ಕಾಶ್ಮೀರ ಜೈಲಿಗೆ ಸ್ಥಳಾಂತರಿಸಿ : ಅಫ್ಜಲ್ ಗುರು
ನವದೆಹಲಿ,
ಜ. 28 : ಮರಣದಂಡನೆ ಶಿಕ್ಷೆ ಎದುರಿಸುತ್ತಿರುವ ಸಂಸತ್ ದಾಳಿಯ ರೂವಾರಿ ಮೊಹಮದ್ ಅಫ್ಜಲ್ ಗುರು ತನ್ನನ್ನು ದೆಹಲಿ ಜೈಲಿನಿಂದ ಜಮ್ಮು ಕಾಶ್ಮೀರ ಜೈಲಿಗೆ ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದಾನೆ. id="toptextpromo">ತನ್ನನ್ನು
ನೋಡಲು ಬರುವ ಕುಟುಂಬದ ಸದಸ್ಯರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಅರ್ಜಿಯಲ್ಲಿ ಅಫ್ಜಲ್ ತಿಳಿಸಿದ್ದಾನೆ. ಡಿಸೆಂಬರ್ 13 , 2001 ರಲ್ಲಿ ಐವರು ಪಾತಕಿಗಳೊಂದಿಗೆ ಕಾರಿಗೆ ಸರಕಾರದ ಸ್ಟಿಕರ್ ಅಂಟಿಸಿ ಸಂಸತ್ ಪ್ರವೇಶಿಸಿ 5 ಜನ ಪೋಲಿಸ್ ಸೇರಿ 7 ಜನರ ಮೇಲೆ ಗುಂಡಿನ ಮಳೆಗೈದು ಹತ್ಯೆ ಮಾಡಿದ್ದ. ಡಿಸೆಂಬರ್ 2002 ರಲ್ಲಿ ದೆಹಲಿ ಟ್ರಯಲ್ ಕೋರ್ಟ್ ಉಗ್ರನಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. id='are-slot-1' class='oiad oi-axt oiadv'> id='top-searched-articles'>ಈ
ತೀರ್ಪಿನ ಒಂದು ವರ್ಷದ ನಂತರ ದೆಹಲಿ ಉಚ್ಚ ನ್ಯಾಯಾಲಯ ಕೂಡ ತೀರ್ಪನ್ನು ಎತ್ತಿ ಹಿಡಿದಿತ್ತು. 2005 ರಲ್ಲಿ ಸರ್ವೋಚ್ಚ ನ್ಯಾಯಾಲಯ ಅಫ್ಜಲ್ ಗುರು ಮಾಡಿದ್ದ ಮನವಿಯನ್ನು ತಿರಸ್ಕರಿಸಿ ಮರಣದಂಡನೆ ಖಾಯಂ ಆದೇಶ ನೀಡಿತ್ತು. ಈಗ ಕೇಂದ್ರ ಗೃಹ ಖಾತೆಯ ಮೂಲಕ ರಾಷ್ಟ್ರಪತಿ ಬಳಿ ಅಫ್ಜಲ್ ದಯಾ ಅರ್ಜಿ ಸಲ್ಲಿಸಿದ್ದು, ಇದರ ತೀರ್ಪು ಇನ್ನೂ ಇತ್ಯರ್ಥವಾಗಬೇಕಿದೆ.(ಅಫ್ಜಲ್ ಗುರು)












Click it and Unblock the Notifications