ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡ ವಿಕಿಪೀಡಿಯ ಸಭೆಗೆ ಮಾರ್ಗಸೂಚಿ
ಬೆಂಗಳೂರು, ಡಿ.21: ಅಂತರ್ ಜಾಲದಲ್ಲಿ ಕನ್ನಡ ಮಾಹಿತಿ ಸಂಪತ್ತನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸದಸ್ಯರು ಮಹತ್ವವಾದ ಒಂದು ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಕನ್ನಡ ವಿಕಿಪೀಡಿಯದಲ್ಲಿರುವ ತೊಡಕುಗಳು, ಬಯಸಿದ ಬದಲಾವಣೆಗಳ ಸಾಧ್ಯಾಸಾಧ್ಯತೆಗಳು, ಅಲ್ಲಿರುವ ನೂನ್ಯತೆಗಳು ಮುಂತಾದ ವಿಷಯಗಳ ಬಗ್ಗೆ ಕೂಲಂಕಷವಾಗಿ, ಮುಕ್ತವಾಗಿ ಸಮಾಲೋಚನೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ವಿಕಿಪೀಡಿಯಾ ಒಡನಾಡಿಗಳ ಈ ಸಮ್ಮಿಲನ ಬೆಂಗಳೂರಿನಲ್ಲಿ ಏರ್ಪಾಟಾಗಿದೆ.
ಪದ್ಮನಾಭನಗರದ ಐನೆಟ್ ಫ್ರೇಮ್ ಸಲ್ಯೂಷನ್ಸ್ ನಲ್ಲಿ ಡಿ. 25ರ ಶನಿವಾರ ಬೆಳಗ್ಗೆ 10 ಗಂಟೆಗೆ ಈ ಸಭೆ ಇದೆಯೆಂದೂ ಅದಕ್ಕೆ ತಾವೆಲ್ಲ ಆಗಮಿಸಬೇಕೆಂದು ವಿಕಿ ಸಮುದಾಯದ ಸಕ್ರಿಯ ಸದಸ್ಯ ಹರಿಪ್ರಸಾದ್ ನಾಡಿಗ್ ಕೋರಿಕೊಂಡಿದ್ದಾರೆ.
ಗೂಗಲ್ ಟ್ರಾನ್ಸ್ ಲೇಷನ್ ಟೂಲ್ ಬಳಸಿ ವಿಕಿಪೀಡಿಯಾ ಲೇಖನಗಳನ್ನು ಅನುವಾದಿಸಲು ಸಾಧ್ಯವೆ? ಎನ್ನುವುದು ಮುಖ್ಯವಾದ ಜಿಜ್ಞಾಸೆ. ಅದು ಸಾಧ್ಯ ಎನ್ನುವುದಾದರೆ ಹೇಗೆ? ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕ ಬಯಸುವವರೆಲ್ಲ ಅಂದಿನ ಸಭೆಯಲ್ಲಿ ಭಾಗವಹಿಸಬೇಕು.
ಸ್ಥಳ:
ಐನೆಟ್ ಫ್ರೇಮ್ ಸಲ್ಯೂಷನ್ಸ್ ಪ್ರೈ.ಲಿ
#23/26, ಶ್ರೀ ಕಲ್ಯಾಣಿ ಭವನ್,
2ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ
ಸಾರ್ವಭೌಮ ನಗರ
ಚಿಕ್ಕಲಸಂದ್ರ
ಬೆಂಗಳೂರು-560 061
ದೂರವಾಣಿ:(080) 2639 1661
ಸಂಪರ್ಕ: ಹೆಸರನ್ನು ನೊಂದಾಯಿಸಿಕೊಳ್ಳಲು ಸುಮಾ ನಾಡಿಗ್ ಅವರಿಗೆ ಒಂದು ಫೋನು ಮಾಡಿ 90083 22612. ಅಥವಾ ಹರಿಪ್ರಸಾದ್ ನಾಡಿಗೆ ಅವರಿಗೆ ಇಮೇಲ್ ಹಾಕಿ hpnadig@gmail.com.
ಗೂಗಲ್ ಮಾರ್ಗ ಸೂಚಿಗಾಗಿ ಕ್ಲಿಕ್ಕಿಸಿ
Comments
English summary
A Kannada Wikipedia Meet-Up is organised at Inetframe solutions Pvt. Ltd. near Chikalsandra, Bengaluru on 25th December at 10am. Many Wiki Community Members are attending the event to discuss about roadblocks on Kannada Wikipedia and also there will be a discussion on Google translation tool being used for translation of Wikipedia articles.
Story first published: Tuesday, December 21, 2010, 17:10 [IST]