ಬೆಂಗಳೂರಲ್ಲಿ ಆರ್ಯ ವೈಶ್ಯ ಶತಮಾನೋತ್ಸವ ಸಮಾವೇಶ
ಬೆಂಗಳೂರು,
ಡಿ. 24 : ಆರ್ಯ ವೈಶ್ಯ ಸಮಾಜದ ಮೂರು ದಿನಗಳ ಶತಮಾನೋತ್ಸವ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ಆರಂಭವಾಗಿದೆ. ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಆಯೋಜಿಸಿರುವ ಈ ಸಮಾವೇಶದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚಿನ ಆರ್ಯ ವೈಶ್ಯ ಬಂಧುಗಳು ಭಾಗವಹಿಸಲಿದ್ದಾರೆ. id="toptextpromo">ಕರ್ನಾಟಕದಲ್ಲಿ
ಸುಮಾರು 5 ಲಕ್ಷದಷ್ಟು ಇರುವ ಆರ್ಯ ವೈಶ್ಯರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಾಜಕೀಯವಾಗಿಯೂ ಹೆಚ್ಚಿನ ಪ್ರಾತಿನಿಧ್ಯ ಪಡೆಯುವ ನಿಟ್ಟಿನಲ್ಲಿ ಚರ್ಚೆಗಳನ್ನು ನಡೆಸಲಿದ್ದಾರೆ ಎಂದು ಮಹಾಸಭಾ ಹೇಳಿದೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೇವೆ, ಬಡತನ ನಿರ್ಮೂಲನೆ, ನಿರುದ್ಯೋಗಿಗಳಿಗೆ ವಿವಿಧ ಉದ್ಯೋಗಗಳಲ್ಲಿ ತರಬೇತಿ ನೀಡುವ ಕುರಿತಂತೆಯೂ ಚರ್ಚಿಸಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಳೆದ
ಅಕ್ಟೋಬರ್ ನಲ್ಲಿ ದಾವಣಗೆರೆಯಲ್ಲಿ ಜಿಲ್ಲಾ ಆರ್ಯ ವೈಶ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಸೆಪ್ಟೆಂಬರ್ ನಲ್ಲಿಯೇ ಬೆಂಗಳೂರು, ಚಿಕ್ಕಬಳ್ಳಾಪುರ, ನಂಜನಗೂಡು, ಹುಬ್ಬಳ್ಳಿ ಮತ್ತು ಬೀದರಿನಿಂದ ದಾವಣಗೆರೆಯವರೆಗೆ ರಥಯಾತ್ರೆಯನ್ನು ಆಯೋಜಿಸಲಾಗಿತ್ತು. ಒಂದು ಲಕ್ಷಕ್ಕೂ ಹೆಚ್ಚಿನ ಜನರು ಇದರಲ್ಲಿ ಭಾಗವಹಿಸಿದ್ದರು.











Click it and Unblock the Notifications