ಪಾಪು ಪುತ್ರಿ ಆತ್ಮಹತ್ಯೆ ಪ್ರಕರಣ ಚಾರ್ಜ್ ಶೀಟ್ ಸಲ್ಲಿಕೆ
ಬೆಂಗಳೂರು,
ಜ. 19 : ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಅವರ ಮಗಳು ಶಾಂತಲಾ(55) ಅವರ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಪೂರ್ಣಗೊಂಡಿದ್ದು, ಮೃತರ ಪತಿ ಸೇರಿ ಮೂವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. id="toptextpromo">ಶಾಂತಲಾ
ಅವರ ಪತಿ ಬಸವರಾಜು, ಆವರ ಸಹೋದರಿ ಬಿನೀತಾ ಚೌಹಾನ್ ಮತ್ತು ಸ್ನೇಹಿತೆ ಜಯಾ ಚಾಕೋ ಆರೋಪಿಗಳು. ಬಸವರಾಜು ಅವರು ಜಯಾ ಚಾಕೋ ಎಂಬುವವರೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದರಿಂದ ದಂಪತಿಗಳ ಮಧ್ಯೆ ಆಗಾಗ್ಗೆ ಜಗಳ ನಡೆಯತ್ತಿತ್ತು. ಅಲ್ಲದೆ, ಬಸವರಾಜು ಅವರ ಸಹೋದರಿ ಬಿನೀತಾ ಚೌಹಾನ್ ಮತ್ತು ಜಯಾ ಸೇರಿಕೊಂಡು ಶಾಂತಲಾ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಅವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>2010ರ
ಜುಲೈ 21 ರಂದು ಶಾಂತಲಾ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜುಲೈ 24 ರಂದು ಶಾಂತಲಾ ಮೃತಪಟ್ಟಿದ್ದರು. ಜೀವನ್ ಭೀಮಾನಗರದ ಪೊಲೀಸರು ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಪಾಟೀಲ್ ಪುಟ್ಟಪ್ಪ ಅವರು ನನ್ನ ಮಗಳನ್ನು ಕೊಲೆ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಜೀವನ್ ಭೀಮಾನಗರ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.(ಕ್ರೈಂ)











Click it and Unblock the Notifications