ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರ ದೌಡು

ಈಗಾಗಲೇ ಇಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪಕ್ಷಿಗಳು ಗೂಡು ಕಟ್ಟುವುದರಲ್ಲಿ, ಮೊಟ್ಟೆಯಿಡುವುದರಲ್ಲಿ ನಿರತವಾಗಿವೆ. ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ಹುಲ್ಲು ಕಡ್ಡಿಗಳನ್ನು ತಂದು ಗೂಡು ಕಟ್ಟುತ್ತಿವೆ. ಅಲ್ಲದೆ ಕಾವೇರಿ ನದಿಯಲ್ಲಿರುವ ಮರಿಮೀನುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.
ಇಲ್ಲಿನ ದ್ವೀಪಕ್ಕೆ ಸುತ್ತು ಹೊಡೆಯಲು ಬೋಟಿಂಗ್ ವ್ಯವಸ್ಥೆ ಇರುವುದರಿಂದ ಪ್ರವಾಸಿಗರು ದೋಣಿ ವಿಹಾರ ಮಾಡುತ್ತಾ ಪಕ್ಷಿ ವೀಕ್ಷಣೆ ಮಾಡಬಹುದಾಗಿದೆ. ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಆದಾಯವೂ ಗಣನೀಯವಾಗಿ ಹೆಚ್ಚಿದೆ. ಪ್ರಸಕ್ತ ಇಲ್ಲಿಯವರೆಗೆ ಸುಮಾರು ನಾಲ್ಕುಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು, ಈಗಾಗಲೇ ಒಂದು ಕೋಟಿ ಹತ್ತು ಲಕ್ಷ ರೂ. ಸಂಗ್ರಹವಾಗಿದೆ ಎಂದು ಹೇಳಲಾಗಿದೆ.
ರಂಗನತಿಟ್ಟು ಹೋಗುವ ಬಗೆ: ಮೈಸೂರಿನಿಂದ 19 ಕಿ.ಮೀ. ಶ್ರೀರಂಗಪಟ್ಟಣದಿಂದ 3 ಕಿ.ಮೀ ದೂರದಲ್ಲಿದೆ. ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಮಯೂರ ಹೋಟೆಲ್ ಗಳ ವ್ಯವಸ್ಥೆ ಸಿಗುತ್ತದೆ. [ಕರ್ನಾಟಕ ಪ್ರವಾಸೋದ್ಯಮ]












Click it and Unblock the Notifications