• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ವರ್ಷ ಶಾಸಕರು ವಿಧಾನಸೌಧದಲ್ಲಿ ಕಳೆದದ್ದೆಷ್ಟು ದಿನ?

By Prasad
|

ಬೆಂಗಳೂರು, ಡಿ. 14 : ಪರಸ್ಪರ ಕೆಸರೆರಚಾಟ, ಪಕ್ಷಾಂತರ, ಆ ಆಪರೇಷನ್, ಈ ಆಪರೇಶನ್, ಭಿನ್ನಮತೀಯ ಚಟುವಟಿಕೆ, ಶಾಸಕರ ಕಿಡ್ನಾಪ್, ಭೂಹಗರಣ, ಭ್ರಷ್ಟಾಚಾರ, ಕುರ್ಚಿ ಉಳಿಸಿಕೊಳ್ಳಲು ಹೋರಾಟ, ಹೊಡೆದಾಟ ಗುದ್ದಾಟ, ವಿಧಾನಸಭೆಯಲ್ಲೇ ಊಟ-ತಿಂಡಿ-ನಿದ್ದೆಗಳಿಗೇ ಇಡೀ ವರ್ಷವನ್ನು ಮೀಸಲಿಟ್ಟ ಕರ್ನಾಟಕದ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಕಲಾಪವನ್ನು ಎಷ್ಟು ದಿನ ನಡೆಸಿದ್ದಾರೆ ಗೊತ್ತೆ?

ಕೇವಲ 31 ದಿನ ಮಾತ್ರ!

ಅಂದರೆ ಒಂದು ತಿಂಗಳ ಕಾಲಾವಧಿಯಷ್ಟು ಮಾತ್ರ ವಿಧಾನಸೌಧದ ಕಾರಿಡಾರಿನಲ್ಲಿ ಓಡಾಡಿಕೊಂಡಿದ್ದಾರೆ. ಉಳಿದೆಲ್ಲ ದಿನ ಏನು ಮಾಡಿದರು? ಆಯ್ಕೆ ಮಾಡಿದ ಜನರಿಗಾಗಿ ಎಷ್ಟು ಸಮಯ ಮೀಸಲಿಟ್ಟರು ಎಂಬುದನ್ನು ಮೇಲಿನ ಅವರ 'ಬಿಜಿ' ಶೆಡ್ಯೂಲನ್ನು ಗಮನಿಸಿದರೆ ಎಂಥವರ ಅರಿವಿಗೂ ಬರುತ್ತದೆ. ಅಷ್ಟಕ್ಕೂ ಅವರೆಲ್ಲ ಏನೇನು ಮಾಡಿದರು ಎಂಬುದನ್ನು ಜನರೇ ವೀಕ್ಷಿಸಿದ್ದಾರೆ.

ಇದು ವಿಧಾನಸಭೆ ಕಂಡ ಹೀನಾಯ ವರ್ಷವೇನೂ ಅಲ್ಲ. ಈ ವರ್ಷದಲ್ಲಿ 31 ದಿನ ಮಾತ್ರ ಶಾಸಕರ ಹಾಜರಾತಿ ಇದ್ದರೆ, 1971ರಲ್ಲಿ ಕೇವಲ 4 ದಿನ ಶಾಸಕರು ವಿಧಾನಸಭೆಯಲ್ಲಿ ಕಳೆದು ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಅದರ ನಂತರ 1989ರಲ್ಲಿ 21 ದಿನ ಹಾಜರಾತಿ ಬಿದ್ದಿತ್ತು. ಆದರೆ, ಈ ವರ್ಷ 16 ಶಾಸಕರ ಸದಸ್ಯತ್ವವನ್ನು ರದ್ದು ಮಾಡಿದ್ದು ಮಾತ್ರ ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ಸಂಗತಿ.

ಇದನ್ನೂ ಓದಿ : ನಡೆಯದ ಸಂಸತ್ ಕಲಾಪಕ್ಕೆ 171 ಕೋಟಿ ರು. ಬಲಿ

ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಯಡಿಯೂರಪ್ಪನವರು ಕುರ್ಚಿ ಉಳಿಸಿಕೊಳ್ಳಲು ಏನೇನು ಪಡಿಪಾಟಲು ಪಟ್ಟರೆಂದು ಮತ್ತೆ ವಿವರಿಸಿ ಹೇಳುವ ಅಗತ್ಯವಿಲ್ಲ. ವಿಧಾನಸಭೆಯಲ್ಲಿ ಶಾಸಕರ ಗೈರುಹಾಜರಿ ಬಗ್ಗೆ ಕೇಳಿದರೆ, ಎಂದಿನಂತೆ ಅವರು ಬೆರಳೆತ್ತಿ ತೋರಿಸುವುದು ವಿರೋಧ ಪಕ್ಷಗಳ ಕಡೆಗೇ. ವಿರೋಧ ಪಕ್ಷಗಳ ವಿವರಣೆ ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ಅವರು, ಬಿಜೆಪಿಯ ಭ್ರಷ್ಟಾಚಾರದಿಂದಾಗಿ ಜನ ಆಡಳಿತ ಪಕ್ಷದಲ್ಲೇ ವಿಶ್ವಾಸ ಕಳೆದುಕೊಂಡಿದ್ದಾರೆ. ಚರ್ಚೆಗೆ ಬಂದರೆ ಬಣ್ಣ ಎಲ್ಲಿ ಬಯಲಾಗುವುದೋ ಎಂದು ಚರ್ಚೆಗೆ ಬರಲು ಹೆದರುತ್ತಿದ್ದಾರೆ ಎಂದಿದ್ದಾರೆ.

ಅರ್ಧ ವರ್ಷವನ್ನು ಭಿನ್ನಮತೀಯ ಚಟುವಟಿಕೆ, ಭಿನ್ನಮತೀಯರನ್ನು ಸೆಳೆಯಲು ವಿರೋಧ ಪಕ್ಷದವರು ನಡೆಸಿದ ಪರದಾಟ, ರೆಸಾರ್ಟ್ ರಾಜಕಾರಣ, ಡಿನೋಟಿಫಿಕೇಷನ್ ಗುದ್ದಾಟದಲ್ಲೇ ಕಳೆದಿರುವ ನಮ್ಮ ರಾಜಕಾರಣಿಗಳಿಂದ ಹೆಚ್ಚಿನ ಮತ್ತು ಅನಿರೀಕ್ಷಿತ ಉತ್ತರವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.

'ಸರಕಾರದ ಕೆಲಸ ದೇವರ ಕೆಲಸ' ಎಂದು ಕೆತ್ತಲಾಗಿರುವ ವಿಧಾನಸೌಧದಲ್ಲಿ ಕೆಲಸ ಮಾಡುವ ಈ ಜನಪ್ರತಿನಿಧಿಗಳು ಆ ಅಕ್ಷರಗಳಿಗಾದರೂ ಮರ್ಯಾದೆ ನೀಡಬೇಡವೆ? ಕೆಲಸ ಮಾಡಿದ್ದು 31 ದಿನ ಮಾತ್ರ, ಸಂಬಳ ಮಾತ್ರ ಫುಲ್!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In 2010 Karnataka legislators" attendance in Vidhana Soudha is only 31 days. Thats means MLAs have spent only one month in Karnataka assembly in this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more