ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಸ್ಟ್ : 12 ಸಾವಿರ ರನ್ ಪೂರೈಸಿದ ದ್ರಾವಿಡ್

By Mrutyunjaya Kalmat
|
Google Oneindia Kannada News

Rahul Dravid
ಸೆಂಚುರಿಯನ್, ಡಿ. 20 : ದಿ ವಾಲ್ ಎಂದೇ ಹೆಸರುವಾಸಿಯಾದ ಕರ್ನಾಟಕ ಕ್ರಿಕೆಟ್ ಕಲಿ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಸೆಂಚುರಿಯನ್‌ ನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಗಳಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ ಪ್ರಥಮ ಟೆಸ್ಟ್‌ ನ ನಾಲ್ಕನೇ ದಿನದಂದು ದ್ವಿತೀಯ ಇನಿಂಗ್ಸ್‌ನಲ್ಲಿ 43 ರನ್ ಬಾರಿಸುವ ಮೂಲಕ ಟೆಸ್ಟ್‌ನಲ್ಲಿ 12 ಸಾವಿರ ರನ್‌ ಗಳ ಮೈಲುಗಲ್ಲನ್ನು ದಾಟಿದ ಸಾಧನೆ ಮಾಡಿದ್ದಾರೆ.

ಪ್ರಥಮ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಲು ಅವರಿಗೆ 57 ರನ್‌ ಗಳ ಅಗತ್ಯತೆ ಇತ್ತು. ಪ್ರಥಮ ಇನಿಂಗ್ಸ್‌ನಲ್ಲಿ 11 ರನ್ ಬಾರಿಸಿದ ದ್ರಾವಿಡ್, ದ್ವಿತೀಯ ಇನಿಂಗ್ಸ್‌ನಲ್ಲಿ 43 ರನ್ ಬಾರಿಸಿ ಔಟಾಗುವ ಮೂಲಕ ತಮ್ಮ ಸಾಧನೆಗೆ ಅಗತ್ಯದ ರನ್ ಪೂರೈಸಿದರು. 37ರ ಹರೆಯದ ದ್ರಾವಿಡ್ ಭಾರತದ ಕ್ರಿಕೆಟ್‌ ನ ಮಾಸ್ಟರ್ ಸಚಿನ್ ತೆಂಡೂಲ್ಕರ್(14,422), ಮತ್ತು ಆಸ್ಟ್ರೇಲಿಯದ ನಾಯಕ ರಿಕಿ ಪಾಂಟಿಂಗ್ (12,333) ಇವರ ಬಳಿಕದ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಪ್ರಥಮ ಇನಿಂಗ್ಸ್ ನಲ್ಲಿ 11 ರನ್ ಬಾರಿಸಿ ಗರಿಷ್ಠ ರನ್ ದಾಖಲಿಸಿದ ವೆಸ್ಟ್‌ಇಂಡಿಸ್‌ ನ ಬ್ರಿಯಾನ್ ಲಾರಾ (11,953) ಹೆಸರಲ್ಲಿದ್ದ ವಿಶ್ವದ ಮೂರನೇ ಆಟಗಾರನೆಂಬ ದಾಖಲೆಯನ್ನು ಅಳಸಿಹಾಕಿದ್ದರು. 148ನೆ ಟೆಸ್ಟ್ ಆಡುತ್ತಿರುವ ದ್ರಾವಿಡ್ 31 ಶತಕ, 59 ಅರ್ಧಶತಕ ಬಾರಿಸಿದ್ದಾರೆ. ಅವರ ರನ್ ಸರಾಸರಿ 53.31 ಇದೆ.(ರಾಹುಲ್ ದ್ರಾವಿಡ್)

English summary
Rahul Dravid has crossed another milestone in Test cricket on Sunday as he became only the third cricketer to score 12,000 Test runs.The 37-year-old had also become the third highest run-getter in Test cricket during the first inning of the ongoing Test, going past West Indian great Brian Lara.Dravid is behind Sachin Tendulkar (14,422) and Australia captain Ricky Ponting, who has 12,333.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X