ದಾವಣಗೆರೆಯಲ್ಲಿ ಪಾಸ್ಟರ್ ಮೇಲೆ ತೀವ್ರ ಹಲ್ಲೆ
ದಾವಣಗೆರೆ,
ಜ. 5 : ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಜರಂಗ ದಳದ ಕಾರ್ಯಕರ್ತನೊಬ್ಬ ಕ್ರಿಶ್ಚಿಯನ್ ಪಾಸ್ಟರ್ ಮೇಲೆ ತೀವ್ರ ಹಲ್ಲೆ ನಡೆಸಿದ ಘಟನೆ ದಾವಣಗೆರೆ ಬಳಿ ನಡೆದಿದೆ. id="toptextpromo">ಪಾಸ್ಟರ್
ಇಸಾಕ್ ಸಾಮ್ಯುಯೆಲ್ (40) ಹಲ್ಲೆಗೊಳಗಾಗಿದ್ದು, ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿರುವುದರಿಂದ ಅವರನ್ನು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ಭಾರಿ ಪೆಟ್ಟು ಬಿದ್ದಿದ್ದು, ಸುಮಾರು 11 ಹೊಲಿಗೆಗಳನ್ನು ಹಾಕಲಾಗಿದೆ. ಹೊಸ ವರ್ಷ ಆಚರಿಸಲು ಇಸಾಕ್ ಸಾಮ್ಯುಯೆಲ್ ಕೆಲ ಕ್ರಿಶ್ಚಿಯನ್ ಜನರೊಂದಿಗೆ ಪ್ರಾರ್ಥನೆ ಮಾಡುತ್ತಿದ್ದಾಗ ಬಸವರಾಜ ಎಂಬ ಭಜರಂಗದಳದ ಮುಖಂಡನೊಬ್ಬ ಮತಾಂತರದ ಮಾಡಲಾಗುತ್ತಿದೆ ಎಂದು ಆರೋಪಿಸಿ ಈ ದಾಳಿ ನಡೆಸಿದ್ದಾನೆ ಎಂದು ಗ್ಲೋಬಲ್ ಕೌನ್ಸಿಲ್ ಆಫ್ ಇಂಡಿಯನ್ ಕ್ರಿಶ್ಚಿಯನ್ ಅಧ್ಯಕ್ಷ ಸಾಜನ್ ಜಾರ್ಜ್ ಆರೋಪಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹಲ್ಲೆಗೊಳಗಾದ
ಸಾಮ್ಯುಯೆಲ್ ಗ್ಲೋಬಲ್ ಕೌನ್ಸಿಲ್ ನ ದಾವಣಗೆರೆ ಜಿಲ್ಲೆಯ ಕೋ-ಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಗೆ ದಾಖಲಿಸಿರುವ ಪಾಸ್ಟರ್ ನ ಸ್ಥಿತಿ ಚಿಂತಾಜನಕವಾಗಿದೆ. ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು, ನಮ್ಮಷ್ಟಕ್ಕೆ ನಾವು ಹೊಸ ವರ್ಷ ಆಚರಣೆ ಮಾಡುವುದು ತಪ್ಪೆ ಎಂದು ಸಾಜನ್ ಜಾರ್ಜ್ ಪ್ರಶ್ನಿಸಿದ್ದಾರೆ. ಬಸವರಾಜು ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು ಅವರು ಹೇಳಿದ್ದಾರೆ.











Click it and Unblock the Notifications