ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಆಯುಕ್ತ ಸಿದ್ದಯ್ಯ ಎತ್ತಂಗಡಿಗೆ ಲಾಬಿ

By Mrutyunjaya Kalmat
|
Google Oneindia Kannada News

BBMP
ಬೆಂಗಳೂರು, ಜ. 28 : ದಕ್ಷ ಆಡಳಿತಕ್ಕೆ ಹೆಸರುವಾಸಿಯಾಗಿರುವ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರ ಎತ್ತಂಗಡಿಗೆ ವೇದಿಕೆ ಸಿದ್ಧವಾಗತೊಡಗಿದೆ. ಕಾನೂನಿನನ್ವಯ ಆಡಳಿತ ನಡೆಸುತ್ತಿರುವ ಸಿದ್ದಯ್ಯ ವಿರುದ್ಧ ಬಂಡೆದ್ದಿರುವ ಬಿಜೆಪಿ ಶಾಸಕರು, ಕಾರ್ಪೋರೇಟರ್ ಗಳ ವಿರುದ್ಧ ಪ್ರತಿಪಕ್ಷಗಳು ನಾಯಕರು, ಪಾಲಿಕೆ ನೌಕರರು ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಮೇಯರ್ ಎಸ್ ಕೆ ನಟರಾಜ್, ಉಪಮೇಯರ್ ದಯಾನಂದ ಹಾಗೂ ನಗರದ ಎಂಟು ಶಾಸಕರು ಸಿದ್ದಯ್ಯ ಅವರನ್ನು ವರ್ಗಾವಣೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರಕರಣ ಈಗಾಗಲೇ ರಾಜ್ಯಪಾಲರಿಗೆ ತಲುಪಿದೆ.

ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಕಾರ್ಪೋರೇಟರ್ ಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸಿದ್ಧಯ್ಯ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ವರ್ಗಾವಣೆ ಮಾಡಿದ್ದೆ ಆದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬಿಬಿಎಂಪಿ ಕ್ರಿಯಾ ಕಾರ್ಮಿಕರ ಸಮಿತಿ ಸಿದ್ದಯ್ಯ ಅವರನ್ನು ವರ್ಗಾವಣೆ ಮಾಡಿದರೆ ಪೌರಕಾರ್ಮಿಕ ಸಂಘಗಳು ಹೋರಾಟ ಮಾಡುತ್ತವೆ. ದಲಿತ ಮತ್ತು ಶೋಷಿತ ಜನಾಂಗದಿಂದ ಉನ್ನತ ಹುದ್ದೆ ಅಲಂಕರಿಸಿರುವ ವ್ಯಕ್ತಿಯನ್ನು ಕಾರಣವಿಲ್ಲದೆ ವರ್ಗ ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿವೆ.

ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ವಿರುದ್ಧವಾಗಿ ಆದೇಶ ಹೊರಡಿಸಿರುವುದು ಮೇಯರ್ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ನಿಯಮಗಳಿಗೆ ವಿರುದ್ಧವಾಗಿ ಕೈಗೊಂಡ ನಿರ್ಣಯಗಳಿಗೆ ಆದೇಶ ಹೊರಡಿಸಲು ಆಯುಕ್ತರು ನಿರಾಕರಿಸಿದ್ದೇ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಮೂಲಗಳು ತಿಳಿಸಿವೆ.(ಬಿಬಿಎಂಪಿ)

English summary
The divide between Bruhat Bangalore Mahanagara Palike (BBMP) mayor SK Nataraj and Palike commissioner Siddaiah is here to deepen. On Thursday, the scene in the Palike turned worse with the latter going on a two-day leave, giving a clear indication that all is not well with the civic administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X