ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಕ್ಕೆ : ಸರ್ಪ ಸಂಸ್ಕಾರ ಸೇವಾ ದರ ದುಪ್ಪಟ್ಟು!

By Mrutyunjaya Kalmat
|
Google Oneindia Kannada News

Kukke Subramanya Temple
ಬೆಂಗಳೂರು, ಜ. 3 : ಈರುಳ್ಳಿ, ಟೊಮೆಟೋ, ಚಿನ್ನ, ಅಕ್ಕಿ, ಬೆಳ್ಳಿ ಸೇರಿದಂತೆ ಅನೇಕ ವಸ್ತುಗಳು ಬೆಲೆಗಳು ಗಗನಮುಖಿಯಾಗಿರುವುದು ಗೊತ್ತಿರುವ ಸಂಗತಿ. ಈ ಸಂಕಟದಿಂದ ಪಾರಾಗಲು ದೇವರ ಮೊರೆ ಹೋಗೋಣ ಅಂದ್ರೆ ದೇವರ ಸೇವೆಯೂ ಬಲು ತುಟ್ಟಿಯಾಗಿದೆ. ದೇಶದ ಸುಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಮಣ್ಯ ಸೇವೆಯ ದರ ಭಕ್ತರಿಗೆ ಬಿಸಿ ಮುಟ್ಟಿಸತೊಡಗಿದೆ.

ಸರಕಾರದ ಮುಜರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನದ ವಾರ್ಷಿಕ ಆದಾಯ ಕೋಟಿ ಕೋಟಿ. ರಾಜ್ಯ ಮುಜರಾಯಿ ದೇವಾಲಯಗಳ ಪೈಕಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಅಗ್ರ ಸ್ಥಾನದಲ್ಲಿದೆ. ಅನೇಕ ಹರಕೆ, ದೋಷ ಹೊತ್ತುಕೊಂಡು ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಇದರ ಜೊತೆಗೆ ಸೇವೆಗಳ ದರಗಳೂ ಏರುತ್ತಲೇ ಇವೆ.

ಸರ್ಪ ಸಂಸ್ಕಾರ ಸುಬ್ರಮಣ್ಯನಿಗೆ ಸಲ್ಲಿಕೆಯಾಗುವ ವಿಶಿಷ್ಟ ಹರಕೆ ಸೇವೆ. ಸರ್ಪ ದೋಷ ಪರಿಹಾರಕ್ಕೆ ಸೇವಾ ದರ ಈವರೆಗೂ 1,600 ರುಪಾಯಿ ಇತ್ತು. ಇದೀಗ ಜ.1 ರಿಂದ 2,500 ರುಪಾಯಿಗೆ ಏರಿಕೆಯಾಗಿದೆ. 2009-10 ಸಾಲಿನಲ್ಲಿ ಸುಮಾರು 32,714 ಸರ್ಪಸಂಸ್ಕಾರ ಸೇವೆ ನಡೆದಿದ್ದು, ಈ ಸೇವೆಯಿಂದ 5.23 ಕೋಟಿ ರುಪಾಯಿ ಸಂಗ್ರಹವಾಗಿದೆ.

ಇದರ ಜೊತೆಗೆ ಅಶ್ಲೇಷ ಬಲಿ, ನಾಗ ಪ್ರತಿಷ್ಠೆ, ನಾನಾ ರಥೋತ್ಸವ, ಮಹಾಪೂಜೆ, ತುಲಾಭಾರ, ಅನ್ನಪ್ರಾಶನ, ಚವಲ, ಕುಕ್ಕೆಲಿಂಗ, ಮಹಾಪೂಜೆ, ಆದಿಸುಬ್ರಮಣ್ಯ, ಕಾಶಿಕಟ್ಟೆ ಗಣಪತಿ, ಕಾಲಭೈರವ ದೇವರ ಸನ್ನಿಧಿಯಲ್ಲಿ ನಡೆಸುವ ಎಲ್ಲ ಸೇವೆಗಳ ದರ ಏರಿಕಯಾಗಿವೆ.

English summary
Shocking news for Kukke Subramanya devotee's, State Muzarai Department have decided to price rise for Sarpa-Samskara service in Kukke Subramanya Temple of Dakshina Kannada. Sarpa Samskara is one of the poojas performed by devotees at this temple to get rid of the sarpa dosha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X