ಕೊಡಗಿನ ನಿಸರ್ಗಕ್ಕೆ ಮನಸೋತ ಮಿಸ್‌ಅರ್ಥ್

ಬೆಂಗಳೂರಿನಿಂದ ನೇರವಾಗಿ ಕೊಡಗಿಗೆ ಆಗಮಿಸಿರುವ ಅವರು ಸೋಮವಾರ ಇಲ್ಲಿಗೆ ಸಮೀಪದ ಹಲವು ಪ್ರವಾಸಿತಾಣಗಳಿಗೆ ಭೇಟಿ[ಚಿತ್ರ ನೋಡಿ] ನೀಡಿದರು. ಬಳಿಕ ಕುಶಾಲನಗರ ಬಳಿಯಿರುವ ಅಮನವನ ಸ್ಪಾ ಎಂಬ ರೆಸಾರ್ಟ್‌ನಲ್ಲಿ ಒಂದು ರಾತ್ರಿ ಕಳೆದ ಅವರು ಕೊಡಗಿನ ಭೋಜನವನ್ನು ಸವಿದರು. ಇಲ್ಲಿಯ ವಾತಾವರಣ, ಜನ, ಎಲ್ಲವೂ ಇಷ್ಟವಾಗಿದ್ದು, ತುಂಬಾ ಎಂಜಾಯ್ ಮಾಡಿದ್ದಾಗಿ ಹೇಳಿದರಲ್ಲದೆ, ಅಮನವನ ಸ್ಪಾ ರೆಸಾರ್ಟ್‌ನ ವ್ಯವಸ್ಥಾಪಕ ನಿರ್ದೇಶಕಿ ಕಾವ್ಯ ಮಾದಪ್ಪ ಹಾಗೂ ರೆಸಾರ್ಟ್ ಮುಖ್ಯಸ್ಥ ಮಿಟ್ಟುಚೆಂಗಪ್ಪ ಅವರ ಆಹ್ವಾನದ ಮೇರೆಗೆ ಆಗಮಿಸಿರುವುದಾಗಿ ತಿಳಿಸಿದರು.
ಡಿಸೆಂಬರ್ 4 ರಂದು ವಿಯಟ್ನಾಮ್ ನಲ್ಲಿ ಜರುಗಿದ ಮಿಸ್ ಅರ್ಥ್ 2010 ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಧರಿಸಿದ ನಿಕೊಲೆ ಫೆರಿಯಾ ಬೆಂಗಳೂರಿನ ಹುಡುಗಿ. ಜಾಗತಿಕ ಮಟ್ಟದ ಈ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಗಳಿಸಿ ರಾಜ್ಯಕ್ಕೆ ಹೆಮ್ಮೆ ತಂದ ನಿಕೊಲೆ ಮೌಂಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ನಿಕೊಲೆ ಅವರ ಎತ್ತರ 5 ಅಡಿ 9 1/2 ಅಂಗುಲ. ( 1.76 ಮೀಟರ್). ತೂಕ, 46 ಕಿಲೋ. ಹುಟ್ಟಿದ ದಿನಾಂಕ, 9 ಫೆಬ್ರವರಿ 1990. ಹುಟ್ಟಿದ ಸ್ಥಳ, ಬೆಂಗಳೂರು. ಊರು, ಬೆಂಗಳೂರು. [ಕೊಡಗು]












Click it and Unblock the Notifications