ಮಾಹಿತಿ ಆಯೋಗದ ಎಸ್ಸೆಎಂಎಸ್ ಸೇವೆ ಶುರು

ಈ ಮಾಹಿತಿ ಪಡೆಯಲು ಮಾಡಬೇಕಾದದ್ದು ಇಷ್ಟೇ. KICSTAT ಬರೆದು ಚಿಕ್ಕ ಜಾಗ ಬಿಟ್ಟು kicಪ್ರಕರಣದ ಸಂಖ್ಯೆ PTN ನಂತರ ಪ್ರಕರಣದ ಇಸವಿ ಬರೆದು 92123 57123 ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ಕಳುಹಿಸಬೇಕು. (ಉದಾ: KICSTAT kic 108ptn2010). ಕ್ಷಣ ಮಾತ್ರದಲ್ಲಿ ನಿಮ್ಮ ಪ್ರಕರಣದ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಮಾಹಿತಿ ನೀಡದ ಅಧಿಕಾರಿಗಳ ಕ್ರಮ ಜರುಗಿಸಲು ಸುಲಭವಾಗುತ್ತದೆ.
ಕನ್ನಡದಲ್ಲೂ ಮಾಹಿತಿ :ಇದಲ್ಲದೇ ದಾಖಲಾದ ದೂರಿನ ವಿವರಗಳನ್ನು ಆಯೋಗದ ವೆಬ್‌ಸೈಟ್ ನಿಂದಲೂ ಪಡೆದುಕೊಳ್ಳುವ ಅವಕಾಶ ಜ.1ರಿಂದ ಜಾರಿಗೊಳ್ಳುತ್ತದೆ. ಈ ವೆಬ್‌ಸೈಟ್ ಮೂಲಕವೇ ಕನ್ನಡದಲ್ಲೂ ಮಾಹಿತಿ ಪಡೆಯಬಹುದು.
ಮಾಹಿತಿ ಹಕ್ಕು ಕಾಯ್ದೆಯು 2005ರಲ್ಲಿ ಜಾರಿಗೆ ಬಂದ ನಂತರ ಆಯೋಗ ಕಾರ್ಯಾರಂಭ ಮಾಡಿದೆ. ಹಳೆಯ ಪ್ರಕರಣಗಳನ್ನು ಈಗಾಗಲೇ ಇತ್ಯರ್ಥಗೊಳಿಸಿರುವ ಕಾರಣ, ವೆಬ್‌ಸೈಟ್ ಹಾಗೂ ಎಸ್‌ಎಂಎಸ್‌ಗಳಲ್ಲಿ 2008ರ ನಂತರದ ಪ್ರಕರಣಗಳ ಬಗ್ಗೆಯಷ್ಟೇ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಕೃಷ್ಣ ವಿವರಿಸಿದರು.
ದೂರು ದಾಖಲು ಮಾಡುವಾಗ ಅರ್ಜಿದಾರರು ತಮ್ಮ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದು ಮಾಡಬೇಕು. ಒಂದು ವೇಳೆ ಈಗಾಗಲೇ ಸಲ್ಲಿಸಿರುವ ದೂರಿನಲ್ಲಿ ದೂರವಾಣಿ ಸಂಖ್ಯೆಯನ್ನು ನಮೂದು ಮಾಡಿಲ್ಲದ ಪಕ್ಷದಲ್ಲಿ ನಿಗದಿತ ನಮೂನೆಯ ಅರ್ಜಿ ಭರ್ತಿ ಮಾಡಿ ಸಂಖ್ಯೆಯನ್ನು ಆಯೋಗಕ್ಕೆ ತಿಳಿಸಬಹುದು ಎಂದು ಕೃಷ್ಣ ವಿವರಿಸಿದರು.
ಅಂಕಿ ಅಂಶ: ಮಾಹಿತಿ ಹಕ್ಕು ಆಯೋಗದಲ್ಲಿ 2010ನೇ ಸಾಲಿನಲ್ಲಿ ಒಟ್ಟು 12,886 ದೂರುಗಳು ದಾಖಲಾಗಿದ್ದವು. ಆ ಪೈಕಿ 6960 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಮಾಹಿತಿ ನೀಡದ ಅಧಿಕಾರಿಗಳಿಗೆ 519 ಪ್ರಕರಣಗಳಲ್ಲಿ 22.70ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ. 133 ಜನರಿಗೆ ಪರಿಹಾರ ದೊರಕಿಸಿಕೊಡಲಾಗಿದೆ. ಐದು ಜಿಲ್ಲಾ ಕೇಂದ್ರಗಳಲ್ಲಿ 1059 ವಿಚಾರಣೆ ನಡೆಸಲಾಗಿದೆ ಎಂದು ಡಾ.ಕೃಷ್ಣ ಅವರು ಅಂಕಿ ಅಂಶಗಳನ್ನು ನೀಡಿದರು. [ಆರ್ ಟಿಐ]












Click it and Unblock the Notifications