ಸಂಕ್ರಾತಿಗೆ ಬೆಲೆ ಏರಿಕೆಯ ಕಹಿ
ಬೆಂಗಳೂರು,
ಜ. 13 : ಕಳೆದ ಬಾರಿಯ ಸಂಕ್ರಾತಿಯಂದು ಸೂರ್ಯಗ್ರಹಣವಾದರೆ, ಈ ಬಾರಿ ಎಳ್ಳು ಬೆಲ್ಲ ತಿಂದು ದಿನನಿತ್ಯ ಪದಾರ್ಥಗಳ ದುಬಾರಿ ಬೆಲೆ ಬಗ್ಗೆ ಮಾತನಾಡಬೇಕಾದ ಪರಿಸ್ಥಿತಿ. ಎಲ್ಲಾ ತರಕಾರಿಗಳ ಜೊತೆಗೆ ಕಬ್ಬು, ಬೆಲ್ಲಗಳ ಬೆಲೆಯೂ ತುಟ್ಟಿಯೋ ತುಟ್ಟಿ. id="toptextpromo">ಸಂಪ್ರದಾಯದಂತೆ
ಹಬ್ಬ ಆಚರಿಸಬೇಕಾದ ಅನಿವಾರ್ಯತೆ ಇರುವುದರಿಂದ ಕಬ್ಬು, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಮುಂತಾದವುಗಳ ಬೆಲೆ ಕೂಡ ಕಳೆದ ಬಾರಿಗಿಂತ ಈ ಬಾರಿ ವಿಪರೀತ ಜಾಸ್ತಿಯಾಗಿದೆ. ಹಾಗಾಗಿ ಕೊಳ್ಳುವ ಪ್ರಮಾಣವನ್ನು ಕಮ್ಮಿ ಮಾಡಿಯಾದರೂ ಕಷ್ಟಪಟ್ಟು ಹಬ್ಬ ಆಚರಿಸಬೇಕಾಗಿದೆ. ಇದರ ಜೊತೆಗೆ ಹೂಗಳ ಬೆಲೆ ಕೂಡಾ ಗಗನಕ್ಕೇರಿದೆ. ಮಲ್ಲಿಗೆ ಹೂವಿನ ಬೆಲೆ ಕೆಜಿಗೆ 900 -1000, ಸೇವಂತಿಗೆ 100 -140, ಕನಕಾಂಬರ 500 -650, ಗುಲಾಬಿ ಹೂವು 150 -200, ಸುಗಂಧರಾಜ ಹೂಗಳ ಬೆಲೆ 100 -150 ರುಪಾಯಿವರೆಗಿದೆ. id='are-slot-1' class='oiad oi-axt oiadv'> id='top-searched-articles'>ಇನ್ನು
ಕಪ್ಪು ಕಬ್ಬು ಒಂದು ಕಟ್ಟಿಗೆ ರುಪಾಯಿ 200 - 225, ಕೆಂಪು ಕಬ್ಬು 100 -125, ಎಳ್ಳು ಕೆಜಿಗೆ 125-150, ಬೆಲ್ಲ 170-200, ಸಕ್ಕರೆ ಅಚ್ಚು 125-200, ಹುರಿಗಡಲೆ 50 -70, ಜೀರಿಗೆ ಪೆಪ್ಪರ್ ಮಿಂಟ್ 80 -95, ಎಲ್ಲದರ ಮಿಶ್ರಣ 125 -150 ರುಪಾಯಿವರೆಗಿದೆ. ಕಳೆದ ಬಾರಿಗೆ ಹೋಲಿಸಿದ್ದಲ್ಲಿ ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ ಉಪಯೋಗಿಸುವ ವಸ್ತುಗಳ ಬೆಲೆ ಶೇ. 20 ರಷ್ಟು ದುಬಾರಿಯಾಗಿದೆ.(ಸಂಕ್ರಾಂತಿ)











Click it and Unblock the Notifications