ರಾಹುಲ್ ’ಕೇಸರಿ ಉಗ್ರರು’ ಹೇಳಿಕೆಗೆ ಮೋದಿ ಖಂಡನೆ

ಶನಿವಾರ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನರೇಂದ್ರ ಮೋದಿ, ರಾಹುಲ್ ಗಾಂಧಿಯವರ ಈ ಹೇಳಿಕೆ ಪಾಕಿಸ್ತಾನಕ್ಕೆ ಸಹಾಯಕವಾಗುವಂಥದ್ದು ಎಂದು ಲೇವಡಿ ಮಾಡಿದ್ದಾರೆ. 'ನೆನ್ನೆಯಷ್ಟೇ ಕಾಂಗ್ರೆಸ್‌ನ ರಾಹುಲ್ ಗಾಂಧಿ ಇಂಥ ಹೇಳಿಕೆಗಳನ್ನು ಅಮೆರಿಕಾಕ್ಕೆ ನೀಡಿರುವುದನ್ನು ವಿಕಿಲೀಕ್ಸ್ ಬಿಡುಗಡೆಗೊಳಿಸಿದೆ. ಇದರಿಂದ ಇಷ್ಟು ದಿನ ಅಮೆರಿಕಾ ಏತಕ್ಕಾಗಿ ಪಾಕಿಸ್ತಾನವನ್ನು ಬೆಂಬಲಿಸುತ್ತಿತ್ತು ಎಂಬುದು ಇದೀಗ ಸ್ಪಷ್ಟವಾಗಿದೆ' ಎಂದು ಮೋದಿ ಅಭಿಪ್ರಾಯಪಟ್ಟರು.
ರಾಹುಲ್ ವಿರುದ್ಧ ಉಮಾ ಕಿಡಿ: ಹಿಂದೂ ಸಂಘಟನೆಗಳ ಕುರಿತಂತೆ ಅವಹೇಳನಕಾರಿ ಮಾತುಗಳ ನ್ನಾಡಿದ್ದಾರೆಂದು ಬಿಜಿಪಿಯ ಮಾಜಿ ನಾಯಕಿ ಉಮಾ ಭಾರತಿ ರಾಹುಲ್ ಗಾಂಧಿಯವರನ್ನು ಟೀಕಿಸಿದ್ದಾರೆ. ಅಲ್ಲದೇ, ಮುಂಬೈ ದಾಳಿಯ ಸಂದರ್ಭದಲ್ಲಿ ಹತರಾಗಿದ್ದ ಹೇಮಂತ್ ಕರ್ಕರೆ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನ ನಾಯಕ ದಿಗ್ವಿಜಯ ಸಿಂಗ್‌ರನ್ನೂ ಉಮಾ ಭಾರತಿ ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಆಧುನಿಕ ಜಿನ್ನಾ: ಹಿಂದೂ ಸಂಘಟನೆಗಳನ್ನು ಉಗ್ರರಿಗೆ ಹೋಲಿಸುವ ಮೂಲಕ ರಾಹುಲ್ ಗಾಂಧಿ ಅವರು ಆಧುನಿಕ ಮಹಮ್ಮದ್ ಆಲಿ ಜಿನ್ನಾ ಎನಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಪ್ರವೀನ್ ತೊಗಡಿಯಾ ಹೇಳಿದ್ದಾರೆ. ಪಾಕಿಸ್ತಾನದ ವಕ್ತಾರನಂತೆ ಇದೇ ರೀತಿ ಮುಂದುವರೆದರೆ "ರಾಹುಲ್ ಹಠಾವೋ ಆಂದೋಲನ" ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.












Click it and Unblock the Notifications