ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೇ! ಇವರು ಊಸರವಳ್ಳಿಯ ಉಳಿಸಲಾರರು

By * ರಾಘವೇಂದ್ರ ಶರ್ಮಾ, ತಲವಾಟ
|
Google Oneindia Kannada News

Protect Chameleon
ಶಿವಮೊಗ್ಗ, ಡಿ.20: ಬಣ್ಣ ಬದಲಾಯಿಸುವ ವ್ಯಕ್ತಿತ್ವದ ಜನರಿಗೆ ಊಸರವಳ್ಳಿಯ ಕುಲದವನು ಎಂಬ ಮಾತಿದೆ. ಗೋಸುಂಬೆ ಅಂತಲೂ ಕರೆಯುತ್ತಾರೆ. ಹಾಗೆ ಕರೆಯುವ ಕಾರಣ ಹುಡುಕುತ್ತಾ ಹೊರಟರೆ ನಿಮಗೆ ಸಿಗುವ ಸರೀಸೃಪವೇ ಈ ಊಸರವಳ್ಳಿ. ನಿಧಾನವಾಗಿ ನಡೆಯುವ ಪರಿ ನೋಡಿದರೆ ಭಯ ತರಿಸುವ ಗೋಸುಂಬೆ ಕ್ಷಣಕ್ಷಣಕ್ಕೆ ತನ್ನ ಬಣ್ಣವನ್ನು ಬದಲಾಯಿಸುವ ತಾಕತ್ತು ಹೊಂದಿದೆ. ಶತ್ರುಗಳ ಹಾದಿ ತಪ್ಪಿಸಲು ತನ್ನ ಸುತ್ತಲಿನ ಪರಿಸರದ ಬಣ್ಣಕ್ಕೆ ತಿರುಗಿಕೊಳ್ಳುವ ವಿಶಿಷ್ಠ ಶಕ್ತಿಯನ್ನು ಹೊಂದಿದೆ ಈ ಪ್ರಾಣಿ.

ಆಂಗ್ಲ ಭಾಷೆಯಲ್ಲಿ chameleon ಎಂದು ಕರೆಯಿಸಿಕೊಳ್ಳುವ ಇದರ ವಂಶ Chamaeleonidae ಪಕ್ಕಾ ಮಾಂಸಹಾರಿಯಾದ ಇದು ನಿಧಾನಗತಿಯಿಂದಲೇ ತನ್ನ ಆಹಾರವನ್ನು ಸಂಪಾದಿಸಿಕೊಳ್ಳುತ್ತದೆ. ಕೀಟಗಳು ಇದರ ಪ್ರಮುಖ ಆಹಾರ. ಸಾಮಾನ್ಯವಾಗಿ ಇದು ಯಾರ ತಂಟೆಗೂ ಹೋಗುವ ಸರೀಸೃಪ ಅಲ್ಲ. ಆದರೆ ಇದರ ಬಗೆಗಿನ ಮಿಥ್ಯಾರೋಪಗಳು ಅದರ ಪ್ರಾಣಕ್ಕೆ ಸಂಚಕಾರ ತಂದಿದೆ ಎನ್ನುವುದು ಖೇದಕರ ವಿಷಯ. ತಮ್ಮ ಶತ್ರುಗಳ ಏಳ್ಗೆಯನ್ನು ಸಹಿಸಲಾರದ ಜನ ಇದನ್ನು ಕೊಂದು ನೇತುಹಾಕಿ ಕೆಲದಿನಗಳನಂತರ ಅದರಿಂದ ಬಸಿಯುವ ರಸವನ್ನು ಬಸಿದಿಟ್ಟುಕೊಂಡು ಕುಡಿಯುವ ಕಾಫಿಗೆ ಒಂದು ಹನಿ ಬೆರೆಸುತ್ತಾರೆ. ಅದಕ್ಕೆ ಕೈಮದ್ದು ಎಂದು ಕರೆಯುತ್ತಾರೆ.

ಹಾಗೆ ಈರ್ಷೆಯಿಂದ ಹಾಕಿದ ಕೈಮದ್ದು ಎದುರಾಳಿಯ ಪ್ರಾಣವನ್ನು ನಿಧಾನ ಗತಿಯಲ್ಲಿ ತಿನ್ನುತ್ತದೆ ಎಂಬುದು ಪ್ರಚಲಿತದಲ್ಲಿರುವ ಕತೆಗಳು. ಹಾಗೆಲ್ಲಾ ಯಾರು ಮಾಡುತ್ತಾರೆ? ಎಂಬುದಕ್ಕೆ ಸಮರ್ಪಕವಾದ ಉತ್ತರವಿಲ್ಲದಿದ್ದರೂ ಅದರ ದುಷ್ಪರಿಣಾಮ ಮಾತ್ರಾ ಈ ನಿರುಪದ್ರವಿ ಸುಂದರ ಜೀವಿಯಮೇಲೆ ಆಗುತ್ತಿರುವುದಂತೂ ಸತ್ಯ.

ಮೊನ್ನೆ ರಸ್ತೆಯಲ್ಲಿ ಹೋಗುತ್ತಿರುವಾಗ ಅಕಸ್ಮಾತ್ ಕೆಲಹುಡುಗರ ಗುಂಪು ಈ ಊಸರವಳ್ಳಿಯ ಹತ್ಯೆಗೆ ಸಿದ್ಧತೆ ನಡೆಸಿದ್ದು ನನ್ನ ಕಣ್ಣಿಗೆ ಬಿತ್ತು. ನಾನು ಬೈಕ್ ನಿಲ್ಲಿಸಿ ವಿಚಾರಿಸಿದಾಗ ಯಾರೋ ಬೈಕ್ ಹತ್ತಿಸಿಕೊಂಡು ಹೋಗಿದ್ದಾರೆ ಎಂಬ ಸಮಜಾಯಿಷಿ ಬಂತಾದರೂ ನನಗೆ ನಂಬಿಕೆ ಬರಲಿಲ್ಲ. ಅದಾಗಲೆ ಒಂದು ಏಟು ಊಸರವಳ್ಳಿಯ ದೇಹದ ಮೇಲೆ ಬಿದ್ದಾಗಿತ್ತು. ನಾನು ತಡೆದು ಊಸರವಳ್ಳಿಯ ಬದುಕಿಸಲು ನೀರು ಚಿಮುಕಿಸಿ ಯತ್ನಿಸಿದೆ ಆದರೆ ಅಷ್ಟರೊಳಗೆ ಬಿದ್ದ ಏಟು ಜೋರಿನದಾಗಿತ್ತಾದ್ದರಿಂದ ನನ್ನ ಕಣ್ಣೆದುರಿಗೆ ಇಹಲೋಕ ಸೇರಿತು ಊಸರವಳ್ಳಿ.

ರಸ್ತೆ ಬದಿಗೊಯ್ದು ಬಿಟ್ಟೆ ಅಕಸ್ಮಾತ್ ಕುಟುಕು ಜೀವ ವಿದ್ದರೆ ಬದುಕಿಕೊಳ್ಳಲಿ ಎಂದು. ನಂತರ ಹುಡುಗರಿಗೆ ತಿಳಿಹೇಳಿದೆ. ಆದರೆ ಅವರು "ಇಲ್ಲಾ ಸಾರ್ ನಿಮಗೆ ಗೊತ್ತಿಲ್ಲ ಅದು ಕೆಟ್ಟ ಪ್ರಾಣಿ" ಎಂದು ಕಂಬಿ ಕಿತ್ತರು. ನಾನು ಅಸಹಾಯಕನಾಗಿ ಗೋಸುಂಬೆಯ ವೇಗದಲ್ಲಿ ಹೊರಟೆ. [ಶಿವಮೊಗ್ಗ]

English summary
Chameleon killing is increasing in Shimoga district as people think that Chameleon is a bad omen. Protecting the chameleon under wild animal protection act also failing in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X