯದ ವಿವಿಧ ಭಾಗದಲ್ಲಿ 2008ರಲ್ಲಿ ನಡೆದ ಚರ್ಚ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸೋಮಶೇಖರ್ ಆಯೋಗ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಘಟನೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದೆ. (ವಿಡಿಯೋ)

ಆಯೋಗದ ಮುಖ್ಯಸ್ಥ ನ್ಯಾಯಮೂರ್ತಿ ಸೋಮಶೇಖರ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಚರ್ಚ್ ಮೇಲಿನ ದಾಳಿಗೆ ಸಂಬಂಧಿಸಿದ 2437 ಪುಟಗಳ ಸಮಗ್ರ ವರದಿಯೊಂದನ್ನು ನೀಡಿದ್ದು, ಘಟನೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚರ್ಚ್ ಮೇಲಿನ ದಾಳಿಗೆ ಮತಾಂತರ ಪ್ರಮುಖ ಕಾರಣವಾಗಿದೆ. ಇದೇ ಕಾರಣಕ್ಕೆ ಚರ್ಚ್ ಮೇಲೆ ದಾಳಿ ನಡೆದಿದೆ. ಹಿಂದೂ ಧರ್ಮೀಯರನ್ನು ಆಸೆ ಆಮಿಷಕ್ಕೆ ಒಳಪಡಿಸಿ ಮತಾಂತರ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಘಟನೆಗೆ ಸಂಬಂಧಿಸಿದಂತೆ ಆಯೋಗವು ಸುಮಾರು 109 ದೂರುಗಳ ಪರಿಶೀಲನೆ ನಡೆಸಿದೆ. ಸುಮಾರು 300 ದಿನಗಳ ಕಾಲ ಘಟನೆಯ ವಿಚಾರಣೆ ನಡೆದಿದೆ. ನ್ಯಾಯಮೂರ್ತಿ ಸೋಮಶೇಖರ್ ಆಯೋಗವು ಸರಕಾರಕ್ಕೆ ವರದಿ ಸಲ್ಲಿಸುವ ಸಂದರ್ಭದಲ್ಲಿ ಗೃಹ ಸಚಿವ ಆರ್ ಅಶೋಕ್, ಕಾನೂನು ಸಚಿವ ಸುರೇಶ್ ಕುಮಾರ್ ಉಪಸ್ಥಿತರಿದ್ದರು.

ನ್ಯಾ. ಸೋಮಶೇಖರ್ ಆಯೋಗ ನೀಡಿರುವ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು, ಸರಕಾರವೇ ಹೇಳಿ ಬರೆಸಿಕೊಂಡ ವರದಿ ಎಂದು ಲೇವಡಿ ಮಾಡಿವೆ. ರಾಜ್ಯದ ಮಂಗಳೂರು, ಬೆಂಗಳೂರು, ಕೋಲಾರ, ಚಿಕ್ಕಮಗಳೂರು, ಬೆಳಗಾವಿ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚರ್ಚ್ ಮೇಲೆ ದಾಳಿ ನಡೆದಿತ್ತು. ಚರ್ಚ್ ದಾಳಿ ಸರಕಾರಕ್ಕೆ ತೀವ್ರ ಅಪಾಯವನ್ನು ಸಹ ತಂದೊಡ್ಡಿತ್ತು.(ಚರ್ಚ್ ದಾಳಿ)

English summary
The Justice Somasekhara Commission of Inquiry into a series of attacks on churches in parts of Karnataka in 2008 has given a "clean chit" to the ruling BJP and Sangh Parivar outfits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X